ಮುಖಪುಟ ಧರ್ಮಗುರುಗಳು / ದಾನಿಗಳು
ಮಹಾ ದಾನಿಗಳು

DONARS

 


"ದಾನ ರತ್ನಾಕರ" ಪೂಜ್ಯ ಶ್ರೀ ದಿ|| ಮಂಡಿ ಹರಿಯಣ್ಣನವರು, ಆಗಿನ ಮೈಸೂರು ಸಂಸ್ಥಾನ ಪ್ರಜಾಪ್ರತಿನಿಧಿ ಸಭಾ ದ ನಿರ್ದೇಶಕರು, ೧೯೧೬ ರಲ್ಲೇ ಬೆಂಗಳೂರಿನಲ್ಲಿ ಉಚಿತವಾಗಿ ವಿದ್ಯಾರ್ಥಿನಿಲಯವನ್ನು ತಮ್ಮದೇ ಕಟ್ಟಡದಲ್ಲಿ ಪ್ರಾರಂಭಿಸಿದ್ದರು. ೧೯೫೬ ರ ವರೆಗೆ ಸುಮಾರು ೪೦ ವರ್ಷಗಳ ಕಾಲ ನಿರಂತರವಾಗಿ ವಿದ್ಯಾರ್ಥಿಗಳನ್ನು ಪೋಷಿಸಿದರು. ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ೧೯೪೩ ರಲ್ಲಿ "ಸಾದು ಮತದ ಸಂಘ”ವನ್ನು ಸಂಸ್ಥಾಪಿಸಿದರು ಮತ್ತು ಸಂಘ ಸಧೃಡವಾಗಿ ಬೆಳೆಯಲು ತಮ್ಮ ಜೀವಿತಾವಧಿಯುದ್ದಕ್ಕೂ ಸಹಕಾರವಿತ್ತ ಪೂಜ್ಯ ಶ್ರೀ ದಿ|| ಮಂಡಿ ಹರಿಯಣ್ಣನವರ ಸುಕಾರ್ಯ ಸ್ಮರಣೀಯ.
ಗೌರಿಬಿದನೂರಿನ ಶ್ರೀಮತಿ ಚಿಕ್ಕಮ್ಮ ಮತ್ತು ಶ್ರಿಯುತ ವೆಂಕಟರಮಣಗೌಡ ರವರು, ಪಟೇಲರು, ಕರೇಕಲ್ಲಹಳ್ಳಿ ಇವರು ೧೯೮೮ ರಲ್ಲಿ ಹಿಂದೂ ಸಾದರ ವಿದ್ಯಾರ್ಥಿನಿಲಯಕ್ಕಾಗಿ ೨೦ ಗುಂಟೆ ಸ್ವತ್ತನ್ನು ದಾನವಾಗಿ ನೀಡಿರುತ್ತಾರೆ.

