ಮುಖಪುಟ ನಮ್ಮ ಬಗ್ಗೆ
ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ಬಗ್ಗೆ

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು
ಆಡಳಿತ ಮಂಡಳಿ ಪದಾಧಿಕಾರಿಗಳ ವಿವರ
CENTRAL BOARD OF MANAGEMENT

ಶ್ರೀಯುತ. ರವಿಕುಮಾರ್ ಡಿ.ಈ
ಅಧ್ಯಕ್ಷರು,

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು
“ನಗು”. ನಂ.೩೧೮, ೨ನೇ ಕ್ರಾಸ್, ೬೦.ಫೀಟ್ ರೋಡ್ ೪ನೇ ಮೈನ್,
ಬಿ.ಇ.ಎಂ.ಎಲ್ ಲೇ‌ಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು-೫೬೦೦೯೮
ಮೊ: ೯೯೦೦೯೫೯೫೧೬

2. ಶ್ರೀಮತಿ. ಪದ್ಮ ಚಂದ್ರು,

ಉಪಾಧ್ಯಕ್ಷರು,
ಕೇಂದ್ರ ಸಂಘ, ಬೆಂಗಳೂರು.

ನಂ.೯೩," ನಮ್ಮನೆ-ಸುಮ್ಮನೆ", ೩ನೇ ವಾರ್ಡ್, ೪ನೇ ಕ್ರಾಸ್, ಜೆ.ಪಿ ನಗರ, ಬೆಂಗಳೂರು.

3. ಶ್ರೀ ಬಿ.ಎನ್. ಲಕ್ಷ್ಮೀಪತಿ,

ಉಪಾಧ್ಯಕ್ಷರು.
ಕೇಂದ್ರ ಸಂಘ, ಬೆಂಗಳೂರು.

ಸಾದು ಸಂಗಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ನಂ.೩೫೦/೨, ೧೦ನೇ ಕ್ರಾಸ್, ಮಹಾಲಕ್ಷ್ಮೀಲೇ‌ಔಟ್, ಬೆಂಗಳೂರು-೮೬ , ಮೊ: ೯೩೪೧೨೩೯೨೮೧

3. ಶ್ರೀ ಅನಂತರಾಜಪ್ಪ,

ಉಪಾಧ್ಯಕ್ಷರು
ನಂ.೬೬೪೨/೫, ಮುನಿಸಿಪಲ್ ಲೇ‌ಔಟ್, ಸಿದ್ದಗಂಗಾ ಬಡಾವಣೆ, ತುಮಕೂರು ತಾ & ಜಿಲ್ಲೆ, ಮೊ:೯೮೮೦೧೦೫೭೭೩.

4. ಶ್ರೀ ಕೃಷ್ಣಯ್ಯ ಬಿನ್ ನಂಜುಂಡಯ್ಯ,

ಉಪಾಧ್ಯಕ್ಷರು,
ಕುರೂಡಿ ಮತ್ತು ಅಂಚೆ, ಹೊಸೂರು (ಹೋ), ಗೌರಿಬಿದನೂರು ತಾ, ಚಿಕ್ಕಬಳ್ಳಾಪುರ ಜಿಲ್ಲೆ, ಮೊ: ೯೯೦೨೯೧೯೧೧೦

5.ಶ್ರೀ ವಸಂತಯ್ಯ ಹೆಚ್ ,

ಪ್ರಧಾನ ಕಾರ್ಯದರ್ಶಿಗಳು,
ಸೊಂಡೇಕೊಪ್ಪ ( ಅಂಚೆ), ದಾಸನಪುರ ಹೋಬಳಿ, ಬೆಂಗಳೂರು ಉತ್ತರ. ಮೊ: ೭೪೦೬೦೭೦೮೮೦

6.ಶ್ರೀ ರಮೇಶ್ ಕುಮಾರ್ ಜೆ.ಕೆ. ಬಿನ್ ಜಿ.ವಿ ಕೃಷ್ಣಮೂರ್ತಿ,

ಖಜಾಂಚಿ,
ವಿನಾಯಕನಗರ, ಗೌರಿಬಿದನೂರು, ಚಿಕ್ಕಬಳ್ಳಾಪುರ ಜಿಲ್ಲೆ., ಮೊ: ೯೪೪೮೩೪೨೩೦೮..

