ಮುಖಪುಟ ಬಾಲಕರ ವಿದ್ಯಾರ್ಥಿ‍ ನಿಲಯಗಳು
Hostels in Tumakuru
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತುಮಕೂರು
ಬಾಲಕರ ವಿದ್ಯಾರ್ಥಿನಿಲಯದ ನಿಲಯ-ಸಮಿತಿ ಸದಸ್ಯರುಗಳು ವಿವರ
TUMKUR BOYS HOSTEL COMMITTEE MEMBERS

ಬಾಲಕರ ವಿದ್ಯಾರ್ಥಿನಿಲಯದ ನಿಲಯ-ಸಮಿತಿ ಸದಸ್ಯರುಗಳು ವಿವರ

TUMKUR BOYS HOSTEL COMMITTEE MEMBERS

1. ಶ್ರೀ ಸಿ. ನಂಜುಂಡಯ್ಯ, ನಿಲಯ ಸಮಿತಿ ಅಧ್ಯಕ್ಷರು
ಮಾತೃಕೃಪ. ನೃಪತುಂಗ ಎಕ್ಸ್‌ಟೇಷನ್, ೧ನೇ ಮೈನ್ ೧ನೇ ಕ್ರಾಸ್ , ಶೆಟ್ಟಿಹಳ್ಳಿ ಮೈನ್ ರೋಡ್ ತುಮಕೂರು. ಮೊ ೯೮೪೪೪೭೬೬೮೬
2. ಶ್ರಿ ನಾಗರಾಜು ಪಿ, ನಿಲಯ ಸಮಿತಿ ಸದಸ್ಯರು
ಮಂಜುಶ್ರೀ ನಿಲಯ, ಎಸ್ .ಐ.ಟಿ ಮೈನ್ ರೋಡ್, ೧೩ ನೇ ಕ್ರಾಸ್ ಎಸ್ ಐ ಟಿ ಎಕ್ಸ್‌ಟೆನ್ಷನ್, ತುಮಕೂರು. ಮೊ: ೯೯೮೬೫೦೧೯೯೬.
3. ಶ್ರೀ ಡಿ. ನಾಗರಾಜಯ್ಯ, ನಿಲಯ ಸಮಿತಿ ಸದಸ್ಯರು
ವೆಂಕಟೇಶ್ವರ ಕೃಪ, ೧೨ ನೇ ಕ್ರಾಸ್, ಅಶೋಕ ಸೋಪ್ ಪ್ಯಾಕ್ಟರಿ ಹತ್ತಿರ, ಎಸ್,ಎಸ್,ಪುರಂ. ತುಮಕೂರು. ಮೊ: ೯೧೪೧೬೬೦೪೦೬
4. ಶ್ರೀ ಶಿವಕುಮಾರ್ ಕೆ.ಜೆ., ನಿಲಯ ಸಮಿತಿ ಸದಸ್ಯರು
ನಂ.೩, ೫ನೇ ಮುಖ್ಯ ರಸ್ತೆ, ಜಯನಗರ ವೆಸ್ಟ್, ತುಮಕೂರು -೨. ಮೊ:೯೮೪೪೨೯೬೪೦೮
5. ಶ್ರೀ ಬಿ.ಎನ್. ನಾಗರಾಜು, ನಿಲಯ ಸಮಿತಿ ಸದಸ್ಯರು
ಪರ್ಣಕುಟೀರ, ೩ನೇ ಮುಖ್ಯರಸ್ತೆ, ಸಿದ್ದರಾಮೇಶ್ವರ ಬಡಾವಣೆ-ಪೂರ್ವ, ತುಮಕೂರು-೫೭೨೦೧೦೩. ಮೊ:೯೫೯೦೧೫೦೦೧೪
5. ಶ್ರೀ ನಾರಾಯಣಪ್ಪ, ನಿಲಯ ಸಮಿತಿ ಸದಸ್ಯರು
೧ ನೇ ಅಡ್ಡ ರಸ್ತೆ, ಆದರ್ಶ ನಗರ, ತುಮಕೂರು. ಮೊ ೯೮೪೪೪೭೬೬8
5. ಶ್ರೀ ನಾರಾಯಣಪ್ಪ, ನಿಲಯ ಪಾಲಕರು
೧ ನೇ ಮೈನ್, ೨ ನೇ ಅಡ್ಡ ರಸ್ತೆ, ನೃಪತುಂಗ ಎಕ್ಸ್‌ಟೇಷನ್, ಶೆಟ್ಟಿಹಳ್ಳಿ ಮುಖ್ಯ ರಸ್ತೆ, ತುಮಕೂರು. ಮೊ ೯೮೪೪೪೭೬೬8೬

ವಿದ್ಯಾರ್ಥಿನಿಲಯಗಳ ವಿವರ:

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ತುಮಕೂರು ಶಾಖೆ, ವಿದ್ಯಾರ್ಥಿನಿಲಯಗಳ ವಿವರ:
TUMKUR HOSTELS DETAILS:

ವಿವರ: ಬಾಲಕರ ವಿದ್ಯಾರ್ಥಿನಿಲಯ ಬಾಲಕಿಯರ ವಿದ್ಯಾರ್ಥಿನಿಲಯ
ವಿದ್ಯಾರ್ಥಿಗಳ ಸಂಖ್ಯೆ : 78 118
ಕೊಠಡಿಗಳ ಸಂಖ್ಯೆ: 30 26
ಸಿಬ್ಬಂದಿಗಳ ಸಂಖ್ಯೆ: 03 04


ತುಮಕೂರು ಬಾಲಕರ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗ:

 

