ಮುಖಪುಟ ಬಾಲಕರ ವಿದ್ಯಾರ್ಥಿ‍ ನಿಲಯಗಳು
ಬಾಲಕರ ವಿದ್ಯಾರ್ಥಿನಿಲಯಗಳು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು

ಮಂಡಿ ಹರಿಯಣ್ಣ ಸ್ಮಾರಕ ಬಾಲಕರ ವಿದ್ಯಾರ್ಥಿನಿಲಯ, ಬೆಂಗಳೂರು

1917 ರಲ್ಲಿ ಪೂಜ್ಯ ಶ್ರೀ ಮಂಡಿ ಹರಿಯಣ್ಣ ನವರ ಆಸಕ್ತಿ ಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭವಾದ ಉಚಿತ ವಿದ್ಯಾರ್ಥಿನಿಲಯ, ಮುಂದೆ 1943 ರಲ್ಲಿ ಸಾದುಮತದ(ಸಾದರ) ವಿದ್ಯಾಭಿವೃದ್ದಿ ಸಂಘವಾಗಿ ವಿದ್ಯಾರ್ಥಿ ನಿಲಯವನ್ನು ಮುಂದುವರಿಸುವ ಹೊಣೆ ಹೊತ್ತು ಇದೀಗ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ವಾಗಿ ಪ್ರಸ್ತುತ ೬ ತಾಲ್ಲೂಕು ಶಾಖೆಗಳನ್ನು ಒಳಗೊಂಡು, ಎಲ್ಲಾ ಪದಾಧಿಕಾರಿಗಳ ಅವಿಶ್ರಾಂತ ಪರಿಶ್ರಮದ ಫಲವಾಗಿ ಎಲ್ಲಾ ತಾಲ್ಲೂಕು ಕೇಂದ್ರ ಗಳಲ್ಲಿ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯಾ ಪ್ರಗತಿಯಲ್ಲಿದೆ, 1917 ರಿಂದ 1942 ರವರೆಗೂ ಪೂಜ್ಯ ಮಂಡಿ ಹರಿಯಣ್ಣನವರು ತಮ್ಮ ಸ್ವಂತ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. 1943 ರಲ್ಲಿ "ಸಾದು ಮತದ ಸಂಘ" ಎಂದು ನೋದಾಯಿಸಲ್ಪಟ್ಟ ನಂತರ ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ನಿಲಯ ನಿರ್ವಹಣೆ ಮಾಡಲಾಯಿತು. ಕೇಂದ್ರ ಕಛೇರಿಯ ನೂತನ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯದ ಎರಡನೇ ಹಂತದ ಕಟ್ಟಡವನ್ನು ನಮ್ಮ ಸಮುದಾಯದ ರಾಜಕೀಯ ನೇತಾರರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರೂ ಆದ ಶ್ರೀಯುತ ಡಾ|| ಮುಖ್ಯಮಂತ್ರಿ ಚಂದ್ರು ರವರ ಸಹಕಾರದಿಂದ 20 ಲಕ್ಷ ರೂಗಳ ಅನುದಾನ ದಲ್ಲಿ ನಿರ್ಮಿಸಲಾಗಿದೆ. 2014 ರಲ್ಲಿ ಶ್ರೀ ರವಿಕುಮಾರ್ ಡಿ.ಈ. ರವರ ಆಡಳಿತ ಮಂಡಳಿ ಸಮುದಾಯ ಭವನ ಮತ್ತು ವಿದ್ಯಾರ್ಥಿನಿಲಯವನ್ನು ಸಂಪೂರ್ಣ ನವೀಕರಿಸಲಾಯಿತು.

ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ನಿಲಯ-ಸಮಿತಿ ಸದಸ್ಯರುಗಳು ವಿವರ

BANGALORE BOYS HOSTEL COMMITTEE MEMBERS

1. ಶ್ರೀ ಬಿ.ಆರ್ ಚನ್ನಕೇಶವ,

ಅಧ್ಯಕ್ಷರು
ನಂ.೭, ೧ನೇ ಕ್ರಾಸ್, ಎಂ.ಐ.ಜಿ. ಕೆ.ಹೆಚ್.ಬಿ. ಕಾಲೋನಿ, ೫ನೇ ಬ್ಲಾಕ್ ಕೋರಮಂಗಲ ಲೇ‌ಔಟ್, ಬೆಂಗಳೂರು-೯೫, ಮೊ: ೯೮೪೫೫೧೦೬೭೬

2. ಶ್ರೀ ಭೋಜರಾಜು ಎಂ,

ನಿಲಯ ಪಾಲಕರು.
ನಂ.೧೯, ಶಿವನಿಲಯ ೧ನೇ ಮಹಡಿ, ೧ನೇ ಮುಖ್ಯರಸ್ತೆ, ಶಂಕರನಗರ, ಮಹಾಲಕ್ಷ್ಮೀಲೇ‌ಔಟ್, ಬೆಂಗಳೂರು-೯೬., ಮೊ:೯೮೪೫೭೯೯೪೪೬.