7. ಶ್ರೀ ಮಂಜುನಾಥ್ ಕೆ.ಟಿ ಬಿನ್ ಲೇಟ್ ತಿಮ್ಮಯ್ಯ,

ಜಂಟಿ-ಕಾರ್ಯದರ್ಶಿಗಳು
ನಂ.೩೫೮೫, ಶ್ರೀ ವರಪ್ರದ, ಸುಭಾಷ್ ನಗರ ಮುನಿಸಿಪಲ್ ಕ್ವಾರ್ಟಸ್ ಹಿಂದೆ
ನೆಲಮಂಗಲ, ಬೆಂಗಳೂರು ಜಿಲ್ಲೆ. ಮೊ: ೯೪೮೧೯೦೦೫೪೩

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು, ಆಡಳಿತ ಮಂಡಳಿ ಪದಾಧಿಕಾರಿಗಳು


ಅಧ್ಯಕ್ಷರಾದ ಶ್ರೀಯುತ ಡಿ. ಈ. ರವಿಕುಮಾರ್ ಮತ್ತು ಸಂಘದ ಪದಾಧಿಕಾರಿಗಳು, ಸದಸ್ಯರುಗಳನ್ನೊಳಗೊಂಡ ಕಾರ್ಯಕಾರಿ ಮಂಡಳಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರ: (೨೦೧೪ ರಿಂದ)

1. ತುಮಕೂರಿನಲ್ಲಿ ಗುಬ್ಬಿ-ಬೆಂಗಳೂರು ರಿಂಗ್ ರೋಡ್ ಪಕ್ಕದಲ್ಲಿ ೪೮ ಲಕ್ಷ ರೂಗಳಿಗೆ ೩೦೦೦ ಚದರ ಅಡಿ ನಿವೇಶನ ಖರೀದಿ ಮಾಡಿಲಾಗಿದೆ. ( ಪ್ರಸ್ತುತ ಇಂದಿನ ಮಾರುಕಟ್ಟೆ ಬೆಲೆ ೭೫ ಲಕ್ಷ ರೂಗಳು).

2. ಶ್ರೀಮತಿ ಪುಷ್ಪ ರವಿಶಂಕರರವರು ದಾನ ನೀಡಿರುವ ನಿವೇಶನದಲ್ಲಿ ೪೫ ಲಕ್ಷ ಅಂದಾಜು ಮೊತ್ತದಲ್ಲಿ ಮಹಿಳಾ ವಿದ್ಯಾರ್ಥಿನಿಲಯ ನಿರ್ಮಿಸಲು ಯೋಜಿಸಿದ್ದು ಈಗಾಗಲೇ ೧೫ ಲಕ್ಷ ರೂಗಳನ್ನು ಖರ್ಚುಮಾಡಲಾಗಿದೆ. ಹಾಗೂ ೨ ಅಂತಸ್ಸಿನ ತಾರಸಿ (ಮೋಲ್ಡ್) ಹಾಕಲಾಗಿದೆ. ಈ ವಿದ್ಯಾರ್ಥಿನಿಲಯದಲ್ಲಿ ೬೦ ಜನ ಮಹಿಳಾ ವಿದ್ಯಾರ್ಥಿಗಳು ಉಳಿದುಕೊಳ್ಳಲು ಯೋಜನೆ ಮಾಡಲಾಗಿದೆ.

3. ತುಮಕೂರಿನಲ್ಲಿ ಸಮುದಾಯ ಭವನ ನಿರ್ಮಿಸಲು ಅಧ್ಯಕ್ಷರಾದ ಡಿ.ಈ.ರವಿಕುಮಾರ್‌ರವರು ದಿನಾಂಕ: ೨೬-೦೩-೨೦೧೫ ರಂದು ಎನ್.ಆರ್.ಐ.ಫೋರಂ ಉಪಾಧ್ಯಕ್ಷರಾದ ಶ್ರೀ ವಿ.ಸಿ.ಪ್ರಕಾಶ್‌ರವರ ಸಹಕಾರದೊಂದಿಗೆ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳಾದ ಹೆಚ್.ಆಂಜನೇಯರವರನ್ನು ಭೇಟಿ ಮಾಡಿ ೫೦ ಲಕ್ಷ ರೂ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.