1. ಶ್ರೀ. ಶಿವರಾಂ ಭಟ್, ವಿದ್ಯಾರ್ಥಿ ನಿಲಯದ ಅಡಿಗೆ ಮುಖ್ಯಸ್ಥರು
ಹೆಗ್ಗೆರೆ, ತುಮಕೂರು.
2. ಶ್ರೀ. ರಂಗಾರೆಡ್ಡಿ, ವಿದ್ಯಾರ್ಥಿ ನಿಲಯದ ಅಡಿಗೆ ಸಹಾಯಕರು
ವೆಂಕಟಾಪುರ,ಆಂದ್ರಪ್ರದೇಶ


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತುಮಕೂರು


ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯ-ಸಮಿತಿ ಸದಸ್ಯರುಗಳು ವಿವರ
TUMKUR GIRLS HOSTEL COMMITTEE MEMBERS

 

1. ಶ್ರೀಮತಿ ಸರೋಜಾ ರಾಜು, ನಿಲಯ-ಸಮಿತಿ ಅಧ್ಯಕ್ಷರು,
೨ ನೇ ಅಡ್ಡ ರಸ್ತೆ, ಎಂ.ಜಿ. ರಸ್ತೆ, ತುಮಕೂರು
2. ಶ್ರೀಮತಿ ಗಂಗಮ್ಮ.
ಮಂಜುಶ್ರೀ ನಿಲಯ, ಎಸ್ .ಐ.ಟಿ ಮೈನ್ ರೋಡ್, ೧೩ ನೇ ಕ್ರಾಸ್ ಎಸ್ ಐ ಟಿ ಎಕ್ಸ್‌ಟೆನ್ಷನ್, ತುಮಕೂರು. ಮೊ: ೯೯೮೬೫೦೧೯೯೬.
3. ಶ್ರೀಮತಿ ಶೈಲಜಾ, ನಿಲಯ-ಸಮಿತಿ ಸದಸ್ಯರು,
೬ ನೇ ಅಡ್ಡ ರಸ್ತೆ, ಸಿದ್ದಗಂಗಾ ಬಡಾವಣೆ, ತುಮಕೂರು
4. ಶ್ರೀಮತಿ ಯಶೋದಮ್ಮ, ನಿಲಯ-ಸಮಿತಿ ಸದಸ್ಯರು,
೩ ನೇ ಅಡ್ಡ ರಸ್ತೆ, ಸಿದ್ದಗಂಗಾ ಬಡಾವಣೆ, ತುಮಕೂರು



ತುಮಕೂರು ಬಾಲಕಿಯರ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗ:

 

1. ಶ್ರೀಮತಿ. ಅನುಸೂಯಮ್ಮ, ವಿದ್ಯಾರ್ಥಿನಿಯದ ನಿಲಯ ಪಾಲಕರು
ವೆಂಕಟಾಪುರ,ಆಂದ್ರಪ್ರದೇಶ
2. ಶ್ರೀಮತಿ. ಶಶಿಕಲಾ, ವಿದ್ಯಾರ್ಥಿನಿಯದ ನಿಲಯದ ಅಡಿಗೆ ಮುಖ್ಯಸ್ಥರು
ಹೆಗ್ಗೆರೆ, ತುಮಕೂರು.
3. ಶ್ರೀಮತಿ. ಮಂಜುಳಮ್ಮ, ವಿದ್ಯಾರ್ಥಿನಿಯದ ನಿಲಯದ ಅಡಿಗೆ ಸಹಾಯಕರು
ಶಾರದಾನಗರ, ತುಮಕೂರು

ತುಮಕೂರು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು

ತುಮಕೂರು ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು (2015-16)


ತುಮಕೂರು ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು (2015-16)

 