3. ಶ್ರೀ ರಮೇಶ ಪಿ. ಹೆಚ್.,

ಸದಸ್ಯರು,
೧೦೨೧, ೨೩ ನೇ ಅಡ್ಡ ರಸ್ತೆ, ೨೪ ನೇ ಮುಖ್ಯ ರಸ್ತೆ,ಹೆಲ್ತ್ ನೆಸ್ಟ್ ಹತ್ತಿರ, ೨ ನೇ ಸೆಕ್ಟಾರ್, ಹೆಚ್.ಎಸ್. ಆರ್. ಲೇಔಟ್, ಬೆಂಗಳೂರು. ಪೋನ್: ೯೪೮೨೫೧೨೦೯೯

r4. ಶ್ರೀ ನಾಗೇಂದ್ರ ಕೆ.ಜೆ,

ಸದಸ್ಯರು
ನಂ.೧೬/೧೬, ೬ನೇ ಅಡ್ಡರಸ್ತೆ, ವೆಂಕಟಾಪುರ, ಕೋರಮಂಗಲ ೧ನೇ ಹಂತ, ಬೆಂಗಳೂರು-೩೪, ಮೊ:೯೯೪೫೧೫೦೩೬೫.

ಮಂಡಿ ಹರಿಯಣ್ಣ ಸ್ಮಾರಕ ಬಾಲಕರ ವಿದ್ಯಾರ್ಥಿನಿಲಯ, ಬೆಂಗಳೂರು ವಿದ್ಯಾರ್ಥಿನಿಲಯದ ವಿವರ (2019-20) :

BANGALORE BOYS HOSTEL DETAILS:

ವಿವರ: ಬಾಲಕರ ವಿದ್ಯಾರ್ಥಿನಿಲಯ
ವಿದ್ಯಾರ್ಥಿಗಳ ಸಂಖ್ಯೆ : 88
ಕೊಠಡಿಗಳ ಸಂಖ್ಯೆ: 28
ಸಿಬ್ಬಂದಿಗಳ ಸಂಖ್ಯೆ: 04


ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗ:

1.ಶ್ರೀ.ರಾಜಣ್ಣ,

ವಿದ್ಯಾರ್ಥಿ ನಿಲಯದ ಅಡಿಗೆ ಮುಖ್ಯಸ್ಥರು
ಕಾರ್ಪೇಹಳ್ಳಿ, ಶಿರಾ ತಾ., ತುಮಕೂರು ಜಿಲ್ಲೆ.

