ಮುಖಪುಟ ಉನ್ನತ ವಿದ್ಯಾವಂತರು / ಅಧಿಕಾರಿಗಳು
ಉನ್ನತ ಅಧಿಕಾರಿಗಳು ಮತ್ತು ವಿದ್ಯಾವಂತ ಭಂದುಗಳು

ಸಮಾಜದ ಉನ್ನತ ವಿದ್ಯಾವಂತ ಭಂದುಗಳು


SADARA HIGHLY EDUCATED PEOPLE/OFFICERS


ಹೆಚ್. ಶಶಿಧರ್, ಐ.ಎ.ಎಸ್.: ಶ್ರೀಮತಿ ಲಕ್ಷ್ಮೀದೇವಮ್ಮ ಮತ್ತು ಶ್ರೀ ಪಿ.ಹೊನ್ನಪ್ಪರವರ ನಾಲ್ಕನೇ ಪುತ್ರರಾದ ಶ್ರೀ ಹೆಚ್.ಶಶಿಧರ್‌ರವರು ಬೆಂಗಳೂರಿನಲ್ಲಿ ಜನಿಸಿ. ಭೂ ವಿಜ್ಞಾನದಲ್ಲಿ ಬಿ.ಎಸ್ಸಿ, ಎಂ.ಎಸ್ಸಿ, ಮತ್ತು ಎಂ.ಫಿಲ್. ಪದವಿಗಳನ್ನು ಪಡೆದಿರುತ್ತಾರೆ. ಈಗ ಬರಗಾಲ ಪೀಡಿತ ಪ್ರದೇಶಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪಿ.ಹೆಚ್.ಡಿ. ಪದವಿಗೆ ಅಭ್ಯಸಿಸಲು ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿಯಾಗಿರುತ್ತಾರೆ. ಸರ್ಕಾರಿ ಸೇವೆಗೆ ಸೇರುವ ಮೊದಲು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಯೋಜನೆಯಡಿಯಲ್ಲಿ ಸೀನಿಯರ್ ರೀಸರ್ಚ್ ಫೆಲೋ ಆಗಿ ೧೯೭೬ ರಿಂದ ೧೯೭೮ ರ ವರೆಗೆ ಸೇವೆ ಸಲ್ಲಿಸಿರುತ್ತಾರೆ. ವಿದ್ಯಾರ್ಥಿಯಾಗಿ ಹಾಗೂ ಅಂತರ ರಾಷ್ಟ್ರೀಯ ನಿಯಮ ಕಾಲಿಕಗಳಲ್ಲಿ ಪ್ರಕಟವಾಗಿರುತ್ತವೆ. ಕರ್ನಾಟಕ ಲೋಕ ಸೇವಾ ಆಯೋಗವು ೧೯೭೬ರಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊಟ್ಟ ಮೊದಲನೆಯವರಾಗಿ ಸ್ಥಾನ ಪಡೆದು ಪ್ರೊಭೇಷನರಿ ಅಸಿಸ್ಟೆಂಟ್ ಕಮಿಷನರ್ ಆಗಿ ಸರ್ಕಾರಿ ಸೇವೆಯನ್ನು ಪ್ರಾರಂಭಿಸಿ. ಹುಣಸೂರು ಉಪವಿಭಾಗಾಧಿಕಾರಿ, ಮಹದೇಶ್ವರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ, ಗೃಹ, ಆರೋಗ್ಯ, ಕೃಷಿ ಮತ್ತು ಅರಣ್ಯ ಸಚಿವರುಗಳ ಆಪ್ತ ಕಾರ್ಯದರ್ಶಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಸಚಿವ, ಗ್ರಾಮೀಣ ಮತ್ತು ಪಂಚಾಯತ್‌ರಾಜ್ ಸಚಿವಾಲಯದಲ್ಲಿ ಉಪ ಆಯುಕ್ತ ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕ, ಬೆಂಗಳೂರು ನಗರ ಭೂಪರಿಮಿತಿ ಜಿಲ್ಲಾಧಿಕಾರಿಯನ್ನೊಳಗೊಂಡಂತೆ ಇನ್ನಿತರ ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿರುತ್ತಾರೆ. ಶ್ರದ್ದೆ ಮತ್ತು ದಕ್ಷತೆಯಿಂದ ಕೆಲಸ ನಿರ್ವಹಿಸಿರುವ ಇವರಿಗೆ ಸರ್ಕಾರ ಮತ್ತು ಮೇಲಾಧಿಕಾರಗಳಿಂದ ಹಲವಾರು ಪ್ರಶಸ್ತಿ, ಪುರಸ್ಕಾರ, ಅಭಿನಂದನೆ ಮತ್ತು ಮೆಚ್ಚುಗೆ ಪತ್ರಗಳಿಗೆ ಪಾತ್ರರಾಗಿರುತ್ತಾರೆ. ೧೯೯೩ ರಲ್ಲಿ ಭಾರತೀಯ ಆಡಳಿತ ಸೇವೆಗೆ ಬಡ್ತಿ ಹೊಂದಿದಂದಿನಿಂದ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಲೆಕ್ಕಪರಿಶೋಧನ ಇಲಾಖೆಯ ನಿರ್ದೇಶಕರಾಗಿ ಕೆಲಸ ನಿರ್ವಹಿಸಿರುತ್ತಾರೆ.