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ತುಮಕೂರು

ಶ್ರೀಮಾನ್ ದಿ. ಎಂ. ಎಸ್ ಮಲ್ಲಯ್ಯನವರು ಕೇಂದ್ರ ಸಂಘದ ಕಾರ್ಯದರ್ಶಿಯಾಗಿದ್ದಾಗ 1970 ರಲ್ಲಿ ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಲು ಕ್ರಮತೆಗೆದುಕೊಂಡರು. ನಂತರ ೧೯೭೧ ರಲ್ಲಿ ಸಂಘವು ತನ್ನದೇ ಆದ ಕಟ್ಟಡವನ್ನು ವಿದ್ಯಾರ್ಥಿನಿಲಯಕ್ಕೆ ಖರೀದಿಸಿತು. ಬೆಂಗಳೂರು ರೇಸ್ ಕೋರ್ಸ್ ಹತ್ತಿರದಲ್ಲಿದ್ದ ನಿವೇಶನವನ್ನು ೧.೨೨ ಲಕ್ಷಕ್ಕೆ ಮಾರಿ ಆ ಹಣದಿಂದ ತುಮಕೂರು ವಿದ್ಯಾರ್ಥಿನಿಲಯದ ಕಟ್ಟಡವನ್ನು ೫೦೦೦೦/- ರೂಪಾಯಿಗಳಿಗೆ 1971 ರಲ್ಲಿ ಕೊಂಡುಕೊಳ್ಳಲಾಯಿತು. ಡಿಸೆಂಬರ್ 1989 ಕ್ಕೆ ಇದರ ಮೂಲ ಬೆಲೆ ೩,೦೫,೬೧೦/- ರೂ. ಆಗಿತ್ತು.
ತುಮಕೂರಿನಲ್ಲಿ ನಮ್ಮ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಮತ್ತು ಬಟವಾಡೆ ಗ್ರಾಮದಲ್ಲಿಯ ನಿವೇಶನವನ್ನು ಕೊಳ್ಳುವುದರಲ್ಲಿ ತುಮಕೂರಿನ ಪ್ರಮುಖ ವ್ಯಕ್ತಿಗಳಾದ ದಿ.ಶ್ರೀ ಡಿ.ಆರ್ ಮುದ್ದಪ್ಪ ನವರು, ಶ್ರೀ ಬಿ.ಕೆ. ಚಿಕ್ಕಣ್ಣನವರು ಮತ್ತು ಶ್ರೀ ಲಕ್ಷ್ಮೀನರಸಿಂಹಯ್ಯನವರಿಗೆ ತುಮಕೂರು ತಾಲ್ಲೂಕು ಸಂಘದ ಮತ್ತು ಕೇಂದ್ರ ಸಂಘದ ಪದಾಧಿಕಾರಿಗಳ ಸಹಕಾರ ಕೊಟ್ಟು 1987 ರಲ್ಲಿ ಕೆಲಸ ಸಾದಿಸಿದರು. ತುಮಕೂರಿನಲ್ಲಿ ಸಂಘದ ಸ್ಥಾಪನೆ ಮತ್ತು ಸಂಘದ ವಿದ್ಯಾರ್ಥಿನಿಲಯವನ್ನು ಉತ್ತಮ ರೂಪಕ್ಕೆ ತಂದು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರಿಂದ ಉದ್ಗಾಟನೆ ಮಾಡಿಸಿ, ಸಂಘವು ಅಭಿವೃದ್ಧಿಗೊಳ್ಳುವಲ್ಲಿ ಶ್ರೀ ಡಿ ರಾಮಯ್ಯನವರು, ದಿ.ಶ್ರೀ ಡಿ.ಆರ್ ಮುದ್ದಪ್ಪ ನವರು ಮತ್ತು ಶ್ರೀ ಲಕ್ಷ್ಮೀನರಸಿಂಹಯ್ಯನವರು ಸಾಕಷ್ಟು ಶ್ರಮಿಸಿದ್ದಾರೆ.
ಪ್ರಸ್ತುತ ವಿದ್ಯಾರ್ಥಿನಿಲಯದ ನಿರ್ವಹಣಾ ಖರ್ಚು-ವೆಚ್ಚವನ್ನು ಕೇಂದ್ರ ಸಂಘವೇ ಭರಿಸುತ್ತಿದೆ. 1997 ರಲ್ಲಿ ತುಮಕೂರಿನ ವಿಧ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗನುಗುಣವಾಗಿ ಕೊಠಡಿಗಳ ಕೊರತೆಯುಂಟಾದಾಗ, ಕೊಡುಗೈ ದಾನಿಗಳು, ಸಮಾಜದ ಹಿರಿಯ ಬಂಧುಗಳಾದ ಒಳಕಲ್ಲು ಗ್ರಾಮದ ಶ್ರೀಯುತ ಡಿ. ರಾಮಯ್ಯ ನವರು ಸುಮಾರು ೧೨ ಲಕ್ಷ ರೂ. ಗಳ ವೆಚ್ಚದಲ್ಲಿ ತುಮಕೂರಿನಲ್ಲಿರುವ ವಿದ್ಯಾರ್ಥಿ ನಿಲಯದ ಮೊದಲನೇ ಅಂತಸ್ತಿನಲ್ಲಿ ೧೨ ಕೊಠಡಿಗಳನ್ನು ಉಚಿತವಾಗಿ ಕಟ್ಟಿಸಿಕೊಟ್ಟು ಉದಾರತೆಯನ್ನು ಮೆರೆದಿದ್ದಾರೆ. ಶ್ರೀಯುತರ ಸೇವೆ ಅನನ್ಯ ಮತ್ತು ಅಮೂಲ್ಯ ವಾದದ್ದು.
೨೦೧೩ ರಲ್ಲಿ ತುಮಕೂರು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ೨ ಲಕ್ಷ ರೂಗಳ ವೆಚ್ಚದಲ್ಲಿ ವಿದ್ಯಾರ್ಥಿನಿಲಯದ ಎರಡನೇ ಅಂತಸ್ಥಿನಲ್ಲಿ ೩ ಕೊಠಡಿಗಳನ್ನು ನಿರ್ಮಿಸಲಾಗಿದೆ. ವಾಣಿಜ್ಯೋದ್ಯಮಿಗಳಾದ ಶ್ರೀ ಶಿವಶಂಕರ್ ಮತ್ತು ನಿಲಯದ ಹಳೇ ವಿದ್ಯಾರ್ಥಿಗಳಾದ ಶ್ರೀ ಪದ್ಮರಾಜು ರವರು ಅಡುಗೆ ಕೊಠಡಿ, ಊಟದ ಹಾಲ್ ಮತ್ತು ಶೌಚಾಲಯ ಕೊಠಡಿಗಳನ್ನು 2013 ರಲ್ಲಿ ನವೀಕರಿಸಿಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ವತಿಯಿಂದ ನಿಲಯದ ಮುಂಭಾಗ ತಂತಿ ಕಾಂಪೌಂಡ್ ಹಾಕಿಸಲಾಗಿದೆ ಮತ್ತು ಕೇಂದ್ರ ಸಂಘದ ವತಿಯಿಂದ ನಿಲಯದ ಕಟ್ಟಡಕ್ಕೆ ಸಂಪೂರ್ಣ ಬಣ್ಣ ಬಳಿಸಿ ನವಿಕರಿಸಲಾಗಿದೆ.
ತುಮಕೂರಿನ ಬಾಲಕರ ವಿದ್ಯಾರ್ಥಿನಿಲಯದ ಎರಡನೇ ಅಂತಸ್ತಿನಲ್ಲಿ 2007 ರಲ್ಲಿ ತುಮಕೂರಿನ ಜನಪ್ರಿಯ ಸಂಸದರಾದ ಶ್ರೀ ಜಿ.ಎಸ್. ಬಸವರಾಜು ರವರ ಸಂಸದರ ನಿಧಿಯಿಂದ ಸುಮಾರು ೨ ಲಕ್ಷ ರೂಗಳ ವೆಚ್ಚದಲ್ಲಿ ಒಂದು ಮಿನಿ ಸಮುದಾಯ ಭವನ ವನ್ನು ನಿರ್ಮಿಸಲಾಗಿದೆ.ಪ್ರಸ್ತುತ ಸಮುದಾಯ ಭವನ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಮತ್ತು ಸಮುದಾಯ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದೆ.