2. ಶ್ರೀಮತಿ. ನಂಜಮ್ಮ,

ವಿದ್ಯಾರ್ಥಿ ನಿಲಯದ ಅಡಿಗೆ ಸಹಾಯಕರು
ಕಾರ್ಪೇಹಳ್ಳಿ, ಶಿರಾ ತಾ||, ತುಮಕೂರು ಜಿಲ್ಲೆ


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ತುಮಕೂರು

ತುಮಕೂರು ಬಾಲಕರ ವಿದ್ಯಾರ್ಥಿನಿಲಯ

ಶ್ರೀಮಾನ್ ದಿ. ಎಂ. ಎಸ್ ಮಲ್ಲಯ್ಯನವರು ಕೇಂದ್ರ ಸಂಘದ ಕಾರ್ಯದರ್ಶಿಯಾಗಿದ್ದಾಗ 1970 ರಲ್ಲಿ ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಲು ಕ್ರಮತೆಗೆದುಕೊಂಡರು. ನಂತರ ೧೯೭೧ ರಲ್ಲಿ ಸಂಘವು ತನ್ನದೇ ಆದ ಕಟ್ಟಡವನ್ನು ವಿದ್ಯಾರ್ಥಿನಿಲಯಕ್ಕೆ ಖರೀದಿಸಿತು. ಬೆಂಗಳೂರು ರೇಸ್ ಕೋರ್ಸ್ ಹತ್ತಿರದಲ್ಲಿದ್ದ ನಿವೇಶನವನ್ನು ೧.೨೨ ಲಕ್ಷಕ್ಕೆ ಮಾರಿ ಆ ಹಣದಿಂದ ತುಮಕೂರು ವಿದ್ಯಾರ್ಥಿನಿಲಯದ ಕಟ್ಟಡವನ್ನು ೫೦೦೦೦/- ರೂಪಾಯಿಗಳಿಗೆ 1971 ರಲ್ಲಿ ಕೊಂಡುಕೊಳ್ಳಲಾಯಿತು. ಡಿಸೆಂಬರ್ 1989 ಕ್ಕೆ ಇದರ ಮೂಲ ಬೆಲೆ ೩,೦೫,೬೧೦/- ರೂ. ಆಗಿತ್ತು.
ತುಮಕೂರಿನಲ್ಲಿ ನಮ್ಮ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಮತ್ತು ಬಟವಾಡೆ ಗ್ರಾಮದಲ್ಲಿಯ ನಿವೇಶನವನ್ನು ಕೊಳ್ಳುವುದರಲ್ಲಿ ತುಮಕೂರಿನ ಪ್ರಮುಖ ವ್ಯಕ್ತಿಗಳಾದ ದಿ.ಶ್ರೀ ಡಿ.ಆರ್ ಮುದ್ದಪ್ಪ ನವರು, ಶ್ರೀ ಬಿ.ಕೆ. ಚಿಕ್ಕಣ್ಣನವರು ಮತ್ತು ಶ್ರೀ ಲಕ್ಷ್ಮೀನರಸಿಂಹಯ್ಯನವರಿಗೆ ತುಮಕೂರು ತಾಲ್ಲೂಕು ಸಂಘದ ಮತ್ತು ಕೇಂದ್ರ ಸಂಘದ ಪದಾಧಿಕಾರಿಗಳ ಸಹಕಾರ ಕೊಟ್ಟು 1987 ರಲ್ಲಿ ಕೆಲಸ ಸಾದಿಸಿದರು. ತುಮಕೂರಿನಲ್ಲಿ ಸಂಘದ ಸ್ಥಾಪನೆ ಮತ್ತು ಸಂಘದ ವಿದ್ಯಾರ್ಥಿನಿಲಯವನ್ನು ಉತ್ತಮ ರೂಪಕ್ಕೆ ತಂದು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರಿಂದ ಉದ್ಗಾಟನೆ ಮಾಡಿಸಿ, ಸಂಘವು ಅಭಿವೃದ್ಧಿಗೊಳ್ಳುವಲ್ಲಿ ಶ್ರೀ ಡಿ ರಾಮಯ್ಯನವರು, ದಿ.ಶ್ರೀ ಡಿ.ಆರ್ ಮುದ್ದಪ್ಪ ನವರು ಮತ್ತು ಶ್ರೀ ಲಕ್ಷ್ಮೀನರಸಿಂಹಯ್ಯನವರು ಸಾಕಷ್ಟು ಶ್ರಮಿಸಿದ್ದಾರೆ.ಪ್ರಸ್ತುತ ವಿದ್ಯಾರ್ಥಿನಿಲಯದ ನಿರ್ವಹಣಾ ಖರ್ಚು-ವೆಚ್ಚವನ್ನು ಕೇಂದ್ರ ಸಂಘವೇ ಭರಿಸುತ್ತಿದೆ. 1997 ರಲ್ಲಿ ತುಮಕೂರಿನ ವಿಧ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗನುಗುಣವಾಗಿ ಕೊಠಡಿಗಳ ಕೊರತೆಯುಂಟಾದಾಗ, ಕೊಡುಗೈ ದಾನಿಗಳು, ಸಮಾಜದ ಹಿರಿಯ ಬಂಧುಗಳಾದ ಒಳಕಲ್ಲು ಗ್ರಾಮದ ಶ್ರೀಯುತ ಡಿ. ರಾಮಯ್ಯ ನವರು ಸುಮಾರು ೧೨ ಲಕ್ಷ ರೂ. ಗಳ ವೆಚ್ಚದಲ್ಲಿ ತುಮಕೂರಿನಲ್ಲಿರುವ ವಿದ್ಯಾರ್ಥಿ ನಿಲಯದ ಮೊದಲನೇ ಅಂತಸ್ತಿನಲ್ಲಿ ೧೨ ಕೊಠಡಿಗಳನ್ನು ಉಚಿತವಾಗಿ ಕಟ್ಟಿಸಿಕೊಟ್ಟು ಉದಾರತೆಯನ್ನು ಮೆರೆದಿದ್ದಾರೆ. ಶ್ರೀಯುತರ ಸೇವೆ ಅನನ್ಯ ಮತ್ತು ಅಮೂಲ್ಯ ವಾದದ್ದು.
ತುಮಕೂರಿನ ವಿದ್ಯಾರ್ಥಿನಿಲಯದ ಎರಡನೇ ಅಂತಸ್ತಿನಲ್ಲಿ 2007 ರಲ್ಲಿ ತುಮಕೂರಿನ ಜನಪ್ರಿಯ ಸಂಸದರಾದ ಶ್ರೀ ಜಿ.ಎಸ್. ಬಸವರಾಜು ರವರ ಸಂಸದರ ನಿಧಿಯಿಂದ ಸುಮಾರು ೨ ಲಕ್ಷ ರೂಗಳ ವೆಚ್ಚದಲ್ಲಿ ಒಂದು ಮಿನಿ ಸಮುದಾಯ ಭವನ ವನ್ನು ನಿರ್ಮಿಸಲಾಗಿದೆ. ೨೦೧೩ ರಲ್ಲಿ ತುಮಕೂರು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ೨ ಲಕ್ಷ ರೂಗಳ ವೆಚ್ಚದಲ್ಲಿ ವಿದ್ಯಾರ್ಥಿನಿಲಯದ ಎರಡನೇ ಅಂತಸ್ಥಿನಲ್ಲಿ ೩ ಕೊಠಡಿಗಳನ್ನು ನಿರ್ಮಿಸಲಾಗಿದೆ. ವಾಣಿಜ್ಯೋದ್ಯಮಿಗಳಾದ ಶ್ರೀ ಶಿವಶಂಕರ್ ಮತ್ತು ನಿಲಯದ ಹಳೇ ವಿದ್ಯಾರ್ಥಿಗಳಾದ ಶ್ರೀ ಪದ್ಮರಾಜು ರವರು ಅಡುಗೆ ಕೊಠಡಿ, ಊಟದ ಹಾಲ್ ಮತ್ತು ಶೌಚಾಲಯ ಕೊಠಡಿಗಳನ್ನು 2013 ರಲ್ಲಿ ನವೀಕರಿಸಿಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ವತಿಯಿಂದ ನಿಲಯದ ಮುಂಭಾಗ ತಂತಿ ಕಾಂಪೌಂಡ್ ಹಾಕಿಸಲಾಗಿದೆ ಮತ್ತು ಕೇಂದ್ರ ಸಂಘದ ವತಿಯಿಂದ ನಿಲಯದ ಕಟ್ಟಡಕ್ಕೆ ಸಂಪೂರ್ಣ ಬಣ್ಣ ಬಳಿಸಿ ನವಿಕರಿಸಲಾಗಿದೆ.