ಶ್ರಿಯುತ ದಿ. ಪಿ.ಕೆ ನಂಜುಂಡಯ್ಯನವರು ಮಧುಗಿರಿಯ ಶ್ರೀಮತಿ ಪುಟ್ಟಮ್ಮ ಮತ್ತು ಶ್ರೀ ಕಪ್ಪಣ್ಣನವರ ಪುತ್ರರಾದ ಶ್ರಿಯುತರು ೧೯೪೮ ರಲ್ಲಿ ನಮ್ಮ ಮತಬಾಂಧವರ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಮಧುಗಿರಿಯಲ್ಲಿ ಹಾಸ್ಟೆಲ್ ನಡೆಸಲು ತಾವು ವಾಸವಾಗಿದ್ದ ಮನೆಯನ್ನೇ ದಾನವಾಗಿ ಕೊಟ್ಟಿರುತ್ತಾರೆ. ಶ್ರಿಯುತ ನಂಜುಂಡಯ್ಯನವರ ಪುತ್ರರಾದ ದಿ.ಶ್ರೀ ಎಂ.ಎನ್.ಬಸಪ್ಪ ಹಾಗೂ ದಿ.ಶ್ರೀ ಕಪ್ಪಣ್ಣನವರು ೨೦-೦೧-೭೩ ರಲ್ಲಿ ಸಂಘದ ಹೆಸರಿಗೆ ದಾನವಾಗಿ ನೊಂದಣಿ ಮಾಡಿಸಿಕೊಟ್ಟಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಮಹಾಲಕ್ಷ್ಮಿಪುರಂ ನ ನಿವೇಶನದಲ್ಲಿ 2002 ರಲ್ಲಿ ಮಂಡಿ ಹರಿಯಣ್ಣನವರ ಕುಟುಂಬದವರು ಸುಸಜ್ಜಿತ "ಪೂಜ್ಯ ಮಂಡಿ ಹರಿಯಣ್ಣನವರ ಸ್ಮಾರಕ ಭವನ" ವನ್ನು ಸುಮಾರು ೭-೮ ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಭವ್ಯ ಸಭಾಂಗಣವನ್ನು ನಿರ್ಮಿಸಿ ಪೂಜ್ಯ ಹರಿಯಣ್ಣನವರ ನೆನಪಿನ ಕೊಡುಗೆಯಾಗಿ ಸಂಘಕ್ಕೆ ಕೊಟ್ಟಿದ್ದಾರೆ.


ಶ್ರೀಮತಿ ಚನ್ನಮ್ಮ ಮತ್ತು ಶ್ರೀ ಡಿ.ರಾಮಯ್ಯ ನವರು ಹೊಳಕಲ್ಲು, ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಗಂಕಾರನಹಳ್ಳಿಯ ಶ್ರೀ ದೊಡ್ಡಯ್ಯ ಮತ್ತು ಶ್ರೀಮತಿ ನಂಜಮ್ಮ ನವರ ಪುತ್ರರಾದ ಶ್ರೀಯುತ ಶ್ರೀ ಡಿ.ರಾಮಯ್ಯ ನವರು ೧೯೯೭ ರಲ್ಲಿ ತುಮಕೂರು ವಿದ್ಯಾರ್ಥಿನಿಲಯದ ಮೊದಲನೇ ಅಂತಸ್ತಿನಲ್ಲಿ ೧೮ ಕೊಠಡಿಗಳನ್ನು ಸುಮಾರು ೨೫ ಲಕ್ಷ ರೂ ವೆಚ್ಚದಲ್ಲಿ ಉಚಿತವಾಗಿ ನಿರ್ಮಿಸಿ ಕೊಟ್ಟಿರುತ್ತಾರೆ.
೨೦೧೩ ರಲ್ಲಿ ಹೊಳಕಲ್ಲು ಗ್ರಾಮದಲ್ಲಿ ೩.೦೩ ಎಕರೆ ಜಮೀನನ್ನು (ಈಗಿನ ಮಾರುಕಟ್ಟೆ ಮೌಲ್ಯ ಸುಮಾರು ೧ ಕೋಟಿ ರೂಗಳು) ಉದಾರವಾಗಿ ದಾನನೀಡಿ ಸಂಘಕ್ಕೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ.