ತುಮಕೂರಿನ ಬಟವಾಡೆ ಗ್ರಾಮದ ನಿವೇಶನ ಕೊಳ್ಳುವಲ್ಲಿ ದಿ|| ಪೂಜ್ಯ ಶ್ರೀ ಲಕ್ಷ್ಮೀನರಸಿಂಹಯ್ಯ ನವರ ಪಾತ್ರ ಅತ್ಯಂತ ಸ್ಮರಣೀಯ. ಈ ನಿವೇಶನವು ಮೂಲತಃ ಕ್ತಾತ್ಸಂದ್ರದ ಜಲ್ಲಿ ಗುಂಡಪ್ಪನವರದ್ದು. ಸಮಾಜದ ಹಿರಿಯ ರಾಜಕೀಯ ಧುರೀಣರು , ಸದ್ಗುಣ ಸಂಪನ್ನರು, ಮಾಜಿ ವಿದ್ಯುತ್ ಖಾತೆ ಸಚಿವರಾಗಿದ್ದ, ದಿ|| ಪೂಜ್ಯ ಶ್ರೀ ಲಕ್ಷ್ಮೀನರಸಿಂಹಯ್ಯ ನವರಲ್ಲಿ ಮಾರಾಟದ ಬಗ್ಗೆ ಪ್ರಸ್ತಾಪಿಸಿದಾಗ, ಲಕ್ಷ್ಮೀನರಸಿಂಹಯ್ಯ ನವರು ನನಗೆ ಬೇಡ ನಮ್ಮ ಸಂಘಕ್ಕೆ ಕೊಡಿಸಬೇಕೆಂದು ತೀರ್ಮಾನಿಸಿದ ಫಲವಾಗಿ ನಮ್ಮ ಸಂಘಕ್ಕೆ ಈ ಸ್ವತ್ತು ಸುಮಾರು ೩೭ ಗುಂಟೆ 1970 ರಲ್ಲಿ ಕ್ರಯವಾಯಿತು. ತದನಂತರ ಸದರಿ ನಿವೇಶನದ ಉತ್ತರ ಭಾಗದಲ್ಲಿದ್ದ ಸ್ವತ್ತಿನ ಮಾಲೀಕರು ಕೋರ್ಟಿನಲ್ಲಿ ದಾವೆ ಹೂಡಲಾಗಿ ಸುಮಾರು 12 ವರ್ಷಗಳ ಕಾಲ ನಮ್ಮ ಸಮಾಜದ ವಕೀಲರಾದ ಶ್ರೀಯುತ ಪಿ.ಜಿ. ರಾಮಚಂದ್ರಪ್ಪ ರವರು ಉಚಿತವಾಗಿ ವಕಾಲತ್ತು ವಹಿಸಿ ನಮ್ಮ ಪರವಾಗಿ ತೀರ್ಪು ಬರಲು ಸಹಕರಿಸಿರುತ್ತಾರೆ.
ಕಾಲಾಂತರದಲ್ಲಿ ತುಮಕೂರು ನಗರಾಭಿವೃದಿ ಪ್ರಾಧಿಕಾರದ ಅಧಿಕಾರಿಗಳು ಕುತಂತ್ರದಿಂದ ಸದರಿ ಸ್ವತ್ತನ್ನು ಸಿ.ಡಿ.ಪಿ ಯಲ್ಲಿ ಆಟದ ಮೈದಾನ ಮತ್ತು ಉದ್ಯಾನವನಕ್ಕೆಂದು ಮೀಸಲಿಟ್ಟು ನಮಗೆ ನಿರುಪಯೋಗವಾಗುವಂತೆ ಮಾಡಿದ್ದರು. ಆ ಸಮಯದಲ್ಲಿ ದಿ|| ಲಕ್ಷ್ಮೀನರಸಿಂಹಯ್ಯನವರು ಆಸಕ್ತಿ ವಹಿಸಿ, ಸದರಿ ಅಧಿಕಾರಿಯನ್ನು ಅದೇ ಕಾರಣಕ್ಕೆ ವರ್ಗಾವಣೆ ಮಾಡಿಸಿ, ಸದರಿ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ-೪ ಹಾದುಹೊಗಿದ್ದು ಉಳಿದಂತೆ ಸುಮಾರು ೨೦ ಗುಂಟೆ ಜಾಗ ವನ್ನು ಸರ್ಕಾರದ ಮಟ್ಟದಲ್ಲಿ ಸದರಿ ಜಾಗವನ್ನು 1997 ರಲ್ಲಿ ವಾಣಿಜ್ಯ ಉಪಯೋಗಕ್ಕಾಗಿ ಪರಿವರ್ತಿಸಿ ಕೊಟ್ಟಿರುತ್ತಾರೆ.
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತುಮಕೂರು ಶಾಖೆ ವತಿಯಿಂದ ಬಟವಾಡಿ ವೃತ್ತದಲ್ಲಿನ ನಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಸನ್ಮಾನ್ಯ ಡಾ|| ಮುಖ್ಯಮಂತ್ರಿ ಚಂದ್ರು ರವರ ಅನುದಾನ ೨೦ ಲಕ್ಷ ರೂಗಳು ಮತ್ತು ಕೇಂದ್ರ ಸಂಘದ ವತಿಯಿಂದ ೪೫ ಲಕ್ಷ ರೂಗಳು ಹಾಗೂ ಸಮಾಜದ ದಾನಿಗಳಿಂದ ದೇಣಿಗೆ ಹಣದಿಂದ ೨೦೦೨-೨೦೦೩ ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾಮಗಾರಿ ೨೦೦೪ ರಲ್ಲಿ ಪೂರ್ಣಗೊಂಡು ಒಟ್ಟು ೧೪ ಸಾವಿರ ಚದುರ ಅಡಿ ವಿಸ್ತೀರ್ಣದ ಎರಡು ಅಂತಸ್ಥಿನ ವಾಣಿಜ್ಯ ಸಂಕೀರ್ಣ ಕಟ್ಟಡ ನಗರದ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿದೆ. ಪ್ರಸ್ತುತ ವಾಣಿಜ್ಯ ಸಂಕೀರ್ಣ ಕಟ್ಟಡದ ೧೪ ಮಳಿಗೆಗಳಿಂದ ಸುಮಾರು ೨.೭೫ ಲಕ್ಷ ರೂಗಳು ಬಾಡಿಗೆ ಹಣ ಸಂದಾಯವಾಗುತ್ತಿದೆ.
2013 ರಲ್ಲಿ ಶ್ರೀಯುತ ಕೆ. ಉಗ್ರಪ್ಪ ನವರ ಒತಾಸೆಯಂತೆ ವಿದ್ಯಾರ್ಥಿನಿಯರಿಗಾಗಿ ವಸತಿನಿಲಯವನ್ನು ತುಮಕೂರಿನ ಶಾರದಾದೇವಿನಗರದ ಬಾಡಿಗೆ ಕಟ್ಟಡದಲ್ಲಿ ತುಮಕೂರು ತಾಲ್ಲೂಕು ಸಂಘ ಪ್ರಾರಂಭಿಸಲಾಯಿತು. 2014 ರಲ್ಲಿ ತುಮಕೂರಿನ ಖ್ಯಾತ ಕೈಗಾರಿಕೋದ್ಯಮಿಗಳಾದ ಶ್ರೀ ರವಿಶಂಕರ್ ಮತ್ತು ಶ್ರೀಮತಿ ಪುಷ್ಪ ರವಿಶಂಕರ್ ರವರು ತುಮಕೂರಿನ ದೇವರಾಯಪಟ್ಟಣದಲ್ಲಿ ಸುಮಾರು ೩೦ ಲಕ್ಷ ಬೆಲೆ ಬಾಳುವ 30X40 ಅಡಿ ಅಳತೆಯ ನಿವೇಶನವನ್ನು ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಕ್ಕಾಗಿ ಉಚಿತವಾಗಿ ದಾನವಾಗಿ ಸಂಘಕ್ಕೆ ನೀಡಿರುತ್ತಾರೆ.ಪ್ರಸ್ತುತ ನಿವೇಶನದಲ್ಲಿ ೪ ಅಂತಸ್ತಿನ ಭವ್ಯ ಸುಸಜ್ಜಿತ ವಾಸ್ತುಶಿಲ್ಪ ಕಟ್ಟಡ ನಿರ್ಮಾಣಗೊಂಡಿದೆ. ಮಹಾದಾನಿಗಳಾದ ಶ್ರೀಯುತ ರವಿಶಂಕರ್ ದಂಪತಿಗಳನ್ನು ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಧನ ಸಹಾಯವಿತ್ತ ಸಮಸ್ತ ಮಹಾ ದಾನಿಗಳು, ಅತ್ಯಂತ ಆಸಕ್ತಿಯಿಂದ ನಿರ್ಮಾಣ ಕಾರ್ಯದಲ್ಲಿ ಸಹಕಾರವಿತ್ತ ತುಮಕೂರು ತಾಲ್ಲೂಕು ಸಮಿತಿ ಕಾರ್ಯಕಾರಿ ಮಂಡಳಿ, ನಿರ್ದಶಕ ಮಂಡಳಿ ಸದಸ್ಯರುಗಳೆಲ್ಲರನ್ನು ಸಂಘ ಕೃತಜ್ಞತಾ ಭಾವದಿಂದ ಸ್ಮರಿಸುತ್ತದೆ.
 