ಬಾಲಕರ ವಿದ್ಯಾರ್ಥಿನಿಲಯದ ನಿಲಯ-ಸಮಿತಿ ಸದಸ್ಯರುಗಳು ವಿವರ

TUMKUR BOYS HOSTEL COMMITTEE MEMBERS

1. ಶ್ರೀ ಸಿ. ನಂಜುಂಡಯ್ಯ, ನಿಲಯ ಸಮಿತಿ ಅಧ್ಯಕ್ಷರು
ಮಾತೃಕೃಪ. ನೃಪತುಂಗ ಎಕ್ಸ್‌ಟೇಷನ್, ೧ನೇ ಮೈನ್ ೧ನೇ ಕ್ರಾಸ್ , ಶೆಟ್ಟಿಹಳ್ಳಿ ಮೈನ್ ರೋಡ್ ತುಮಕೂರು. ಮೊ ೯೮೪೪೪೭೬೬೮೬
2. ಶ್ರಿ ನಾಗರಾಜು ಪಿ, ನಿಲಯ ಸಮಿತಿ ಸದಸ್ಯರು
ಮಂಜುಶ್ರೀ ನಿಲಯ, ಎಸ್ .ಐ.ಟಿ ಮೈನ್ ರೋಡ್, ೧೩ ನೇ ಕ್ರಾಸ್ ಎಸ್ ಐ ಟಿ ಎಕ್ಸ್‌ಟೆನ್ಷನ್, ತುಮಕೂರು. ಮೊ: ೯೯೮೬೫೦೧೯೯೬.
3. ಶ್ರೀ ಡಿ. ನಾಗರಾಜಯ್ಯ, ನಿಲಯ ಸಮಿತಿ ಸದಸ್ಯರು
ವೆಂಕಟೇಶ್ವರ ಕೃಪ, ೧೨ ನೇ ಕ್ರಾಸ್, ಅಶೋಕ ಸೋಪ್ ಪ್ಯಾಕ್ಟರಿ ಹತ್ತಿರ, ಎಸ್,ಎಸ್,ಪುರಂ. ತುಮಕೂರು. ಮೊ: ೯೧೪೧೬೬೦೪೦೬
4. ಶ್ರೀ ಶಿವಕುಮಾರ್ ಕೆ.ಜೆ., ನಿಲಯ ಸಮಿತಿ ಸದಸ್ಯರು
ನಂ.೩, ೫ನೇ ಮುಖ್ಯ ರಸ್ತೆ, ಜಯನಗರ ವೆಸ್ಟ್, ತುಮಕೂರು -೨. ಮೊ:೯೮೪೪೨೯೬೪೦೮
5. ಶ್ರೀ ಬಿ.ಎನ್. ನಾಗರಾಜು, ನಿಲಯ ಸಮಿತಿ ಸದಸ್ಯರು
ಪರ್ಣಕುಟೀರ, ೩ನೇ ಮುಖ್ಯರಸ್ತೆ, ಸಿದ್ದರಾಮೇಶ್ವರ ಬಡಾವಣೆ-ಪೂರ್ವ, ತುಮಕೂರು-೫೭೨೦೧೦೩. ಮೊ:೯೫೯೦೧೫೦೦೧೪
5. ಶ್ರೀ ನಾರಾಯಣಪ್ಪ, ನಿಲಯ ಸಮಿತಿ ಸದಸ್ಯರು
೧ ನೇ ಅಡ್ಡ ರಸ್ತೆ, ಆದರ್ಶ ನಗರ, ತುಮಕೂರು. ಮೊ ೯೮೪೪೪೭೬೬8
5. ಶ್ರೀ ನಾರಾಯಣಪ್ಪ, ನಿಲಯ ಪಾಲಕರು
೧ ನೇ ಮೈನ್, ೨ ನೇ ಅಡ್ಡ ರಸ್ತೆ, ನೃಪತುಂಗ ಎಕ್ಸ್‌ಟೇಷನ್, ಶೆಟ್ಟಿಹಳ್ಳಿ ಮುಖ್ಯ ರಸ್ತೆ, ತುಮಕೂರು. ಮೊ ೯೮೪೪೪೭೬೬8೬

