ಮುಖಪುಟ ವಾಣಿಜ್ಯ ಕಟ್ಟಡಗಳು
ವಾಣಿಜ್ಯ ಕಟ್ಟಡಗಳು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತುಮಕೂರು ಶಾಖೆ

ತುಮಕೂರು ವಾಣಿಜ್ಯ ಸಂಕೀರ್ಣ ಕಟ್ಟಡ


ತುಮಕೂರಿನ ಬಟವಾಡೆ ವೃತ್ತದಲ್ಲಿನ ನಿವೇಶನ ಕೊಳ್ಳುವಲ್ಲಿ ದಿ|| ಪೂಜ್ಯ ಶ್ರೀ ಲಕ್ಷ್ಮೀನರಸಿಂಹಯ್ಯ ನವರ ಪಾತ್ರ ಅತ್ಯಂತ ಸ್ಮರಣೀಯ. ಈ ನಿವೇಶನವು ಮೂಲತಃ ಕ್ತಾತ್ಸಂದ್ರದ ಜಲ್ಲಿ ಗುಂಡಪ್ಪನವರದ್ದು. ಸಮಾಜದ ಹಿರಿಯ ರಾಜಕೀಯ ಧುರೀಣರು , ಸದ್ಗುಣ ಸಂಪನ್ನರು, ಮಾಜಿ ವಿದ್ಯುತ್ ಖಾತೆ ಸಚಿವರಾಗಿದ್ದ, ದಿ|| ಪೂಜ್ಯ ಶ್ರೀ ಲಕ್ಷ್ಮೀನರಸಿಂಹಯ್ಯ ನವರಲ್ಲಿ ಮಾರಾಟದ ಬಗ್ಗೆ ಪ್ರಸ್ತಾಪಿಸಿದಾಗ, ಲಕ್ಷ್ಮೀನರಸಿಂಹಯ್ಯ ನವರು ನನಗೆ ಬೇಡ ನಮ್ಮ ಸಂಘಕ್ಕೆ ಕೊಡಿಸಬೇಕೆಂದು ತೀರ್ಮಾನಿಸಿದ ಫಲವಾಗಿ ನಮ್ಮ ಸಂಘಕ್ಕೆ ಈ ಸ್ವತ್ತು ಸುಮಾರು ೩೭ ಗುಂಟೆ 1970 ರಲ್ಲಿ ಕ್ರಯವಾಯಿತು. ತದನಂತರ ಸದರಿ ನಿವೇಶನದ ಉತ್ತರ ಭಾಗದಲ್ಲಿದ್ದ ಸ್ವತ್ತಿನ ಮಾಲೀಕರು ಕೋರ್ಟಿನಲ್ಲಿ ದಾವೆ ಹೂಡಲಾಗಿ ಸುಮಾರು 12 ವರ್ಷಗಳ ಕಾಲ ನಮ್ಮ ಸಮಾಜದ ವಕೀಲರಾದ ಶ್ರೀಯುತ ಪಿ.ಜಿ. ರಾಮಚಂದ್ರಪ್ಪ ರವರು ಉಚಿತವಾಗಿ ವಕಾಲತ್ತು ವಹಿಸಿ ನಮ್ಮ ಪರವಾಗಿ ತೀರ್ಪು ಬರಲು ಸಹಕರಿಸಿರುತ್ತಾರೆ.


ಕಾಲಾಂತರದಲ್ಲಿ ತುಮಕೂರು ನಗರಾಭಿವೃದಿ ಪ್ರಾಧಿಕಾರದ ಅಧಿಕಾರಿಗಳು ಕುತಂತ್ರದಿಂದ ಸದರಿ ಸ್ವತ್ತನ್ನು ಸಿ.ಡಿ.ಪಿ ಯಲ್ಲಿ ಆಟದ ಮೈದಾನ ಮತ್ತು ಉದ್ಯಾನವನಕ್ಕೆಂದು ಮೀಸಲಿಟ್ಟು ನಮಗೆ ನಿರುಪಯೋಗವಾಗುವಂತೆ ಮಾಡಿದ್ದರು. ಆ ಸಮಯದಲ್ಲಿ ದಿ|| ಲಕ್ಷ್ಮೀನರಸಿಂಹಯ್ಯನವರು ಆಸಕ್ತಿ ವಹಿಸಿ, ಸದರಿ ಅಧಿಕಾರಿಯನ್ನು ಅದೇ ಕಾರಣಕ್ಕೆ ವರ್ಗಾವಣೆ ಮಾಡಿಸಿ, ಸದರಿ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ-೪ ಹಾದುಹೊಗಿದ್ದು ಉಳಿದಂತೆ ಸುಮಾರು ೨೦ ಗುಂಟೆ ಜಾಗ ವನ್ನು ಸರ್ಕಾರದ ಮಟ್ಟದಲ್ಲಿ ಸದರಿ ಜಾಗವನ್ನು 1997 ರಲ್ಲಿ ವಾಣಿಜ್ಯ ಉಪಯೋಗಕ್ಕಾಗಿ ಪರಿವರ್ತಿಸಿ ಕೊಟ್ಟಿರುತ್ತಾರೆ.


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತುಮಕೂರು ಶಾಖೆ ವತಿಯಿಂದ ತುಮಕೂರಿನ ಬಟವಾಡಿ ವೃತ್ತದಲ್ಲಿನ ನಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಸನ್ಮಾನ್ಯ ಡಾ|| ಮುಖ್ಯಮಂತ್ರಿ ಚಂದ್ರು ರವರ ಅನುದಾನ ೨೦ ಲಕ್ಷ ರೂಗಳು ಮತ್ತು ಕೇಂದ್ರ ಸಂಘದ ವತಿಯಿಂದ ೪೫ ಲಕ್ಷ ರೂಗಳು ಹಾಗೂ ಸಮಾಜದ ದಾನಿಗಳಿಂದ ದೇಣಿಗೆ ಹಣದಿಂದ ೨೦೦೨-೨೦೦೩ ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾಮಗಾರಿ ೨೦೦೪ ರಲ್ಲಿ ಪೂರ್ಣಗೊಂಡು ಒಟ್ಟು ೧೪ ಸಾವಿರ ಚದುರ ಅಡಿ ವಿಸ್ತೀರ್ಣದ ಎರಡು ಅಂತಸ್ಥಿನ ವಾಣಿಜ್ಯ ಸಂಕೀರ್ಣ ಕಟ್ಟಡ ನಗರದ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿದೆ. ಪ್ರಸ್ತುತ ವಾಣಿಜ್ಯ ಸಂಕೀರ್ಣ ಕಟ್ಟಡದ ೧೪ ಮಳಿಗೆಗಳಿಂದ ಸುಮಾರು ೨.೭೫ ಲಕ್ಷ ರೂಗಳು ಬಾಡಿಗೆ ಸಂದಾಯವಾಗುತ್ತಿದೆ.