Hostels in Bengaluru

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು
ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ನಿಲಯ-ಸಮಿತಿ ಸದಸ್ಯರುಗಳು ವಿವರ


BANGALORE BOYS HOSTEL COMMITTEE MEMBERS

1. ಶ್ರೀ ಬಿ.ಆರ್ ಚನ್ನಕೇಶವ,

ಅಧ್ಯಕ್ಷರು
ನಂ.೭, ೧ನೇ ಕ್ರಾಸ್, ಎಂ.ಐ.ಜಿ. ಕೆ.ಹೆಚ್.ಬಿ. ಕಾಲೋನಿ, ೫ನೇ ಬ್ಲಾಕ್ ಕೋರಮಂಗಲ ಲೇ‌ಔಟ್, ಬೆಂಗಳೂರು-೯೫, ಮೊ: ೯೮೪೫೫೧೦೬೭೬

2. ಶ್ರೀ ಭೋಜರಾಜು ಎಂ,

ನಿಲಯ ಪಾಲಕರು.
ನಂ.೧೯, ಶಿವನಿಲಯ ೧ನೇ ಮಹಡಿ, ೧ನೇ ಮುಖ್ಯರಸ್ತೆ, ಶಂಕರನಗರ, ಮಹಾಲಕ್ಷ್ಮೀಲೇ‌ಔಟ್, ಬೆಂಗಳೂರು-೯೬., ಮೊ:೯೮೪೫೭೯೯೪೪೬.