ವಿದ್ಯಾರ್ಥಿನಿಲಯಗಳ ವಿವರ:

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ತುಮಕೂರು ಶಾಖೆ, ವಿದ್ಯಾರ್ಥಿನಿಲಯಗಳ ವಿವರ:
TUMKUR HOSTELS DETAILS:

ವಿವರ: ಬಾಲಕರ ವಿದ್ಯಾರ್ಥಿನಿಲಯ ಬಾಲಕಿಯರ ವಿದ್ಯಾರ್ಥಿನಿಲಯ
ವಿದ್ಯಾರ್ಥಿಗಳ ಸಂಖ್ಯೆ : 77 36
ಕೊಠಡಿಗಳ ಸಂಖ್ಯೆ: 32 07
ಸಿಬ್ಬಂದಿಗಳ ಸಂಖ್ಯೆ: 04 03


ತುಮಕೂರು ಬಾಲಕರ ವಿದ್ಯಾರ್ಥಿನಿಲಯದ ಸಿಬ್ಬಂದಿ ವರ್ಗ:

1. ಶ್ರೀ. ಶಿವರಾಂ ಭಟ್, ವಿದ್ಯಾರ್ಥಿ ನಿಲಯದ ಅಡಿಗೆ ಮುಖ್ಯಸ್ಥರು
ಹೆಗ್ಗೆರೆ, ತುಮಕೂರು.
2. ಶ್ರೀ. ರಂಗಾರೆಡ್ಡಿ, ವಿದ್ಯಾರ್ಥಿ ನಿಲಯದ ಅಡಿಗೆ ಸಹಾಯಕರು
ವೆಂಕಟಾಪುರ,ಆಂದ್ರಪ್ರದೇಶ


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಮಧುಗಿರಿ

ಮಧುಗಿರಿ ಬಾಲಕರ ವಿದ್ಯಾರ್ಥಿನಿಲಯ

ಮಧುಗಿರಿಯಲ್ಲಿ ದಿ||ಪಿ.ಕೆ.ನಂಜುಂಡಯ್ಯನವರು ದಾನಮಾಡಿದ ಕಟ್ಟಡದ ದಿ: 01-07-1948 ರಲ್ಲಿ ದಿ.ಎಂ.ಜೆ ಲಿಂಗಣ್ಣನವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ನಿಲಯ ಪ್ರಾರಂಭವಾಯಿತು.ಶ್ರೀಯುತ ಎಂ.ಎನ್ ಬಸಪ್ಪ ಮತ್ತು ಎಂ.ಎನ್ ಕಪ್ಪಣ್ಣ ರವರುಗಳು ದಾನವಾಗಿ ನೀಡಿದ್ದ ಕಟ್ಟಡದಲ್ಲಿ 1948 ರಲ್ಲಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಲಾಗಿ, ಸದರಿ ಕಟ್ಟಡ ಶಿಥಿಲಾವಸ್ಥೆ ತಲುಪಿದಾಗ ಮಧುಗಿರಿ ತಾಲ್ಲೂಕು ಸಂಘದ ಕಾರ್ಯಾಧ್ಯಕ್ಷರಾದ ಶ್ರೀಯುತ ಎಂ.ಕೆ ನಂಜುಂಡಯ್ಯನವರು (ರಾಜು) ಮತ್ತು ಪದಾಧಿಕಾರಿಗಳ ಅವಿರತ ಪರಿಶ್ರಮದಿಂದ ಹಾಗೂ ಡಾ|| ಶಿವು ರವರ ಧನ ಸಹಾಯದಿಂದ ಸುಮಾರು ೪೦ ಚದುರ ಕಟ್ಟಡವನ್ನು ನೂತನವಾಗಿ ನಿರ್ಮಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಅನುವು ಮಾಡಿಕೊಡಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂದಿನಿಂದಲೂ ಶ್ರದ್ದೆವಹಿಸಿ ವ್ಯವಸ್ಥಿತವಾಗಿ ಸ್ಥಳೀಯ ಮುಖಂಡರು ನಿರ್ವಹಿಸಿಕೊಂಡು ಬರುತ್ತಿದ್ದು ಶ್ರೀಯುತರ ಕಾರ್ಯ ಅಭಿನಂದನೀಯ.
 