ಡಿ. ನರಸಿಂಹರಾಜು, ಐ.ಎ.ಎಸ್., ಬೆಂಗಳೂರು : ಡಾ|| ಕೆ.ನರಸಪ್ಪನವರ ಪುತ್ರರಾಗಿ ೨೮-೦೪-೧೯೫೬ ರಲ್ಲಿ ಜನಿಸಿದರು. ೧೯೭೭ರಲ್ಲಿ ಎಂ.ಎಸ್.ಸಿ ಹಾರ‍್ಟಿಕಲ್ಚರ್ ಪದವೀಧರರಾದರು. ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಮತ್ತು ಮಂಡ್ಯ ವಿ.ಸಿ.ಫಾರಂನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ೧೯೮೧ರವರೆಗೂ ಕೆಲಸ ಮಾಡಿದರು. ಕರ್ನಾಟಕ ಸರ್ಕಾರದಲ್ಲಿ ಎ.ಸಿ.ಟಿ.ಒ ಆಗಿ ೧೯೮೩ ರಲ್ಲಿ ಸೇರಿ ಕೆಲಸ ಮಾಡಿದರು. ೧೯೮೪ ರಲ್ಲಿ ಐ.ಎ.ಎಸ್. ಪರೀಕ್ಷೆಯಲ್ಲಿ ೪೧ ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿ ಐ.ಎ.ಎಸ್. ಪ್ರೊಬೇಷನರ್ ಆಗಿ ಕೆಲಸಕ್ಕೆ ಸೇರಿ, ಕಾಲಕಾಲಕ್ಕೆ ಬಡ್ತಿ ಹೊಂದಿ ಈಗ ಕೇಂದ್ರ ಸರ್ಕಾರದಲ್ಲಿ ಉಪಕಾರ ದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಜನಾಂಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನೇರವಾಗಿ ಐ.ಎ.ಎಸ್. ಪದವಿಗೆ ನೇಮಕಗೊಂಡವರಲ್ಲಿ ಇವರು ಮೊದಲಿಗರು.

ಡಾ|| ಹೊನ್ನೇಗೌಡರು, ಎಂಎ.ಎಸ್ಸಿ., ಪಿ.ಹೆಚ್.ಡಿ,. : ಡಾ|| ಹೊನ್ನೇಗೌಡರು ಪುಟ್ಟತಾಯಮ್ಮ ಮತ್ತು ಮುದ್ದಪ್ಪನವರ ಮಗನಾಗಿ ಬೆಂಗಳೂರು ಉತ್ತರ ತಾಲ್ಲೂಕು ಸೊಂಡೇಕೊಪ್ಪ ಗ್ರಾಮದಲ್ಲಿ ಜನಿಸಿದರು. ಇವರು ಬೆಂಗಳೂರು ವೆಟರಿನರಿ ಕಾಲೇಜಿನ ಪದವಿಯನ್ನು ೧೯೬೭ ರಲ್ಲಿ ಮತ್ತು ಎಂ.ವಿ.ಎಸ್ಸಿ. ಪದವಿಯನ್ನು ೧೯೭೩ ರಲ್ಲಿ ಪಡೆದಿರುತ್ತಾರೆ. ನಮ್ಮ ಜನಾಂಗದಲ್ಲಿಯೇ ಒಂದು ಮೈಲಿಗಲ್ಲು ಎಂದು ಹೇಳಬಹುದಾದ ಸಾಧನೆಯೆಂದರೆ ಪಶುವೈದ್ಯಕೀಯ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ೧೯೭೩ ರಲ್ಲಿ ಪಡೆದು, ತರುವಾಯ ಅದೇ ಔಷಧ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದವರಲ್ಲಿ ನಮ್ಮ ಜನಾಂಗದಲ್ಲಿ ಮೊದಲಿಗರು. ಪಶುವೈದ್ಯ ಇಲಾಖೆಯಲ್ಲಿಯೇ ಬೋಧಕರಾಗಿ ಸೇರಿ ಅಲ್ಲಿಯೇ ಅಸಿಸ್ಟೆಂಟ್ ಪ್ರೊಫೆಸರಾಗಿ, ಅಸೋಸಿಯೇಟ್ ಪ್ರೊಫೆಸರಾಗಿ ೧೯೮೦ ರ ದಶಕದಲ್ಲಿ ಔಷಧಿ ವಿಜ್ಞಾನದಲ್ಲಿ ಪ್ರೊಫೆಸರಾಗಿ ಸಹ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ವಿದ್ಯಾರ್ಥಿನಿಲಯದ ಕಮಿಟಿಯ ಸೆಕ್ರಟರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಡಾ|| ಮುನಿಯಪ್ಪ, ಎಂ.