3. ಶ್ರೀ ರಮೇಶ ಪಿ. ಹೆಚ್.,

ಸದಸ್ಯರು,
೧೦೨೧, ೨೩ ನೇ ಅಡ್ಡ ರಸ್ತೆ, ೨೪ ನೇ ಮುಖ್ಯ ರಸ್ತೆ,ಹೆಲ್ತ್ ನೆಸ್ಟ್ ಹತ್ತಿರ, ೨ ನೇ ಸೆಕ್ಟಾರ್, ಹೆಚ್.ಎಸ್. ಆರ್. ಲೇಔಟ್, ಬೆಂಗಳೂರು. ಪೋನ್: ೯೪೮೨೫೧೨೦೯೯

r4. ಶ್ರೀ ನಾಗೇಂದ್ರ ಕೆ.ಜೆ,

ಸದಸ್ಯರು
ನಂ.೧೬/೧೬, ೬ನೇ ಅಡ್ಡರಸ್ತೆ, ವೆಂಕಟಾಪುರ, ಕೋರಮಂಗಲ ೧ನೇ ಹಂತ, ಬೆಂಗಳೂರು-೩೪, ಮೊ:೯೯೪೫೧೫೦೩೬೫.



ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗ:

1.ಶ್ರೀ.ರಾಜಣ್ಣ,

ವಿದ್ಯಾರ್ಥಿ ನಿಲಯದ ಅಡಿಗೆ ಮುಖ್ಯಸ್ಥರು
ಕಾರ್ಪೇಹಳ್ಳಿ, ಶಿರಾ ತಾ., ತುಮಕೂರು ಜಿಲ್ಲೆ.

2. ಶ್ರೀಮತಿ. ನಂಜಮ್ಮ,

ವಿದ್ಯಾರ್ಥಿ ನಿಲಯದ ಅಡಿಗೆ ಸಹಾಯಕರು
ಕಾರ್ಪೇಹಳ್ಳಿ, ಶಿರಾ ತಾ||, ತುಮಕೂರು ಜಿಲ್ಲೆ

BANGALORE CENTRAL OFFICE STAFF

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು- ಕೆಂದ್ರ ಕಛೇರಿಯ ಸಿಬ್ಬಂದಿಗಳ ವಿವರ :

1. ಶ್ರೀ ಜಿ. ರಾಮಕೃಷ್ಣಮೂರ್ತಿ,

ವ್ಯವಸ್ಥಾಪಕರು
ಪುರ, ಗೌರಿಬಿದನೂರು ತಾಲ್ಲೂಕು

2. ಶ್ರೀಮತಿ ಸವಿತಾ ಕುಮಾರ್ ,

ಸಹಾಯಕ ವ್ಯವಸ್ಥಾಪಕರು.
ಕೆಂಪಸಾಗರ, ಮಾಗಡಿ ತಾ, ರಾಮನಗರ ಜಿಲ್ಲೆ.

11. ಶ್ರೀ ರವಿಕುಮಾರ್,

ಎಲೆಕ್ಟ್ರೀಷಿಯನ್,
ಹಂಚಿಹಳ್ಳಿ, ಕೊರಟಗೆರೆ.

12.ಶ್ರೀ ನಾಗರಾಜು ಜಿ.ಈ.,

ಎಲೆಕ್ಟ್ರೀಷಿಯನ್,
ಗಂಕಾರನಹಳ್ಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ.

11.ಶ್ರೀ ಲಕ್ಷ್ಮೀನಾರಾಯಣ,

ಭದ್ರತಾ ಸಿಬ್ಬಂದಿ
ವೀರಾಪುರ, ಚಿಕ್ಕಬಳ್ಳಾಪುರ.

12. ಶ್ರೀಮತಿ ರೋಜ್ ಮೇರಿ,

ಸ್ವಚ್ಚತಾ ಸಿಬ್ಬಂದಿ ಮೆಲ್ವಿಚಾರಕರು
ಬೆಂಗಳೂರು.


ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು (2015-16)

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ವಿವರ:


BANGALORE BOYS HOSTEL DETAILS:

ವಿವರ: ಬಾಲಕರ ವಿದ್ಯಾರ್ಥಿನಿಲಯ
ವಿದ್ಯಾರ್ಥಿಗಳ ಸಂಖ್ಯೆ : 92
ಕೊಠಡಿಗಳ ಸಂಖ್ಯೆ: 28
ಸಿಬ್ಬಂದಿಗಳ ಸಂಖ್ಯೆ: 04