Hostels in Koratagere

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಕೊರಟಗೆರೆ

ಕೊರಟಗೆರೆ ಪಟ್ಟಣದಲ್ಲಿ ಸಂಘದ ಸ್ವತ್ತಿನಲ್ಲಿ ಶ್ರೀಯುತ ಡಾ|| ಮುಖ್ಯ ಮಂತ್ರಿ ಚಂದ್ರು ರವರ ಅನುದಾನ ೧೫ ಲಕ್ಷ ರೂಗಳೊಂದಿಗೆ ಮತ್ತು ದಾನಿಗಳ ಸಹಕಾರದಿಂದ ಸುಸಜ್ಜಿತ ಸಮುದಾಯ ಭವನವನ್ನು ಶ್ರೀಯುತ ಎ.ಡಿ ಬಲರಾಮಯ್ಯ ನವರು ಮತ್ತು ಕೊರಟಗೆರೆ ತಾಲ್ಲೂಕು ಸಮಿತಿ ಸದದ್ಯರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದೆ.
ಕೊರಟಗೆರೆ ಪಟ್ಟಣದಲ್ಲಿ ಸಂಘದ ಸುಸಜ್ಜಿತ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ನೆರವೇರುತ್ತಿದೆ.
 
Hostels in Sira

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಶಿರಾ

ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಕಡವಿಗೆರೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ -೪ ರ ಪಕ್ಕದಲ್ಲೆ ಶ್ರೀಯುತ ಕೆ.ಆರ್ ಕರೇಗೌಡರು ೨೫-೦೨-೨೦೦೪ ರಂದು ದಾನವಾಗಿ ನೀಡಿದ ೨೦ ಗುಂಟೆ ಜಮೀನಿನಲ್ಲಿ ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅನುದಾನದಲ್ಲಿ ನೀಡಲಾದ ೧೫ ಲಕ್ಷ ರೂಗಳ ಮತ್ತು ದಾನಿಗಳ ಸಹಕಾರದಿಂದ ಸಮುದಾಯ ಭವನ ನಿರ್ಮಾಣ ವಾಗುತ್ತಿದೆ ಮತ್ತು ಇದಲ್ಲದೇ ಶಿರಾ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸಂಘದ ಉಪಯೋಗಕ್ಕಾಗಿ ೨೦ ಗುಂಟೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ.
ಶಿರಾ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸಂಘದ ಉಪಯೋಗಕ್ಕಾಗಿ ಮಂಜೂರಾಗಿರುವ ೨೦ ಗುಂಟೆ ಜಮೀನಿನಲ್ಲಿ ಶಿರಾ ತಾಲ್ಲೂಕು ಶಾಖೆಯ ಕಛೇರಿ ಕಟ್ಟಡವನ್ನು ನಿರ್ಮಿಸಲು ಅಡಿಪಾಯ ಹಾಕಿದ್ದು, ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.
 