ಶ್ರೀಮತಿ ಪದ್ಮಾ ಚಂದ್ರು ಮತ್ತು ಡಾ|| ಮುಖ್ಯಮಂತ್ರಿ ಚಂದ್ರುರವರು ೧೯೭೦ ರಲ್ಲೇ ಬೆಂಗಳೂರಿನ ಸಮುದಾಯ ಭವನದ ಮೇಲ್ಚಾವಣಿಗಾಗಿ ಸಿನಿಮಾ ಕಲಾವಿದರ ಸಹಾಯಾರ್ಥ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿ ಹಣ ಸಂದಾಯ ಮಾಡಿರುತ್ತಾರೆ. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ೨೦೦೫ ರಲ್ಲಿ ತಮ್ಮ ವಿಶೇಷ ಅನುಧಾನದಲ್ಲಿ ಬೆಂಗಳೂರಿನ ವಿದ್ಯಾರ್ಥಿನಿಲಯ ಕೊಠಡಿಗಳ ನಿರ್ಮಾಣಕ್ಕೆ ೨೦ ಲಕ್ಷ ರೂ, ಗೌರಿಬಿದನೂರು ಗ್ರಂಥಾಲಯಕ್ಕೆ ೧೫ ಲಕ್ಷ ರೂ, ತುಮಕೂರು ಸಮುದಾಯ ಭವನಕ್ಕೆ ೨೦ ಲಕ್ಷ ರೂಗಳ ಹಣ ಸಹಾಯ ನೀಡಿದ್ದಾರೆ. ೨೦೦೮ ರಲ್ಲಿ ಮಧುಗಿರಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ೧೫ ಲಕ್ಷ, ಶಿರಾದಲ್ಲಿ ಸಮುಧಾಯ ಭವನ ನಿರ್ಮಾಣಕ್ಕೆ ೨೦ ಲಕ್ಷ ರೂ, ಕೊರಟಗೆರೆ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ರೂ ಮತ್ತು ಕೊಡಗೇನಹಳ್ಳಿ ಸಮುದಾಯ ಭವನಕಾಗಿ ೧೦ ಲಕ್ಷರೂಗಳ ಅನುದಾನ ಸೇರಿ ಒಟ್ಟು ೧.೧೫ ಕೋಟಿ ರೂಗಳ ಹಣ ವಿನಿಯೋಗಿಸಿದ್ದಾರೆ.

ಶ್ರೀಮತಿ ಪುಷ್ಪಾ ಮತ್ತು ರವಿಶಂಕರ್ ಸಿ., ತುಮಕೂರು,ಬ್ಯಾಂಕ್ ಚಿಕ್ಕಣ್ಣನವರ ಮಕ್ಕಳಾದ ಶ್ರೀಯುತ ರವಿಶಂಕರ್ ರವರು ೧೯೧೪ ರಲ್ಲಿ ತುಮಕೂರಿನ ದೇವರಾಯಪಟ್ಟಣದಲ್ಲಿ ಸುಮಾರು ೩೦ ಲಕ್ಷ ರೂ ಬೆಲೆ ಬಾಳುವ ೩೦ * ೪೦ ಅಡಿ ಅಳತೆಯ ನಿವೇಶನವನ್ನು ವಿದ್ಯಾರ್ಥಿನಿಯರ ವಸತಿನಿಲಯ ನಿರ್ಮಾಣಕ್ಕಾಗಿ ದಾನವಾಗಿ ನೀಡಿದ್ದು ಸಂಘಕ್ಕೆ ನೋಂದಣಿ ಮಾಡಿಸಿಕೊಟ್ಟಿರುತ್ತಾರೆ.

ದೊಡ್ಡಮಾಲೂರಿನ ಶ್ರೀಮತಿ ಗಂಗಮ್ಮ ಮತ್ತು ಶ್ರಿಯುತ ವಿ.ಕೆ. ಸಿದ್ದೇಗೌಡ ರವರು ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ೩೦ * ೪೦ ಅಡಿ ಅಳತೆಯ ಒಂದು ನಿವೇಶನವನ್ನು ದಾನವಾಗಿ ನೀಡಿರುತ್ತಾರೆ.


ಶ್ರಿಯುತ ಲಕ್ಷ್ಮೀಪತಿ ಬಿ.ಎನ್. ಅಧ್ಯಕ್ಷರು ಸಾಧು ಸಂಘಮ ಪತ್ತಿನ ಸಹಕಾರ ಸಂಘ (ರಿ), ಬೆಂಗಳೂರು ರವರು ಮಧುಗಿರಿ ಪಟ್ಟಣದ ಗೌರಿಬಿದನೂರು ರಸ್ತೆಯ ಹೊಸ ಬಡಾವಣೆಯಲ್ಲಿ ೩೦*೪೦ ಅಡಿ ಅಳತೆಯ ನಿವೇಶನವನ್ನು ವಿದ್ಯಾರ್ಥಿನಿಲಯ ನಿರ್ಮಾಣಕ್ಕಾಗಿ ದಾನವಾಗಿ ನೀಡಿದಾರೆ.