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಕೇಂದ್ರ ಸಂಘ, ಬೆಂಗಳೂರು

1917 ರಲ್ಲಿ ಪೂಜ್ಯ ಶ್ರೀ ಮಂಡಿ ಹರಿಯಣ್ಣ ನವರ ಆಸಕ್ತಿ ಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭವಾದ ಉಚಿತ ವಿದ್ಯಾರ್ಥಿನಿಲಯ, ಮುಂದೆ 1943 ರಲ್ಲಿ ಸಾದುಮತದ(ಸಾದರ) ವಿದ್ಯಾಭಿವೃದ್ದಿ ಸಂಘವಾಗಿ ವಿದ್ಯಾರ್ಥಿ ನಿಲಯವನ್ನು ಮುಂದುವರಿಸುವ ಹೊಣೆ ಹೊತ್ತು ಇದೀಗ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ವಾಗಿ ಪ್ರಸ್ತುತ ೬ ತಾಲ್ಲೂಕು ಶಾಖೆಗಳನ್ನು ಒಳಗೊಂಡು, ಎಲ್ಲಾ ಪದಾಧಿಕಾರಿಗಳ ಅವಿಶ್ರಾಂತ ಪರಿಶ್ರಮದ ಫಲವಾಗಿ ಎಲ್ಲಾ ತಾಲ್ಲೂಕು ಕೇಂದ್ರ ಗಳಲ್ಲಿ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯಾ ಪ್ರಗತಿಯಲ್ಲಿದೆ,
1917 ರಿಂದ 1942 ರವರೆಗೂ ಪೂಜ್ಯ ಮಂಡಿ ಹರಿಯಣ್ಣನವರು ತಮ್ಮ ಸ್ವಂತ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. 1943 ರಲ್ಲಿ "ಸಾದು ಮತದ ಸಂಘ" ಎಂದು ನೋದಾಯಿಸಲ್ಪಟ್ಟ ನಂತರ ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ನಿಲಯ ನಿರ್ವಹಣೆ ಮಾಡಲಾಯಿತು.
ವಿದ್ಯಾರ್ಥಿನಿಲಯದ ನಿವೇಶನವನ್ನು 1972 ರಲ್ಲಿ ನಮ್ಮ ಹಿರಿಯರಾದ ದಿ||ಶ್ರೀಯುತ ಎಂ.ಎಸ್ ಮಲ್ಲಯ್ಯ ನವರು, ದಿ|| ಬಿ.ಕೆ ಶಿವಲಿಂಗಪ್ಪ ನವರು ಮತ್ತು ದಿ||ಎಂ.ಹೆಚ್ ರಾಜು ರವರು ಹಾಗೂ ಇತರರ ಶ್ರಮದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಮಹಾಲಕ್ಷ್ಮಿಪುರಂ ನ ನಿವೇಶನದಲ್ಲಿ ದಾನಿಗಳ ಸಹಕಾರದಿಂದ 1977 ರಲ್ಲಿ ಸಮುದಾಯ ಭವನ ನಿರ್ಮಿಸಲಾಯಿತು. ೧೯೮೦ ರಲ್ಲಿ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ನೆರವೇರಿತು. 2008-20012 ರ ಅವದಿಯಲ್ಲಿ ಮೊದಲ ಅಂತಸ್ತಿನಲ್ಲಿ ದಾನಿಗಳ ನೆರವಿನಿಂದ ಕೊಠಡಿಗಳನ್ನು ನಿರ್ಮಿಸಲಾಯಿತು. 2002 ರಲ್ಲಿ ಮಂಡಿ ಹರಿಯಣ್ಣನವರ ಕುಟುಂಬದವರು ಸುಸಜ್ಜಿತ "ಪೂಜ್ಯ ಮಂಡಿ ಹರಿಯಣ್ಣನವರ ಸ್ಮಾರಕ ಭವನ" ವನ್ನು ಸುಮಾರು ೭-೮ ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಭವ್ಯ ಸಭಾಂಗಣವನ್ನು ನಿರ್ಮಿಸಿ ಪೂಜ್ಯ ಹರಿಯಣ್ಣನವರ ನೆನಪಿನ ಕೊಡುಗೆಯಾಗಿ ಸಂಘಕ್ಕೆ ಕೊಟ್ಟಿದ್ದಾರೆ.
ಕೇಂದ್ರ ಕಛೇರಿಯ ನೂತನ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯದ ಎರಡನೇ ಹಂತದ ಕಟ್ಟಡವನ್ನು ನಮ್ಮ ಸಮುದಾಯದ ರಾಜಕೀಯ ನೇತಾರರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರೂ ಆದ ಶ್ರೀಯುತ ಡಾ|| ಮುಖ್ಯಮಂತ್ರಿ ಚಂದ್ರು ರವರ ಸಹಕಾರದಿಂದ 20 ಲಕ್ಷ ರೂಗಳ ಅನುದಾನ ದಲ್ಲಿ ನಿರ್ಮಿಸಲಾಗಿದೆ. 2014 ರಲ್ಲಿ ಶ್ರೀ ರವಿಕುಮಾರ್ ಡಿ.ಈ. ರವರ ಆಡಳಿತ ಮಂಡಳಿ ಸಮುದಾಯ ಭವನ ಮತ್ತು ವಿದ್ಯಾರ್ಥಿನಿಲಯವನ್ನು ಸಂಪೂರ್ಣ ನವೀಕರಿಸಲಾಯಿತು.
 