4. ಶಿರಾ ತಾಲ್ಲೂಕು ಕಡವಿಗೆರೆ ಗೇಟ್‌ನಲ್ಲಿ ಸಮುದಾಯ ಭವನ ನಿರ್ಮಿಸಲು ಕೇಂದ್ರ ಸಂಘದ ಉಪಾಧ್ಯಕ್ಷರಾದ ಅನಂತರಾಜಪ್ಪನವರ ಪ್ರಯತ್ನದಿಂದ ಮತ್ತು ಶ್ರೀಮತಿ ಪದ್ಮಾಚಂದ್ರು ಹಾಗೂ ಶ್ರೀ ಮುಖ್ಯಮಂತ್ರಿ ಚಂದ್ರು ರವರ ಸಹಕಾರದಿಂದ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳಿಂದ ೫೦ ಲಕ್ಷ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.

5. ಬೆಂಗಳೂರು ಬಾಲಕರ ವಿದ್ಯಾರ್ಥಿನಿಲಯವನ್ನು ಸುಮಾರು ೧೦ ಲಕ್ಷ ಖರ್ಚಿನಲ್ಲಿ ನವೀಕರಣ ಮಾಡಿಸಲಾಗಿದೆ. (ಅಡಿಗೆ ಕೋಣೆ, ಶೌಚಾಲಯ, ಸ್ನಾನದ ಕೋಣೆ, ಸುಮಾರು ೩೦ ವರ್ಷದಷ್ಟು ಹಳೆಯದಾದ ಸ್ಯಾನಟರಿ ಮತ್ತು ಪ್ಲಂಬಿಂಗ್ ವ್ಯವಸ್ಥೆಯನ್ನು ದುರಸ್ಥಿ ಮಾಡಲಾಗಿದೆ, ಸೇಪ್ಟಿ ಗ್ರಿಲ್, ಸೈಕಲ್ ಸ್ಟಾಂಡ್, ಬಟ್ಟೆ ಓಗೆಯುವ ಜಾಗ ಮತ್ತು ಸುಮಾರು ವರ್ಷಗಳಿಂದ ಹಳೆಯದಾದ ವಿದ್ಯಾರ್ಥಿನಿಲಯಕ್ಕೆ ಹೊಸದಾಗಿ ಪೈಂಟ್ ಮಾಡಿಸಲಾಗಿದೆ, ೩ನೇ ಅಂತಸ್ಸಿನ ಮೇಲ್ಛಾವಣೆಯನ್ನು ಕಾಂಕ್ರೀಟ್ ಹಾಕಿ ವಾಟರ್ ಫ್ರೋಪ್ ಮಾಡಲಾಗಿದೆ.)

6. ಆಂದ್ರ ಪ್ರದೇಶ ಹಿಂದೂಪುರ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ಸು,ಮಾರು ೪೫ ಲಕ್ಷ ವೆಚ್ಚದಲ್ಲಿ ಬಾಲಕರ ವಿದ್ಯಾರ್ಥಿನಿಲಯ ನಿರ್ಮಿಸಲು ಕೇಂದ್ರ ಸಂಘದಿಂದ ೧೧ ಲಕ್ಷ ರೂ ನೀಡಿದ್ದು ತಾಲ್ಲೂಕು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ದಾನಿಗಳು ಮತ್ತು ಜನಾಂಗದವರ ಸಹಕಾರದೊಂದಿಗೆ ವಿದ್ಯಾರ್ಥಿನಿಲಯವನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಯಿತು.

7. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನಲ್ಲಿ ಮಹಿಳಾ ವಿದ್ಯಾರ್ಥಿನಿಲಯದ ಮೊದಲನೇಯ ಮಹಡಿಯನ್ನು ನಿರ್ಮಿಸಲು ಸಂಸದರಾದ ಮುದ್ದಹನುಮೇಗೌಡರು ೫ ಲಕ್ಷ ರೂ.ಗಳನ್ನು ಮತ್ತು ಶಾಸಕರಾದ ಕೆ.ಎನ್.ರಾಜಣ್ಣನವರು ೫ ಲಕ್ಷ ರೂಗಳನ್ನು ನೀಡಿದ್ದು ಇದರ ಶಂಕುಸ್ಥಾಪನೆ ಮಾಡಲಾಗಿದೆ.

8. ಸಮುದಾಯ ಭವನ ನವೀಕರಿಸಲು ೨೦೧೦-೧೧ನೇ ಸಾಲಿನಲ್ಲಿ ಶ್ರೀ ಡಿ.ರಾಮಯ್ಯನವರಿಂದ ಪಡೆದಿದ್ದ ೫ ಲಕ್ಷ ರೂ ಸಾಲವನ್ನು ಮರುಪಾವತಿಸಲಾಗಿದೆ.

9. ತುಮಕೂರಿನ ಮಾಜಿ ಶಾಸಕರಾದ ಸೊಗಡು ಶಿವಣ್ಣ ನವರಿಂದ ೫ ಲಕ್ಷ ರೂ. ಅನುದಾನವನ್ನು ತುಮಕೂರು ತಾಲ್ಲೂಕು ಸಂಘದ ಪದಾಧಿಕಾರಿಗಳ ಸಹಕಾರದಿಂದ ಪಡೆದು ಅದರ ಜೊತೆಗೆ ಕೇಂದ್ರ ಸಂಘದಿಂದ ೪ ಲಕ್ಷ ರೂಗಳನ್ನು ನೀಡಿ ೩ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.

10. ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ಡಾ|| ಮುಖ್ಯಮಂತ್ರಿ ಚಂದ್ರುರವರ ಅನುದಾನದಲ್ಲಿ ಬಿಡುಗಡೆ ಮಾಡಿರುವ ೧೦ ಲಕ್ಷ ರೂ ಹಣದ ಜೊತೆಗೆ ಕೊಡಿಗೇನಹಳ್ಳಿ ಹೋಬಳಿ ಪದಾಧಿಕಾರಿಗಳ ಪರಿಶ್ರಮ ಮತ್ತು ದಾನಿಗಳಿಂದ ಸಂಗ್ರಹಿಸಿರುವ ಹಣ ಹಾಗೂ ಕೇಂದ್ರ ಸಂಘದಿಂದ ೨.೬೦ ಲಕ್ಷ ರೂಗಳನ್ನು ಸೇರಿಸಿ ನಿರ್ಮಿಸಿರುವ ಸಮುದಾಯ ಭವನವನ್ನು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಇದರ ಒಟ್ಟು ಅಂದಾಜು ಮೊತ್ತ ೨೩ ಲಕ್ಷ ರೂಗಳು.

11. ಸಮಾಜದ ಹೆಣ್ಣು ಮಕ್ಕಳಿಗೆ ಸುಮಾರು ೩೦ ಜನ ಮಹಿಳಾ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕೇಂದ್ರ ಸಂಘದಿಂದ ೨ ಲಕ್ಷ ಮುಂಗಡ ಹಣ ನೀಡಿ. ಬಾಡಿಗೆ ಮನೆ ಪಡೆದು. ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿ ಪ್ರತಿ ಮಾಹೆಯಾನ ೨೬.೦೦೦/- ರೂ ಬಾಡಿಗೆ ನೀಡುತ್ತಾ ವಿದ್ಯಾರ್ಥಿನಿಲಯ ಪ್ರಾರಂಭಿಸಿರುತ್ತೇವೆ.

12. ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದಲ್ಲಿ ರೂ. ೧.೮೦ ಲಕ್ಷ ರೂ ಬೆಲೆ ಬಾಳುವ ನಿವೇಶನವನ್ನು ಬ್ಯಾಲ್ಯ ಗ್ರಾಮಸ್ಥರ ಸಹಕಾರದೊಂದಿಗೆ ಖರೀದಿಸಲಾಗಿದೆ. ಅದರ ನೊಂದಣಿ ಖರ್ಚು ೧೫,೦೦೦ ರೂಗಳನ್ನು ಕೇಂದ್ರ ಸಂಘ ನೀಡಿ ಸಂಘದ ಹೆಸರಿಗೆ ನೊಂದಾವಣೆ ಮಾಡಿಸಲಾಗಿದೆ.