Hostels in Madhugiri


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಮಧುಗಿರಿ

ಮಧುಗಿರಿಯಲ್ಲಿ ದಿ||ಪಿ.ಕೆ.ನಂಜುಂಡಯ್ಯನವರು ದಾನಮಾಡಿದ ಕಟ್ಟಡದ ದಿ: 01-07-1948 ರಲ್ಲಿ ದಿ.ಎಂ.ಜೆ ಲಿಂಗಣ್ಣನವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ನಿಲಯ ಪ್ರಾರಂಭವಾಯಿತು.ಶ್ರೀಯುತ ಎಂ.ಎನ್ ಬಸಪ್ಪ ಮತ್ತು ಎಂ.ಎನ್ ಕಪ್ಪಣ್ಣ ರವರುಗಳು ದಾನವಾಗಿ ನೀಡಿದ್ದ ಕಟ್ಟಡದಲ್ಲಿ 1948 ರಲ್ಲಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಲಾಗಿ, ಸದರಿ ಕಟ್ಟಡ ಶಿಥಿಲಾವಸ್ಥೆ ತಲುಪಿದಾಗ ಮಧುಗಿರಿ ತಾಲ್ಲೂಕು ಸಂಘದ ಕಾರ್ಯಾಧ್ಯಕ್ಷರಾದ ಶ್ರೀಯುತ ಎಂ.ಕೆ ನಂಜುಂಡಯ್ಯನವರು (ರಾಜು) ಮತ್ತು ಪದಾಧಿಕಾರಿಗಳ ಅವಿರತ ಪರಿಶ್ರಮದಿಂದ ಹಾಗೂ ಡಾ|| ಶಿವು ರವರ ಧನ ಸಹಾಯದಿಂದ ಸುಮಾರು ೪೦ ಚದುರ ಕಟ್ಟಡವನ್ನು ನೂತನವಾಗಿ ನಿರ್ಮಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಅನುವು ಮಾಡಿಕೊಡಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂದಿನಿಂದಲೂ ಶ್ರದ್ದೆವಹಿಸಿ ವ್ಯವಸ್ಥಿತವಾಗಿ ಸ್ಥಳೀಯ ಮುಖಂಡರು ನಿರ್ವಹಿಸಿಕೊಂಡು ಬರುತ್ತಿದ್ದು ಶ್ರೀಯುತರ ಕಾರ್ಯ ಅಭಿನಂದನೀಯ.
ಇದಲ್ಲದೆ ಬಿಜವರ ಗ್ರಾಮದ ಶ್ರೀಯುತ ಬಿ.ಎಂ ಲಕ್ಷ್ಮೀಪತಿಯವರ ಸಹಕಾರ ಮತ್ತು ಆಶಯದಿಂದ ಮಧುಗಿರಿಯಲ್ಲಿ ಒಂದು ಕಟ್ಟಡವನ್ನು ಗುತ್ತಿಗೆಗೆ ಪಡೆದು ವಿದ್ಯಾರ್ಥಿನಿ ನಿಲಯವನ್ನು ಮಧುಗಿರಿಯಲ್ಲಿ 2012 ರಲ್ಲಿ ಪ್ರಾರಂಭವಾಯಿತು. 2013 ರಲ್ಲಿ ಮಧುಗಿರಿಯಲ್ಲಿ ೩೦X೪೦ ಅಳತೆಯ ಎರಡು ನಿವೇಶನಗಳ ಖರೀದಿಸಿಲಾಗಿ ಸದರಿ ನಿವೇಶನಗಳಲ್ಲಿ ಒಂದು ನಿವೇಶನವನ್ನು ಶ್ರೀಯುತ ಬಿ.ಎನ್ ಲಕ್ಷ್ಮೀಪತಿಯವರು ದಾನವಾಗಿ ನೀಡಿರುತ್ತಾರೆ, ಮತ್ತೊಂದು ನಿವೇಶನವನ್ನು ಮಧುಗಿರಿ ತಾಲ್ಲೂಕು ಸಂಘದ ಖಜಾಂಚಿಗಳಾದ ಶ್ರೀಯುತ ನಾಗರಾಜು ಗೌಡರು ಖರೀದಿಸಲು ಸಹಕರಿಸಿರುತ್ತಾರೆ. ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ೧೫ ಲಕ್ಷ ರೂಗಳ ಅನುದಾನ ಮತ್ತು ದಾನಿಗಳ ಸಹಕಾರದಿಂದ ಸಂಘದ ಮಹಿಳಾ ವಿದ್ಯಾರ್ಥಿನಿ ನಿಲಯವನ್ನು ಸದರಿ ನಿವೇಶನದಲ್ಲಿ ನಿರ್ಮಿಸಲಾಗಿದ್ದು, ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅಮೃತ ಹಸ್ತದಿಂದ 2014 ರಲ್ಲಿ ಉದ್ಘಾಟಿಸಲಾಯಿತು.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಗಂಗಮ್ಮ ಮತ್ತು ಶ್ರೀ ಸಿದ್ದೇಗೌಡರು, ದೊಡ್ಡಮಾಲೂರು. ಇವರು ದಾನವಾಗಿ ನೀಡಿರುವ ನಿವೇಶನದಲ್ಲಿ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಅನುದಾನದಲ್ಲಿ ಮತ್ತು ಧಾನಿಗಳ ಸಹಾಯದಿಂದ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು ಕಟ್ಟಡದ ಅಂತಿಮ ಹಂತದ ನಿರ್ಮಾಣ ಕಾರ್ಯ ನೆರವೇರಿದೆ.
ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ಡಾ|| ಮುಖ್ಯಮಂತ್ರಿ ಚಂದ್ರುರವರ ಅನುದಾನದಲ್ಲಿ ಬಿಡುಗಡೆ ಮಾಡಿರುವ ೧೦ ಲಕ್ಷ ರೂ ಹಣದ ಜೊತೆಗೆ ಕೊಡಿಗೇನಹಳ್ಳಿ ಹೋಬಳಿ ಪದಾಧಿಕಾರಿಗಳ ಪರಿಶ್ರಮ ಮತ್ತು ದಾನಿಗಳಿಂದ ಸಂಗ್ರಹಿಸಿರುವ ಹಣ ಹಾಗೂ ಕೇಂದ್ರ ಸಂಘದಿಂದ ೨.೬೦ ಲಕ್ಷ ರೂಗಳನ್ನು ಸೇರಿಸಿ ನಿರ್ಮಿಸಿರುವ ಸಮುದಾಯ ಭವನವನ್ನು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಇದರ ಒಟ್ಟು ಅಂದಾಜು ಮೊತ್ತ ೨೩ ಲಕ್ಷ ರೂಗಳು.
ಮಧುಗಿರಿ ತಾಲ್ಲೂಕು ಬ್ಯಾಲ್ಯಾ ಗ್ರಾಮದಲ್ಲಿ ಗ್ರಾಮ ಶಾಖೆಯ ಅಧ್ಯಕ್ಷರಾದ ಶ್ರೀ. ಕೆ. ನಂಜೇಗೌಡರು, ಸಮಸ್ತ ಗ್ರಾಮಸ್ಥರು ಮತ್ತು ಸದಸ್ಯರುಗಳಾದ ಶ್ರೀ ಬಿ.ಹೆಚ್. ನಂಜುಂಡಯ್ಯ, ಶ್ರೀ ಮುದ್ದೀರಪ್ಪ, ಶ್ರೀ ನಟರಾಜ್, ಶ್ರೀ ಕೃಷ್ಣಪ್ಪ ಎಮ್. ಶ್ರೀ ಶಿವಕುಮಾರ್ ಮತ್ತು ದಾನಿಗಳು ಸಹಕಾರದಿಂದ ೩೦X೫೦ ಅಳತೆಯ ನಿವೇಶನವನ್ನು ೧.೮೦ ಲಕ್ಷಗಳಿಗೆ ಖರೀದಿಸಿಲಾಗಿ ರೂ. ೧೫೦೦೦/- ನೋಂದಣಿ ಖರ್ಚನ್ನು ಕೇಂದ್ರ ಸಂಘ ಭರಿಸಿ ಸಂಘಕ್ಕೆ ನೋಂದಣಿ ಮಾಡಿಸಲಾಗಿದೆ. (ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ. ೩.೫೦ ಲಕ್ಷ) ಸದರಿ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ.
 