Hostels in Gowribidanuru

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಗೌರಿಬಿದನೂರು

ಗೌರಿಬಿದನೂರಿನಲ್ಲಿ 1970-71 ನೇ ಸಾಲಿನಿಂದ ಬಾಡಿಗೆ ಮನೆಯಲ್ಲಿ ಹಾಸ್ಟಲ್ ನಡೆಸಿಕೊಂಡು ಬರುತ್ತಿದ್ದು ಮುನಿಸಿಪಾಲಿಟಿಯಿಂದ ೨೦,೮೬೦/- ರೂ. ಗಳಿಗೆ ಒಂದು ನಿವೇಶನವನ್ನು ಕೊಂಡುಕೊಳ್ಳಲಾಯಿತು. 1984 ರಲ್ಲಿ ಈ ನಿವೇಶನವನ್ನು ೨೬-೮೦೪ ರೂ. ಗಳಿಗೆ ಮಾರಿ ಈಗ ಹಾಲಿ ಹಾಸ್ಟೆಲ್ ಇರುವ ಕಟ್ಟಡವನ್ನು ಶ್ರೀ ಆಂಜನೇಯ ಗೌಡರಿಂದ ೨೨.೦೦೦ ರೂಪಾಯಿಗಳಿಗೆ ಕೊಳ್ಳಲಾಯಿತು. ಈ ಹಣವನ್ನು ಆಂಜನೇಯ ಗೌಡರು ಪುನಃ ಹಿಂದಕ್ಕೆ ಕೊಟ್ಟು ನಿವೇಶನವನ್ನು ದಾನವಾಗಿ ಕೊಟ್ಟಿದ್ದಾರೆ. ಈ ನಿವೇಶನದಲ್ಲಿರುವ ಕಟ್ಟಡದ ಬೆಲೆ ಡಿಸೆಂಬರ್ 1986 ಕ್ಕೆ ೪.೦೦,೦೦೦ ರೂಪಾಯಿ ಆಗಿದೆ.
ಗೌರಿಬಿದನೂರಿನಲ್ಲಿ 1986 ರವರೆವಿಗೂ ವಿದ್ಯಾರ್ಥಿನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಸಿಕೊಂಡು ಬಂದರೂ ಈಗ ನಮ್ಮದೇ ವಿದ್ಯಾರ್ಥಿ ನಿಲಯದ ಕಟ್ಟಡ ಇದ್ದರೂ ಸಾಕಷ್ಟು ವಿದ್ಯಾರ್ಥಿಗಳು ಬಾರದೇ ಇರುವುದರಿಂದ ವಿದ್ಯಾರ್ಥಿನಿಲಯ ಸರಿಯಾಗಿ ನಡೆಯುತ್ತಿಲ್ಲ. ಗೌರಿಬಿದನೂರಿನಲ್ಲಿ ಶ್ರೀಮತಿ ಚಿಕ್ಕಮ್ಮ ಮತ್ತಿ ಶ್ರೀ ವೆಂಕಟರಮಣಗೌಡ, ಪಟೇಲರು, ಕರೇಕಲ್ಲಹಳ್ಳಿ ಇವರು ದಾನವಾಗಿ ನೀಡಿರುವ ೨೦ ಗುಂಟೆ ಸ್ವತ್ತನಲ್ಲಿ ದಾನಿಗಳು ಮತ್ತು ಸ್ಥಳೀಯ ಶಾಸಕರಾದ ಶ್ರೀಯುತ ಶಿವಶಂಕರರೆಡ್ಡಿ ಯವರ ಅನುದಾನದಲ್ಲಿ ನಿರ್ಮಿಸಿರುವ ವಿವಿದ ಕಟ್ಟಡಗಳಲ್ಲಿ ಸಮತಾ ನರ್ಸರಿ ಶಾಲೆ, ಸಮತಾ ಫ್ರೌಢಶಾಲೆಗಳನ್ನು ನಡೆಸಲಾಗುತ್ತಿದೆ. ದಾನಿಗಳ ಸಹಕಾರದಿಂದ ಆಡುಗೆ ಕೋಣೆ, ಆಡಳಿತ ಕಚೇರಿ, ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಮತಾ ಪ್ರೌಡಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, ಸಂಘದ ವತಿಯಿಂದ ಸುಸೂತ್ರವಾಗಿ ಮುನ್ನಡೆಸಲಾಗುತ್ತಿದೆ. ಪ್ರಸ್ತುತ ಸಮತಾ ನರ್ಸರಿ ಮತ್ತು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆ, ಕಟ್ಟಡದ ಕೊರತೆ ಮತ್ತು ನಷ್ಟದ ಕಾರಣದಿಂದ ಮತಬಾಂದವರೊಬ್ಬರಿಗೆ ಕ್ರಯಕ್ಕೆ ಕೊಡಲಾಗಿದೆ. ಗೌರಿಬಿದನೂರಿನಲ್ಲಿ ಒಂದು ಸುಂದರ ಸಮುದಾಯ ಭವನ ವನ್ನು ನಿರ್ಮಿಸಲು ಡಾ|| ಮುಖ್ಯಮಂತ್ರಿ ಚಂದ್ರು ರವರ ೧೫ ಲಕ್ಷ ರೂಗಳನ್ನು ಅನುದಾನವನ್ನು ವಿನಿಯೋಗಿಸಲಾಗಿದೆ.
 
Hostels in Hindupur

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಹಿಂದೂಪುರ (ಆಂಧ್ರಪ್ರದೇಶ)

ಅನಂತಪುರ ಜಿಲ್ಲೆ, ಕೊಡಿಗೇನಹಳ್ಳಿ (ಆಂಧ್ರಪ್ರದೇಶ) ಗ್ರಾಮದಲ್ಲಿ ದಾನಿಗಳಾದ ಶ್ರೀಯುತ ವೆಂಕಟಾರೆಡ್ಡಿ ಬಿನ್ ಲೇ ರೆಡ್ಡಿಪಲ್ಲಿ ಸಂಜೀವರೆಡ್ಡಿಯವರು ನೀಡಿರುವ ನಿವೇಶನದಲ್ಲಿ ಸಮುದಾಯಭವನ ನಿರ್ಮಿಸಲು ದಿನಾಂಕ ೧೭-೦೨-೨೦೧೩ ರಂದು ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ.
 
Hostels in Madakasira

Hostel Facility not available in Madakasira....

 
<< Start < Prev 1 2 Next > End >>