13. ಸಮುದಾಯ ಭವನದ ವಧು-ವರರ ಕೊಠಡಿ ಮತ್ತು ಧಾರೆ ಮಂಟಪವನ್ನು ಹೊಸದಾಗಿ ನವೀಕರಿಸಿ ಫಾಲ್ ಸೀಲಿಂಗ್ ಮಾಡಿಸಿ. ಎ.ಸಿ.ಅಳವಡಿಸಿ ಹೊಸದಾಗಿ ಪೈಂಟ್ ಮಾಡಿಸಲಾಗಿದೆ. ಒಟ್ಟು ಅಂದಾಜು ಮೊತ್ತ ೧.೭೫ ಲಕ್ಷ ರೂಗಳಾಗಿರುತ್ತದೆ.

14. ಬೆಂಗಳೂರು ವಿದ್ಯಾರ್ಥಿನಿಲಯ ಮತ್ತು ಸಮುದಾಯ ಭವನಕ್ಕೆ ೧.೬೦ ಲಕ್ಷ ರೂ ವೆಚ್ಚದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಯಿತು.

15. ತುಮಕೂರು ಬಾಲಕರ ವಿದ್ಯಾರ್ಥಿನಿಲಯಕ್ಕೆ ೬೦,೦೦೦ ರೂ ವೆಚ್ಚದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ.

16. ಬೆಂಗಳೂರು ಸಮುದಾಯ ಭವನಕ್ಕೆ ೧.೭೦ ಲಕ್ಷ ರೂಗಳನ್ನು ನೀಡಿ ಛೇರ‍್ಸ್‌ಗಳನ್ನು ಖರೀದಿ ಮಾಡದ್ದೇವೆ ಮತ್ತು ೨೦೦೦ ಜನಕ್ಕೆ ಆಗುವಷ್ಟು ಹೊಸದಾಗಿ ಪಾತ್ರೆ ಖರೀದಿಸಲಾಗಿದೆ.

17. ಶಿರಾದಲ್ಲಿ ಸರ್ಕಾರದಿಂದ ಮಂಜೂರಾಗಿರುವ ೨೦ ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸುತ್ತಿದ್ದು ಈಗಾಗಲೇ ೨ ಲಕ್ಷ ರೂಗಳನ್ನು ಕೇಂದ್ರ ಸಂಘದಿಂದ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.

18. ಕೊರಟಗೆರೆಯಲ್ಲಿ ಡಾ|| ಮುಖ್ಯಮಂತ್ರಿ ಚಂದ್ರುರವರ ಅನುದಾನದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನ ಬೃಹದಾಕಾರವಾಗಿರುವುದರಿಂದ ಹಣದ ಕೊರತೆ ನೀಗಿಸಲು ತಾತ್ಕಾಲಿಕವಾಗಿ ಕೇಂದ್ರ ಸಂಘದಿಂದ ೫ ಲಕ್ಷ ರೂ.ಗಳನ್ನು ನೀಡಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಉದ್ಘಾಟನೆ ಮಾಡುವಂತೆ ತಾಲ್ಲೂಕು ಸಂಘದ ಪದಾಧಿಕಾರಿಗಳಿಗೆ ತಿಳಿಸಲಾಗಿದೆ.

19. ತುಮಕೂರು ಬಿ.ಹೆಚ್. ರಸ್ತೆಯಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯವನ್ನು ಸುಮಾರು ೫ ಲಕ್ಷ ರೂ.ಗಳ ಖರ್ಚಿನಲ್ಲಿ ಪೈಂಟ್ ಒಡೆಸಿ ಉನ್ನತಿಕರಿಸಲಾಯಿತು.