ವಿ.ಎಸ್ಸಿ., ಪಿ.ಹೆಚ್.ಡಿ,. : ಡಾ|| ಮುನಿಯಪ್ಪನವರು ಲಿಂಗಣ್ಣನವರ ಮಗನಾಗಿ ಕಂಪಸಾಗರ ಊರಲ್ಲಿ ಜನಿಸಿದರು. ಡಾ|| ಮುನಿಯಪ್ಪನವರು ೧೯೭೧ ರಲ್ಲಿ ಪದವೀಧರರಾಗಿ, ಸ್ವಲ್ಪ ಕಾಲದವರೆಗೆ ಶಿಕ್ಷಕರಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ತರುವಾಯ ಉತ್ತರ ಭಾರತದ ಪಂತನಗರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ೧೯೭೩ ರಲ್ಲಿ ಪಡೆದ ಮೇಲೆ ಮತ್ತೆ ಬೆಂಗಳೂರು ವೆಟರಿನರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಬಲ್ಗೇರಿಯಾದಲ್ಲಿ ೧೯೮೬ ರಲ್ಲಿ ಪಶುವಿಶಾಣು ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದವರಲ್ಲಿ ನಮ್ಮ ಮತದಲ್ಲಿ ಎರಡನೆಯವರು, ಇವರು ಈಗಲೂ ವೆಟರಿನರಿ ಕಾಲೇಜು, ಹೆಬ್ಬಾಳದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.

ಪ್ರೊ|| ಮೃತ್ಯುಂಜಯಣ್ಣನವರು, ಎಂ.ಬಿ.ಬಿ.ಎಸ್., ಎಂ.ಡಿ.,: ಅತ್ತಿಬೆಲೆ ಗ್ರಾಮದ ದಿ.ಶ್ರೀ ಪತ್ರಪ್ಪ ಮತ್ತು ಶ್ರೀಮತಿ ಅಕ್ಕಯ್ಯಮ್ಮನವರು ಪುತ್ರರಾಗಿ ಜನಿಸಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಮತ್ತು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಪದವೀಧರರಾದರು. ನಿಮ್ಹಾನ್ಸ್‌ನಲ್ಲಿ ಡಿ.ಎಂ. ನ್ಯೂರಾಲಜಿ ಪದವಿ ಪಡೆದರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನ್ಯೂರಾಲಜಿ ಪ್ರೊಫೆಸರಾಗಿ ಕೆಲಸ ಮಾಡುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂರಾಲಜಿ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇವರು ಒಬ್ಬ ಖ್ಯಾತ ನುರಿತ ವೈದ್ಯರು.