ಹಿಂದೂಪುರ ತಾಲ್ಲೂಕು ಹಿಂದೂಸಾದರ ಕ್ಷೇಮಾಭಿವೃದ್ದಿ ಸಂಘ, ಹಿಂದೂಪುರ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ನಿರ್ಮಿಸಿರುವ ವಿದ್ಯಾರ್ಥಿನಿಲಯದ ಕೊಠಡಿಗಳ ದಾನಿಗಳು:



ಹಿಂದೂಸಾದರ ಕ್ಷೇಮಾಭಿವೃದ್ದಿ ಸಂಘ, ತುಮಕೂರು ತಾಲ್ಲೂಕು ಶಾಖೆ ನಿರ್ಮಿಸುತ್ತಿರುವ ತುಮಕೂರು ವಿದ್ಯಾರ್ಥಿನಿಯರ ವಸತಿ ನಿಲಯದ ಕೊಠಡಿಗಳ ದಾನಿಗಳು:

 

> ಶ್ರೀಯುತ ಡಾ|| ಶಿವು ರವರು, ಖ್ಯಾತ ವೈದ್ಯರು , ಅಮೇರಿಕಾ
ಶ್ರಿ ಎಂ.ಎಸ್. ಮಲ್ಲಯ್ಯನರ ಮಕ್ಕಳು, ಮೈದನಹಳ್ಳಿ , ಮಧುಗಿರಿ ತಾಲ್ಲೂಕು
ಶ್ರೀ ಬಿ.ಆರ್. ರಮೇಶ್
ಕಮಲಾ ಇಂಡಸ್ಟ್ರೀಸ್, ಚೌಡಯ್ಯನಪಾಳ್ಯ, ಕ್ಯಾತಸಂದ್ರ ಅಂಚೆ, ತುಮಕೂರು.
ಶ್ರಿ. ಜಿ. ತಿಮ್ಮಾರೆಡ್ಡಿ,
ಪ್ರಕೃತಿ ಸಾಲ್ವೆಕ್ಸ್ ಲಿ., ಹೆಗ್ಗೆರೆ, ತುಮಕೂರು.
ಶ್ರೀ ಪಿ. ಮೂರ್ತಿ ರವರು
ಅಧ್ಯಕ್ಷರು ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ರಿ), ತುಮಕೂರು
ಶ್ರೀ. ರವಿಕುಮಾರ್. ಡಿ.ಈ.
ಹಿಂದೂಸ್ಥಾನ್ ವಾಟರ್ ಪ್ರೂಪಿಂಗ್ ಸರ್ವೀಸಸ್, ರಾಜರಾಜೇಶ್ವರಿ ನಗರ, ಬೆಂಗಳೂರು.
ಶ್ರೀ. ಸುರೇಶ್ ಟಿ.ಸಿ.,
ಮಂಜುನಾಥ ರೈಸ್ ಮಿಲ್, ಮಂಜುನಾಥ ಚೌಲ್ಟ್ರಿ, ಬಿ.ಹೆಚ್. ರಸ್ತೆ, ತುಮಕೂರು.
ಶ್ರೀ. ಶ್ರೀಧರ್ ಹೆಚ್.
ಶ್ರೀದೇವಿ ಪೌಡರ್ ಕೋಟಿಂಗ್ ಇಂಡಸ್ಟ್ರೀಸ್, ಜೂಜುವಾಡಿ, ಹೊಸೂರು ತಾ., ತಮಿಳುನಾಡು.
ಶ್ರೀ. ಎ.ಡಿ. ಬಲರಾಮಯ್ಯನವರು
ಮಾಜಿ ಪುರಸಭಾ ಅಧ್ಯಕ್ಷರು, ಪ್ರಥಮ ದರ್ಜೆ ಗುತ್ತಿಗೆದಾರರು, ಕೊರಟಗೆರೆ.
ಶ್ರೀ. ರವಿಕುಮಾರ್ ಪಿ.,
ಮಹಾನಗರ ಪಾಲಿಕೆ ಸದಸ್ಯರು,ತುಮಕೂರು ಮತ್ತು ಪ್ರೊ. ಡೆಲ್ಟಾ ಪ್ರಾಡಕ್ಟ್ಸ್, ಗೋಕುಲಾ ಬಡಾವಣೆ, ತುಮಕೂರು.
ಶ್ರೀಮತಿ ಸರೋಜ ರಾಜು
ಮಾಜಿ ಉಪಾಧ್ಯಕ್ಷರು, ಸ್ವಾ.ವಿ.ಪ.ಸ.ಸಂಘ, ತುಮಕೂರು
ಶ್ರೀ. ಶಿವಶಂಕರ್ ಗಂಗಸಂದ್ರರವರು
ವಾಣಿಜ್ಯೋದ್ಯಮಿಗಳು, ಬೆಂಗಳೂರು.
ಶ್ರೀ. ಸಿ. ಕಾಂತರಾಜುರವರು
ರಾಜಕೀಯ ಮುಖಂಡರು, ಮಾಗಡಿ
ಶ್ರೀ ಶಿವಣ್ಣನವರು
ನಿವೃತ್ತ ಶಿಕ್ಷಕರು (ಕುರೂಡಿ), ಬೆಂಗಳೂರು.
ಶ್ರೀ ವೆಂಕಟೇಶಪ್ಪ ನವರು, ಬೇಗೂರು.