Hostels in Magadi

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಶಿರಾ

ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಕಡವಿಗೆರೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ -೪ ರ ಪಕ್ಕದಲ್ಲೆ ಶ್ರೀಯುತ ಕೆ.ಆರ್ ಕರೇಗೌಡರು ೨೫-೦೨-೨೦೦೪ ರಂದು ದಾನವಾಗಿ ನೀಡಿದ ೨೦ ಗುಂಟೆ ಜಮೀನಿನಲ್ಲಿ ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅನುದಾನದಲ್ಲಿ ನೀಡಲಾದ ೧೫ ಲಕ್ಷ ರೂಗಳ ಮತ್ತು ದಾನಿಗಳ ಸಹಕಾರದಿಂದ ಸಮುದಾಯ ಭವನ ನಿರ್ಮಾಣ ವಾಗುತ್ತಿದೆ ಮತ್ತು ಇದಲ್ಲದೇ ಶಿರಾ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸಂಘದ ಉಪಯೋಗಕ್ಕಾಗಿ ೨೦ ಗುಂಟೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ.
ಶಿರಾ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸಂಘದ ಉಪಯೋಗಕ್ಕಾಗಿ ಮಂಜೂರಾಗಿರುವ ೨೦ ಗುಂಟೆ ಜಮೀನಿನಲ್ಲಿ ಶಿರಾ ತಾಲ್ಲೂಕು ಶಾಖೆಯ ಕಛೇರಿ ಕಟ್ಟಡವನ್ನು ನಿರ್ಮಿಸಲು ಅಡಿಪಾಯ ಹಾಕಿದ್ದು, ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.
 
<< Start < Prev 1 2 Next > End >>