ಡಾ|| ಎ.ಆರ್.ರಾಮಚಂದ್ರರವರು, ಎಂ.ಬಿ.ಬಿ.ಎಸ್., ಎಂ.ಡಿ. : ಅತ್ತಿಬೆಲೆ ರಾಮಯ್ಯನವರ ಪುತ್ರರಾಗಿ ಜನಿಸಿದರು. ಎಂ.ಬಿ.ಬಿ.ಎಸ್. ಪದವೀಧರರಾದ ಮೇಲೆ ೧೯೬೩ ರಲ್ಲಿ ಮಿಲಿಟರಿಯಲ್ಲಿ ರೆಜಿಮೆಂಟಲ್ ಮೆಡಿಕಲ್ ಆಫೀಸರಾಗಿ ಮಹಾರಾಷ್ಟ್ರದ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್, ಬೆಳಗಾಂನಲ್ಲಿ ಕೆಲಸ ಮಾಡಿದರು. ನಂತರ ದೆಹಲಿಯಲ್ಲಿ ಎಂ.ಡಿ. ಪದವೀಧರರಾಗಿ ೧೯೭೧-೭೪ ಬಳ್ಳಾರಿಯ ಹೆಡ್ ಕ್ವಾರ‍್ಟರ‍್ಸ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿ ೧೯೭೪ ರಿಂದ ೭೬ ರವರೆಗೂ ನಿಮ್ಹಾನ್ಸ್ ಮತ್ತು ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿಯೂ, ನಂತರ ೧೯೭೬-೮೦ ಬೋರಿಂಗ್ ಹಾಸ್ಪಿಟಲ್‌ನಲ್ಲಿ ಆರ್.ಎಂ.ಓ ಆಗಿಯೂ ಕೆಲಸ ಮಾಡಿದ್ದಾರೆ. ೧೯೮೦-೮೬ ರಿಂದ ಕಾರವಾದಲ್ಲಿ ಡಿಸ್ಟ್ರಿಕ್ಟ್ ಸರ್ಜನ್ ಆಗಿಯೂ ಮತ್ತೆ ೧೯೮೨ ಬೋರಿಂಗ್ ಆಸ್ಪತ್ರೆಯಲ್ಲಿ ಆರ್.ಎಂ.ಓ. ಆಗಿಯೂ, ಜಯನಗರದ ಜನರಲ್ ಆಸ್ಪತ್ರೆಯಲ್ಲಿ ಸೂಪರಿಂಟೆಂಡೆಂಟ್ ಆಗಿಯೂ ಕೆಲಸ ಮಾಡಿದ್ದಾರೆ. ೧೯೮೯-೯೦ರಲ್ಲಿ ಗೌರ‍್ನಮೆಂಟ್ ಮೆಡಿಕಲ್ ಸ್ಟೋರ‍್ಸ್‌ನ ಜಂಟಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೯೧ ರಿಂದ ಏಪ್ರಿಲ್ ೯೧ ರವರೆಗೂ ಬೆಂಗಳೂರು ಡಿವಿಜನ್ನಿನ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾಗಿ ಕೆಲಸ ಮಾಡಿ ಏಪ್ರಿಲ್ ೯೧ ರಲ್ಲಿ ಕೆಲಸದಿಂದ ನಿವೃತ್ತಿ ಹೊಂದಿದರು. ಹಾಲಿ ಆಡಳಿತಾಧಿಕಾರಿಯಾಗಿ ಕೆಂಪೇಗೌಡ ಮೆಡಿಕಲ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ||. ನರಸಪ್ಪ, ಎಂ.ಬಿ.ಬಿ.ಎಸ್.,: ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಜನಿಸಿದರು. ದಿ. ಶ್ರೀ ಮಂಡಿ ಹರಿಯಣ್ಣನವರ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯಾಗಿ ಎಲ್.ಎಂ.ಪಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೆಲಸಕ್ಕೆ ೧೯೫೨ ರಲ್ಲಿ ಸೇರಿದರು. ೧೯೬೯ರಲ್ಲಿ ಎಂ.ಬಿ.ಬಿ.ಎಸ್. ಪದವೀಧರರಾದರು. ಗೆಜೆಟೆಡ್ ಆಫೀಸರಾಗಿ ೧೯೬೬ರಲ್ಲಿ ಬಡ್ತಿ ಹೊಂದಿದರು. ೧೯೮೨ ರಲ್ಲಿ ನಿವೃತ್ತಿ ಹೊಂದುವ ಸಮಯದಲ್ಲಿ ಡೆಪ್ಯೂಟಿ ಸರ್ಜನ್ ಆಗಿ ಬಡ್ತಿ ಹೊಂದಿದರು. ಸಂಘದ ಸದಸ್ಯರಾಗಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.

ಡಾ|| ನಾರಾಯಣ್‌ರವರು, ಬೆಂಗಳೂರು.: ಗೌರಿಬಿದನೂರು ತಾಲ್ಲೂಕು ಗೊಟಕಣಾಪುರದ ದಿ.ಶ್ರೀ ನಂಜುಂಡಗೌಡ ಮತ್ತು ದಿ. ಶ್ರೀಮತಿ ಚೆನ್ನಮ್ಮನವರ ಪುತ್ರರಾಗಿ ಜನಿಸಿದರು. ದಿ. ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಎಂ.ಎಸ್ಸಿ ಪದವೀಧರರಾದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದರು. ನಮ್ಮವರಲ್ಲಿ ಮೊದಲ ಬಾರಿಗೆ ಹೊರದೇಶಕ್ಕೆ ಹೋಗಿ ಇಂಗ್ಲೆಂಡಿನಲ್ಲಿ ಡಾಕ್ಟರೇಟ್ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನಲ್ಲಿ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಆದರು. ತಾವು ನಿವೃತ್ತಿ ಹೊಂದಿದ ಮೇಲೆ ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿಯೂ ಐದು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ.