ಹಿಂದೂಸಾದರ ಕ್ಷೇಮಾಭಿವೃದ್ದಿ ಸಂಘದ ವಿವಿಧ ತಾಲ್ಲೂಕು ಶಾಖೆಗಳಿಗೆ ಉದಾರ ಹಣ ಸಹಕಾರ ನೀಡಿದ ದಾನಿಗಳು :

ಡಾ. ಮೃತ್ಯುಂಜಯಣ್ಣ ನವರು
ಖ್ಯಾತ ತಜ್ಘ್ನ ವೈದ್ಯರು, ಬೆಂಗಳೂರು.
ಶ್ರೀ. ಎಂ.ಕೆ. ನಂಜುಂಡಯ್ಯ,
ಮಾಜಿ ಪುರಸಭಾ ಅಧ್ಯಕ್ಷರು, ಮಧುಗಿರಿ, ಪ್ರೊ. ಶಾಂತಲಾ ಚಿತ್ರಮಂದಿರ, ಕಾರ್ಡಿಯಲ್ ಇಂಟರ್‌ನ್ಯಾಷನಲ್ ಸ್ಕೂಲ್, ಮಧುಗಿರಿ.
ಶ್ರೀ ಚೆನ್ನಕೇಶವರವರು
ವಾಣಿಜ್ಯೋದ್ಯಮಿಗಳು, ಬೇಗೂರು, ಬೆಂಗಳೂರು.

ಹಿಂದೂಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು,

ಶ್ರೀಮಾನ್ ಮಂಡಿ ಹರಿಯಣ್ಣ ಸ್ಮಾರಕ ಬಾಲಕರ ವಿದ್ಯಾರ್ಥಿನಿಲಯದ ನೆಲ ಅಂತಸ್ತಿನ ಕಟ್ಟಡದ ಕೊಠಡಿಗಳ ದಾನಿಗಳು :

೧. ಶ್ರೀಮತಿ ಸುಶೀಲಮ್ಮ ಮತ್ತು ಶ್ರೀ ಕೆ. ನಂಜುಂಡಪ್ಪ ನವರು, ಬಸವನಗುಡಿ, ಬೆಂಗಳೂರು. ಶ್ರೀಮತಿ ನಂಜಮ್ಮನವರು ಮತ್ತು ಶ್ರೀಮತಿ ಈರಮ್ಮ ಹಾಗೂ ಶ್ರೀ ಎಂ.ಎಸ್. ಮಲ್ಲಯ್ಯನವರು, ಬೆಂಗಳೂರು.
೨. ಶ್ರೀಮತಿ ಈರಮ್ಮನವರು ಮತ್ತು ಶ್ರೀ ಎಲ್. ಲಿಂಗಣ್ಣನವರು, ಬೆಂಗಳೂರು.
೩. ಶ್ರೀಮತಿ ಸಾಕಮ್ಮ ಮತ್ತು ಶ್ರೀ ಬಿ. ಬಸಪ್ಪನವರು, ಟರ್ಫ ಕ್ಲಬ್, ಬೆಂಗಳೂರು.
೪. ಶ್ರೀಮತಿ ಜಯಶಾರದಮ್ಮ ಮತ್ತು ಶ್ರೀ ಕೆ. ವೀರಣ್ಣನವರು, ಕೆಂಗೇರಿ ಹಾಗೂ ಶ್ರಿಮತಿ ದೇವೀರಮ್ಮ ಮತ್ತು ಶ್ರೀ ಕೆ. ನಂಜುಂಡಪ್ಪನವರು, ಬೆಂಗಳೂರು
೫. ಶ್ರೀಮತಿ ಚಂದ್ರಮ್ಮ ಮತ್ತು ಶ್ರೀ ಎಂ. ಸಂಜೀವಯ್ಯನವರು, ಕಡಕೊಳ ಹಾಗೂ ಶ್ರೀ ಅಡಿಕೆ ಮಂಡಿ ಮುದ್ದುವೀರಪ್ಪನವರು, ಶ್ರೀ ಬಿ. ಚಂದ್ರಪ್ಪನವರು, ಬೆಂಗಳೂರು.
೬. ಶ್ರೀಮತಿ ಯಶೋದಮ್ಮ ಮತ್ತು ಡಾ|| ಹೆಚ್.ಆರ್. ಕಾಂತರಾಜು ರವರು, ಕೊರಟಗೆರೆ.
೭. ಶ್ರೀಮತಿ ರಂಗಮ್ಮ ಮತ್ತು ಶ್ರೀ ರಂಗಪ್ಪನವರು, ಗುಡೇಮಾರನಹಳ್ಳಿ.
೮. ಶ್ರೀಮತಿ ಕೆ.ವಿ. ವಿಜಯಲಕ್ಷ್ಮಿ ಮತ್ತು ಶ್ರೀ ಕೆ.ಜಿ. ವೀರಣ್ಣನವರು, ಬೆಂಗಳೂರು.

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ವಿದ್ಯಾರ್ಥಿನಿಲಯದ ೨ ನೇ ಅಂತಸ್ತಿನಲ್ಲಿ ಕೊಠಡಿಗಳನ್ನು ಕಟ್ಟಲು ನೆರವಾದ ದಾನಿಗಳು:


ಹಿಂದೂಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು,

ಶ್ರೀಮಾನ್ ಮಂಡಿ ಹರಿಯಣ್ಣ ಸ್ಮಾರಕ ಬಾಲಕರ ವಿದ್ಯಾರ್ಥಿನಿಲಯದ ಮೊದಲನೇ ಅಂತಸ್ತಿನ ಕಟ್ಟಡದ ಕೊಠಡಿಗಳ ದಾನಿಗಳು:


೧. ದಿವಂಗತ ಪಟೇಲ್ ನಾರಾಯಣಪ್ಪನವರ ಮಗ ಶ್ರೀ ಪಟೇಲ್ ಎನ್. ಚನ್ನಪ್ಪ ಮತ್ತು ಶ್ರೀಮತಿ ವಿಜಯ, ಬೇಗೂರು.
೨. ದಿವಂಗತ ಪಟೇಲ್ ರಾಮಯ್ಯನವರ ಮಗ ಶ್ರೀ ಪಟೇಳ್ ಬಿ.ಆರ್. ಚನ್ನಕೇಶವ ಮತ್ತು ಶ್ರೀಮತಿ ಪರಿಮಳ, ಬೇಗೂರು.
೩. ಶ್ರೀಮತಿ ಉಷಾ ಮತ್ತು ಶ್ರೀ ಪಟೇಲ್ ಎನ್. ನಾಗರಾಜು ಹಾಗೂ ಶ್ರಿಮತಿ ರಾಜೇಶ್ವರಿ ಮತ್ತು ಶ್ರೀ ಪಟೇಲ್ ಎನ್. ಲಕ್ಷ್ಮಣ್, ಬೇಗೂರು.
೪.ದಿವಂಗತ ಪಟೇಲ್ ಕೃಷ್ಣಪ್ಪನವರ ಧರ್ಮಪತ್ನಿ ಶ್ರೀಮತಿ ಜಯಮ್ಮನವರು.
೫. ಶ್ರೀಮತಿ ಪುಟ್ಟತಾಯಮ್ಮ ಮತ್ತು ಶ್ರೀ ಎನ್. ದೊಡ್ಡವೀರಯ್ಯನವರು, ಹೊನ್ನಸಂದ್ರ ಇವರ ಜ್ಞಾಪಕಾರ್ಥ ಡಾ|| ರಾಜಣ್ಣ ಮತ್ತು ಶ್ರೀಮತಿ ಸರ್ವಮಂಗಳರವರು, ನೆಲಮಂಗಲ.
೬.ದಿವಂಗತ ಚಿಕ್ಕಣ್ಣನವರು ಮತ್ತು ಶ್ರೀಮತಿ ಸಿದ್ದಲಿಂಗಮ್ಮನವರ ಮಗ ಶ್ರೀ ಸಿ. ಸಿದ್ದರಾಜುರವರು, ಹೊಳಕಲ್ಲು,ತುಮಕೂರು ಜಿಲ್ಲೆ.
೭. ದಿವಂಗತ ಶ್ರೀಮತಿ ಮಲ್ಲಮ್ಮ ಮತ್ತು ಶ್ರೀ ಸಿದ್ದಪ್ಪ ನವರ ಮಗಳು ಶ್ರೀಮತಿ ಚೆಲ್ಲಮ್ಮ ಮತ್ತು ಶ್ರೀ ಡಿ.ಎಸ್. ವೆಂಕಟೇಶ್ ರವರು, ಚಿಕ್ಕ ಬೇಗೂರು.
೮. ದಿವಂಗತ ಪಟೇಲ್ ನಾರಾಯಣಪ್ಪನವರ ಮಗ ಶ್ರೀ ಪಟೇಲ್ ಎನ್. ಗೋವಿಂದಪ್ಪ ಮತ್ತು ಶ್ರೀಮತಿ ವಿ. ರಾಧಾ ರವರ ಮಗ ಶ್ರೀ ಜಿ. ಕಿರಣ್ ಪಟೇಲ್, ಬೇಗೂರು.
೯.ದಿವಂಗತ ಶ್ರೀಮತಿ ಗಿರಿಜಮ್ಮ ಮತ್ತು ದಿವಂಗತ ಶ್ರ್ ಡಿ.ಎಸ್. ಶಂಕರಪ್ಪ ನವರ ಜ್ಞಾಪಕಾರ್ಥ ಅವರ ಮಕ್ಕಳಾದ ಶ್ರೀಮತಿ ಮತ್ತು ಶ್ರೀ ಎಸ್. ಸುರೇಂದ್ರಬಾಬು ಮತ್ತು ಶ್ರೀಮತಿ/ಶ್ರೀ ಎಸ್. ರವೀಂದ್ರ ಬಾಬು ರವರು,ಚಿಕ್ಕಬೇಗೂರು.
೧೦. ಶ್ರೀಮತಿ ಪಾಪಮ್ಮ ಮತ್ತು ಶ್ರೀ ಬೆಟ್ಟದ ಮುದ್ದಪ್ಪ ನವರು ಮತ್ತು ಮಕ್ಕಳು, ಬೇಗೂರು.