ಸೂರ್ಯನಾರಾಯಣಗೌಡರು, ಕಲ್ಲುಮರಿ ; ಆಂಧ್ರಪ್ರದೇಶ, ಮಡಕಶಿರಾ ತಾಲ್ಲೂಕು ಕಲ್ಲುಮರಿಯಲ್ಲಿ ದಿ.ಶ್ರೀನರಸೇಗೌಡರ ಪುತ್ರರಾಗಿ ೧೯೫೫ ರಲ್ಲಿ ಜನಿಸಿದರು. ಬಿ.ಕಾಂ, ಬಿ.ಎಲ್ ಪದವಿ ಪಡೆದು ವಕೀಲ ವೃತ್ತಿಯನ್ನು ಆರಂಭಿಸಿದರು. ಇವರ ಪ್ರತಿಭೆಯನ್ನು ಗುರುತಿಸಿ ಆಂಧ್ರಪ್ರದೇಶ ಸರ್ಕಾರವು ಇವರನ್ನು ಪ್ರೊಬೇಷನರಿ ಮ್ಯಾಜಿಸ್ಟ್ರೇಟರಾಗಿ ನೇಮಿಸಿದರು. ನಂತರ ಈಗ ಮುನ್ಸಿಪ್ ಮ್ಯಾಜಿಸ್ಟ್ರೇಟರಾಗಿ, ಪ್ರಕಾಶಂ ಜಿಲ್ಲೆಯ ಗಿದ್ದಲೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಜನಾಂಗದಲ್ಲಿ ಇವರು ಮ್ಯಾಜಿಸ್ಟ್ರೇಟ್ ಹುದ್ದೆಗೆ ನೇಮಕಗೊಂಡವರಲ್ಲಿ ಮೊದಲಿಗರು.

ಎಸ್.ಟಿ.ನಾಗರಾಜಯ್ಯ ಎಂ.ಎಸ್ಸಿ, ಬೆಂಗಳೂರು: ನೆಲಮಂಗಲ ತಾಲ್ಲೂಕಿನ ಸೊಂಡೆಕೊಪ್ಪ ಗ್ರಾಮದ ಶ್ರೀಮತಿ ರಂಗಮ್ಮ ಮತ್ತು ಶ್ರೀ ಕೆ.ತಿಮ್ಮಪ್ಪನವರ ಪುತ್ರ ಎಸ್.ಟಿ.ನಾಗರಾಜಯ್ಯ ೧೮-೦೭-೧೯೨೯ರಲ್ಲಿ ಜನಿಸಿದರು. ಶ್ರೀಮಾನ್ ಮಂಡಿ ಹರಿಯಣ್ಣನವರವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ವ್ಯಾಸಂಗಮಾಡಿ ೧೯೫೯ರಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯಲ್ಲಿ ಪಡೆದರು. ೧೯೬೦ರಲ್ಲಿ ಕರ್ನಾಟಕ ರಾಜ್ಯ ನಿಗಮದ ಬೋರ್ಡ್ ಆಫ್ ಮಿನರಲ್ ಡೆವಲಪ್‌ಮೆಂಟ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಜಿಯಾಲಜಿಸ್ಟ್ ಆಗಿ ಸೇವೆ ಸಲ್ಲಿಸಿ, ೧೯೬೪ರಲ್ಲಿ ಕೇಂದ್ರ ಸರ್ಕಾರದ ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನಲ್ಲಿ ಆಯ್ಕೆಯಾಗಿ ಫಿರೀದಬಾದ್‌ನ ಸೆಂಟ್ರಲ್ ಆಫೀಸಿನಲ್ಲಿ ಸೇರಿದರು. ೧೯೮೭ರವರೆಗೂ ಆ ಸಂಸ್ಥೆಗೆ ಸೇರಿದ ವಿವಿಧ ಅದುರಿನ ನಿಕ್ಷೇಪ ಅನ್ವೇಷಣೆಯನ್ನು ನಡೆಸಿದ್ದಾರೆ. ಅದರಲ್ಲಿ ಮುಖ್ಯವೆಂದರೆ ಬಳ್ಳಾರಿ ಜಿಲ್ಲೆಯ ದೋಣಿಮಲೈ ಕುಮಾರಸ್ವಾಮಿ, ರಾಮದುರ್ಗ, ಒರಿಸ್ಸಾದ ಮೆಲಾಂಗ್‌ಟೋಲಿ, ಚಿರಿಯ, ಮಧ್ಯಪ್ರದೇಶದ ಬೈಲದಿಲ ಕಬ್ಬಿಣ ಅದುರಿನ ನಿಕ್ಷೇಪಗಳು. ಕರ್ನಾಟಕದ ಕುದುರೆಮುಖ, ಬಾಬಾಬುಡನ್‌ಗಿರಿ, ನಾಗೋಡಿ, ಕೊಡಚಾದ್ರಿ ಮುಂತಾದವುಗಳು. ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು ರಾಜ್ಯಗಳ ಗ್ರಾನೈಟ್ ನಿಕ್ಷೇಪಗಳನ್ನು ಹೊರದೇಶಗಳಿಗೆ ರಫ್ತುಮಾಡುವ ಸಲುವಾಗಿ ಗುರ್ತಿಸಿ ಅವುಗಳ ಗುಣಮಟ್ಟದ ಬಗ್ಗೆ ವಿಶೇಷ ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ೧೯೮೭ ರಿಂದ ೧೯೯೨ ರವರೆಗೆ ಎನ್.ಎಂ.ಡಿ.ಸಿ. ಸಂಸ್ಥೆಯ ಅಡ್ವೈಸರ್ ಆಗಿ ಸೇವೆ ಸಲ್ಲಿಸಿದರು. ಸಾದು ಮತದ ಪ್ರಗತಿ ಸಾಧನೆಯ ಬಗ್ಗೆ ಕಾಳಜಿ ವಹಿಸುವವರಲ್ಲಿ ಇವರೂ ಒಬ್ಬರಾಗಿದ್ದಾರೆ.

ಬಿ.ಕೆ.ಸೋಮಶೇಖರಯ್ಯನವರು, ಬಿ.ಇ., ಬೆಂಗಳೂರು: ಬೆಂಗಳೂರಲ್ಲಿ ದಿ.ಶ್ರೀ ಬಿ.ಡಿ.ಕಾಳಪ್ಪನವರ ಮತ್ತು ದಿ. ಶ್ರೀ ಮರಿಸಿದ್ದ ಲಿಂಗಮ್ಮನವರ ಪುತ್ರರಾಗಿ ೨೦-೧೦-೧೯೩೪ ರಲ್ಲಿ ಜನಿಸಿದರು. ದಿ. ಮಂಡಿ ಹರಿಯಣ್ಣನವರ ಹಾಸ್ಟಲಿನಲ್ಲಿದ್ದುಕೊಂಡು ವ್ಯಾಸಂಗ ಮಾಡಿ ಬಿ.ಇ. ಪದವೀಧರರಾದರು. ೩೧-೦೧-೧೯೫೬ ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಗಮದಲ್ಲಿ ಜೂನಿಯರ್ ಇಂಜನಿಯರಾಗಿ ಕೆಲಸಕ್ಕೆ ಸೇರಿದರು. ನಿವೃತ್ತಿ ಹೊಂದುವ ಮುನ್ನ ಕೆ.ಇ.ಬಿ ಯಲ್ಲಿ ಸೂಪರಿಂಟೆಂಡೆಂಟ್ ಇಂಜನಿಯರಾಗಿ ಬಡ್ತಿಹೊಂದಿ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭದ್ರಾವತಿ ಮತ್ತು ಗುಲ್ಬರ್ಗಾ ಪಾಲಿಟೆಕ್ನಿಕ್‌ಗಳಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡಿದ್ದಾರೆ. ಬೆಂಗಳೂರು ವಿಶ್ವೇಶ್ವರಯ್ಯ ಇಂಜನಿಯರಿಂಗ್ ಕಾಲೇಜು ಮತ್ತು ಗುಲ್ಬರ್ಗಾ ಸಿ.ಡಿ.ಎ. ಇಂಜನಿಯರಿಂಗ್ ಕಾಲೇಜಿನಲ್ಲಿ ವಿಸಿಟಿಂಗ್ ಪ್ರೊಫೆಸರಾಗಿ ಸೇವೆ ಸಲ್ಲಿಸಿದ್ದಾರೆ. ಕೆ.ಇ.ಬಿ. ರಿಕ್ರೂಟ್‌ಮೆಂಟ್ ಕಮಿಟಿಯ ಅಧ್ಯಕ್ಷರಾಗಿಯೂ ಕೆಲಸಮಾಡಿದ್ದಾರೆ. ೩೦-೧೧-೧೯೯೨ ರಲ್ಲಿ ನಿವೃತ್ತಿಯಾಗುವ ಮುನ್ನ ಕರ್ನಾಟಕ ವಿದ್ಯುತ್ ಕಾರ್ಖಾನೆಯ ಜನರಲ್ ಮ್ಯಾನೇಜರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಶ್ರೀ ರಂಗಾರೆಡ್ಡಿ, ಎಂ.ಎ. : ಜಾನಪದವೇ ಅಲ್ಲ ಎಂದು ಸಾಂಪ್ರದಾಯಿಕ ವಿದ್ವಾಂಸರು ಅಭಿಪ್ರಾಯ ಪಡುವ ವಿವಾದಾಸ್ಪದ ಕೃತಿ “ಲಿಖಿತ” ಜಾನಪದವನ್ನು ಪ್ರಕಟಿಸುವ ಮೂಲಕ ಜಾನಪದದ ಬಗ್ಗೆ ಹೊಸರೀತಿ ಆಲೋಚನೆಗಳಿಗೆ ದಾರಿಮಾಡಿಕೊಟ್ಟ ಕೋಡಿರಾಂಪುರ ಅವರು ವಿದ್ಯಾರ್ಥಿಯಾಗಿದ್ದಾಗಲೇ ಮೈಸೂರು ವಿ.ವಿ.ಯ ಶ್ರೀ ಹೊನ್ನಶೆಟ್ಟಿ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪಡೆದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಅನುದಾನ ಯೋಜನೆಯ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರವಾಸ ಕೈಗೊಂಡು ಅಲ್ಲಿಯೇ ಕಲೆ ಸಾಹಿತ್ಯ ಸಂಸ್ಕೃತಿಯ ಪರಿಚಯ ಮಾಡಿಕೊಂಡರು. ಎಲ್ಲ ಜನಪರ ಚಳುವಳಿಗಳ ಸಂಪರ್ಕ ಇಟ್ಟುಕೊಂಡ ಇವರು ಜನಪದ ಸಾಹಿತ್ಯದಲ್ಲಿರುವ ಬಂಡಾಯ ಮನೋಧರ್ಮವನ್ನು ಪ್ರತಿ ಸಂಸ್ಕೃತಿಯ ವಿವರದ ಒಳನೋಟಗಳನ್ನು ಮೊಟ್ಟಮೊದಲಿಗೆ ಲೇಖನಗಳ ಮೂಲಕ ಪ್ರಕಟಿಸಿದರು. ಬಂಡಾಯ ಸಮುದಾಯ ರೈತ ಚಳುವಳಿ, ದಲಿತ ಚಳುವಳಿಗಳ ಆಶಯವನ್ನು ಸಾಮಾನ್ಯ ಜನತೆಗೆ ಮುಟ್ಟಿಸಲು ಜನಪದ ಶೈಲಿಯ ಬೀದಿನಾಟಕಗಳನ್ನು ರಚನೆ ಮಾಡಿದರು. ಬರಗಾಲದ ಸಂದರ್ಭದಲ್ಲಿ ಇವರು ಬರೆದ ಮಳೆದೂತರು ಬೀದಿ ನಾಟಕ ಕುಂದಾಪುರದಿಂದ ಕೋಲಾರದವರೆಗೆ ನಡೆದ ಸಮುದಾಯ ಜಾಥದಲ್ಲಿ ಸುಮಾರು ಇನ್ನೂರು ಪ್ರದರ್ಶನ ಕಂಡಿವೆ. ನಾಟಕ ಅಕಾಡೆಮಿಯ ಕಾರ್ಯಗಾರಗಳಲ್ಲಿ ಭಾಗವಹಿಸಿ ಹೀಗೂ ಒಬ್ಬರಾಜ, ನಮ್ಮೊಳಗೊಬ್ಬ ನಾಜೂಕಯ್ಯ. ಸಿಬಿ‌ಐನವರು ಬಂದಿದ್ದಾರೆ. ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಇವರೇ ಬರೆದ ಚಾರಿತ್ರಿಕ ಘಟನೆಯನ್ನು ಒಳಗೊಂಡ ವಿದುರಾಶ್ವತ್ಥ ಹತ್ಯಾಕಾಂಡ, ನಾಟಕದಲ್ಲಿ ಕರಪಾಲ ಮೇಳದ ತಂತ್ರವನ್ನು ಬಳಸಿದ್ದಾರೆ. ಕರಿಭಂಟನ ಕಾಳಗ, ಸುಂದೋಪಸುಂದ, ಮುಂತಾದ ಯಕ್ಷಗಾನಗಳಲ್ಲಿ ಪಾತ್ರವಹಿಸಿರುವುದೇ ಅಲ್ಲದೆ ಶ್ರೀ ಬರಗೂರು ರಾಮಚಂದ್ರಪ್ಪನವರ ಪ್ರಶಸ್ತಿ ವಿಜೇತ “ಬೆಂಕಿ”, “ಕೋಟೆ”, ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. “ನನ್ನೂರಹಾಡು” ಎಂಬ ಕವನ ಸಂಕಲನವನ್ನು ಪ್ರಕಟಿಸಿ ಸಂಘಟನೆ, ಹೋರಾಟ, ಸೃಜನಶೀಲತೆ ಈ ಮೂರನ್ನೂ ಮೈಗೂಡಿಸಿಕೊಂಡಿರುವ ಇವರು ಈಗ ಎರಡನೇ ಅವಧಿಗೆ ಜಾನಪದ ಅಕಾಡೆಮಿಯ ಸದಸ್ಯರಾಗಿದ್ದಾರೆ.