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ವಿದ್ಯಾರ್ಥಿನಿಲಯದ ಮೊದಲನೇ ಅಂತಸ್ತಿನಲ್ಲಿ ಕೊಠಡಿಗಳನ್ನು ಕಟ್ಟಲು ನೆರವಾದ ದಾನಿಗಳು:

11. ಶ್ರೀಮತಿ ಲಕ್ಷ್ಮೀದೇವಮ್ಮ ಮತ್ತು ದಿ. ಪಟೇಲ್ ರಾಮಯ್ಯನವರು
ಬೇಗೂರು, ಬೆಂಗಳೂರು ದಕ್ಷಿಣ ತಾಲ್ಲೂಕು.

೧, ಶ್ರೀ ಹರಿಹರೇಶ್ವರ ರವರು, ಬೆಂಗಳೂರು
೨, ಶ್ರೀಮತಿ ಗಂಗಮ್ಮ ಮತ್ತು ಜಿ. ರಾಮಯ್ಯ ನವರು, ಗೊಟಕನಾಪುರ
೩, ಶ್ರೀಮತಿ ಲಕ್ಷ್ಮೀದೇವಮ್ಮ ಮತ್ತು ಶ್ರೀ ನಂಜುಂಡಪ್ಪನವರು, ಮಾಗೋಡು
೪, ಶ್ರೀಮತಿ ಸಿದ್ದಲಿಂಗಮ್ಮ ಮತ್ತು ಶ್ರೀ. ಬಿ.ಡಿ ಕಾಳಪ್ಪ ನವರು, ಬೆಂಗಳೂರು
೫, ಶ್ರೀಮತಿ ಪದ್ಮಾವತಮ್ಮ ಮತ್ತು ಶ್ರೀ.ಪಿ ಮಲ್ಲಣ್ಣ ನವರು, ಅತ್ತಿಬೆಲೆ
೬, ಶ್ರೀಮತಿ ಅಕ್ಕಯ್ಯಮ್ಮನವರು ಮತ್ತು ಶ್ರೀ. ಬಿ. ಪತ್ರಪ್ಪ ನವರು, ಅತ್ತಿಬೆಲೆ
೭, ಶ್ರೀಮತಿ ರತ್ನಮ್ಮ ಮತ್ತು ಶ್ರೀ. ಎಂ. ಚಿಕ್ಕಣ್ಣ ನವರು, ಬೆಂಗಳೂರು
೮, ಶ್ರೀಮತಿ ಎಂ. ಸುಶೀಲಮ್ಮ ನವರು ಮತ್ತು ಶ್ರೀ.ಬಿ.ಕೆ. ಮಲ್ಲಯ್ಯನವರು, ಬೆಂಗಳೂರು
೯, ಶ್ರೀಮತಿ ದೊಡ್ಡಲಕ್ಕಮ್ಮ ನವರು ಮತ್ತು ಶ್ರೀ. ಜೆ.ಓದಪ್ಪ ನವರು, ಗೊಟಕನಾಪುರ
೧೦, ಶ್ರೀಮತಿ ಅಮ್ಮಯ್ಯ ನವರು ಮತ್ತು ಶ್ರೀ.ಎ ಗೋವಿಂದಪ್ಪ ನವರು, ಬೆಂಗಳೂರು.