ಗಂಗಾಧರಯ್ಯ, ಪಿ.ಹೆಚ್.ಡಿ : ಕೊರಟಗೆರೆ ತಾಲ್ಲೂಕು ಆಳ್ಳಾಲ ವೆಂಕಟಾಪುರ ಗ್ರಾಮದಲ್ಲಿ ದಿ.ತಿಮ್ಮಪ್ಪನವರ ಪುತ್ರರಾಗಿ ಜನಿಸಿದರು. ದಿ.ಮಂಡಿಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಬೆಂಗಳೂರು ವಿಶ್ವವಿದ್ಯಾಲಯದ ಬಿ.ಇ ಪದವೀಧರರಾದರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಇಂಜಿನಿಯರಾಗಿ ಕೆಲಸ ಮಾಡಿ ನಂತರ ಟಾಡಾ ಇನ್ಸ್‌ಟಿಟ್ಯೂಟ್‌ನಲ್ಲಿ ಎಂ.ಇ. ಮತ್ತು ಪಿ.ಹೆಚ್ ಡಿ ಪದವಿ ಐ.ಐ.ಟಿ ಕಾಸ್ಪುರದಲ್ಲಿ ಲೆಕ್ಚರರಾಗಿ ಸೇರಿದರು. ಸದ್ಯದಲ್ಲಿ ಕಾನ್ಪುರ ಇನ್ಸ್‌ಟಿಟ್ಯೂಟ್‌ನಲ್ಲಿ ಪ್ರೋಫೆಸರಾಗಿ ಕೆಲಸ ಮಾಡುತ್ತಿದ್ದಾರೆ.

Dr. R. Lakshmipathy, M.Sc. Ph.D. (Agricultural Microbiology),
S/o Kote Rangaswamaiah, Rayarekalahally, Gauribidanur (Taluk).
Occupation : Scientist, A.N.G.R. Agricultural University, Guntur District, Andhra Pradesh.
Dr. Umesh, M. R. M.Sc., Ph.D. (Agronomy),
S/o Mathada Rangappa, ,Yidagur.
Occupation: Assistant Professor at University of Agricultural Sciences, Raichur.
Dr. Raghavendra kumar, M. M.Sc., Ph.D. (Agricultural Microbiology),
S/o Muddarangappa, Gamkaranahalli, Madhugiri Tq.
Occupation: Scientist, Novozymes south Asia Pvt. Ltd. Bangalore-560066.
Dr. Shreenivasa, K. R., M.Sc. Ph.D. (Plant pathology),
S/o Rangappa, Kotagaralahally, Madhugiri Tq. Tumkur Dist.
Occupation : Assistant Professor,University of Agricultural Sciences, Shimoga.
Dr. Rekha Shreenivasa, M.Sc. Ph.D. (Plant pathology),
D/o Dasappa D.N.,Kotagaralahally, Madhugiri Tq. Tumkur Dist.
Occupation: Research Asssociate, Indian Institute of Horticulture Research.
Dr. Mallikarjunaiah K. J., M.Sc. Ph.D. (Physics),
S/o Jayaramappa, Kodirampura, Madhugiri (T).
Occupation: UG Faculty, Indian Institute of Science, Bengaluru and
Distinguished Campus Collegue (Honarary Position),University of Arizona, USA.
Dr. Venkate Gowda, J., M.Sc., Ph.D. (Agronomy),
S/o Jayarame Gowda, Nulugummanahalli, Manchenahalli ( H),Gowribidnur (T).
Occupation : Research Associate, University of Agricultural Sciences, Bangalore.