20. ಶಿರಾ ತಾಲ್ಲೂಕು ಕಡವಿಗೆರೆ ಗ್ರಾಮದಲ್ಲಿ ಡಾ|\ ಮುಖ್ಯಮಂತ್ರಿ ಚಂದ್ರುರವರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಬೃಹದಾಕಾರವಾದ ಸಮುದಾಯ ಭನವದ ಕಾಮಗಾರಿಗೆ ಹಣದ ಕೊರತೆ ಉಂಟಾಗಿ ಮಾನ್ಯ ಮಾಜಿ ಮಂತ್ರಿಗಳಾದ ಜಗದೀಶ್ ಶೆಟ್ಟರ್ ರವರು ವಿಶೇಷ ಅನುದಾನದಲ್ಲಿ ೧೦ ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪುನರ್ ಆರಂಭಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ.

21. ಸಂಘಗಳ ನೊಂದಣಾಧಿಕಾರಿಗಳ ಕಛೇರಿಯಲ್ಲಿ ೫ ವರ್ಷಗಳಿಂದ ಇಲ್ಲಿಯವರೆವಿಗೂ ೬೦.೦೦೦ ರೂ ಖರ್ಚಿನಲ್ಲಿ ಸಂಘದ ನೊಂದಣಿಯನ್ನು ನವೀಕರಣ ಮಾಡಿಸಲಾಯಿತು.

22. ದಿನಾಂಕ: ೧೬-೧೧-೨೦೧೪ ರಂದು ನಡೆದ ಶ್ರೀಮಾನ್ ದಿವಂಗತ ಮಂಡಿ ಹರಿಯಣ್ಣನವರ ಹುಟ್ಟು ಹಬ್ಬ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅದ್ದೂರಿಯಾಗಿ ಮಾಡಿ ೨೫೪ ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ೪.೫೦ ಲಕ್ಷ ರೂಗಳನ್ನು ಖರ್ಚು ಮಾಡಲಾಯಿತು.

23. ಶ್ರೀಮತಿ ಪುಷ್ಪ ರವಿಶಂಕರರವರು ೩೦ಘಿ೪೦ ಅಳತೆಯ ನಿವೇಶನವನ್ನು ಉದಾರವಾಗಿ ದಾನವಾಗಿ ನೀಡಿರುತ್ತಾರೆ. ಈ ಜಾಗವನ್ನು ಸಂಘದ ಹೆಸರಿಗೆ ರೂ. ೧.೨೫ ಲಕ್ಷ ನೊಂದಣಿ ಶುಲ್ಕವನ್ನು ನೀಡಿ ನೊಂದಣಿ ಮಾಡಿಸಿಕೊಳ್ಳಲಾಯಿತು.

24. ಶ್ರೀ ಡಿ.ರಾಮಯ್ಯನವರು ೩ಎಕರೆ ೦೨ ಗುಂಟೆ ಜಮೀನನ್ನು ಉದಾರ ಮನಸ್ಸಿನಿಂದ ದಾನ ನೀಡಿರುತ್ತಾರೆ. ಈ ದಾನ ನೀಡಿದ ಜಾಗವನ್ನು ಸಂಘದ ಹೆಸರಿಗೆ ೬೮,೯೭೦ ರೂ ಗಳನ್ನು ಸರ್ಕಾರಿ ನೊಂದಣಿ ಶುಲ್ಕವನ್ನು ನೀಡಿ ಸಂಘದ ಹೆಸರಿಗೆ ನೊಂದಣಿ ಮಾಡಿಸಿಕೊಳ್ಳಲಾಯಿತು.

25. ಸಂಘದ ಅಭಿವೃದ್ಧಿಗೋಸ್ಕರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳೊಳಗಾಗಿ ಪದಾಧಿಕಾರಿಗಳ ಸಹಯೋಗದಿಂದ ಮಾನ್ಯ ಶಾಸಕರಾದ ಕೆ.ಎನ್.ರಾಜಣ್ಣ ಮತ್ತು ಪ್ರಕಾಶ್‌ರವರ ನೇತೃತ್ವದಲ್ಲಿ ೨೦೧೫-೧೬ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರಿನಲ್ಲಿ ಮಹಿಳಾ ವಿದ್ಯಾರ್ಥಿನಿಲಯ ನಿರ್ಮಿಸಲು ಅನುದಾನ ನೀಡುವಂತೆ ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಲಾಯಿತು.

26. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನಲ್ಲಿ ಡಾ|| ಮುಖ್ಯಮಂತ್ರಿ ಚಂದ್ರುರವರ ಅನುದಾನ ಮತ್ತು ಮಧುಗಿರಿ ಶಾಖೆಯ ಅಧ್ಯಕ್ಷರು ಪದಾಧಿಕಾರಿಗಳು, ದಾನಿಗಳು ಮತ್ತು ಕೇಂದ್ರ ಸಂಘದ ಸಹಯೋಗದೊಂದಿಗೆ ನೂತನವಾಗಿ ನಿರ್ಮಿಸಿರುವ ಮಹಿಳಾ ವಿದ್ಯಾರ್ಥಿನಿಲಯವನ್ನು ಉದ್ಘಾಟನೆ ಮಾಡಲಾಯಿತು.

27. ಮಹಿಳಾ ವಿದ್ಯಾರ್ಥಿನಿಲಯ ನಿರ್ಮಿಸಲು ಹಾಲಿ ವಿದ್ಯಾರ್ಥಿನಿಲಯದ ಪಕ್ಕದಲ್ಲಿ ಸುಮಾರು ೨ ಕೋಟಿ ರೂ ವೆಚ್ಚದಲ್ಲಿ ಅಂದಾಜು ಪಟ್ಟಿ, ಪ್ಲಾನ್ ಮತ್ತು ಎಸ್ಟಿಮೇಟ್ ಮಾಡಿಸಿ ಕಡೆತವನ್ನು ಈಗಾಗಲೇ ಬಿ.ಡಿ.ಎ ಕಛೇರಿಯಲ್ಲಿ ಅನುಮೋದನೆಗಾಗಿ ಸಲ್ಲಿಸಲಾಗಿದೆ.

28. ವರ್ಷಕ್ಕೊಮ್ಮೆ ವಿದ್ಯಾರ್ಥಿನಿಲಯದ ನಿರ್ವಹಣೆಗೆಂದು ಸರ್ಕಾರ ನೀಡುವ ಹಣವನ್ನು ಪಡೆಯಲು ಅದಕ್ಕೆ ಬೇಕಾಗುವ ದಾಖಲಾತಿಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗಿದೆ.

29. ಕಛೇರಿಗೆ ಅತ್ಯಾಧುನಿಕ ಕಂಪ್ಯೂಟರ್ ಖರೀದಿಸಲಾಗಿದೆ.

30. ಶಿರಾ ತಾಲ್ಲೂಕು ಕಡವಿಗೆರೆ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಾನ್ಯ ಟಿ.ಬಿ.ಜಯಚಂದ್ರರವರನ್ನು ಕರೆಸಿ ತಾಲ್ಲೂಕು ಸರ್ವ ಸದಸ್ಯರ ಸಭೆ ನಡೆಸಲಾಯಿತು.

31. ಜನವರಿ ೨೦೧೪ ರಿಂದ ೧೨೫೭ ಜನರ ಅಜೀವ ಸದಸ್ಯತ್ವವನ್ನು ಮಾಡಿಸಲಾಗಿದೆ.

ಈ ಅತ್ಯಲ್ಪ ಅವಧಿಯಲ್ಲಿ ಇಷ್ಟೆಲ್ಲಾ ಬೃಹತ್ ಕಾರ್ಯಚಟುವಟಿಕೆಗಳನ್ನು ಮಾಡಲು ಸಹಕಾರ ನೀಡಿದ ಕೇಂದ್ರ ಸಂಘದ, ಪದಾಧಿಕಾರಿಗಳು, ನಿರ್ದೇಶಕರುಗಳು, ಎಲ್ಲಾ ತಾಲ್ಲೂಕು ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು, ಉದಾರವಾಗಿ ದಾನ ನೀಡಿದ ಮಹಾ ದಾನಿಗಳಿಗೂ ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಲಹೆ ಸೂಚನೆಗಳನ್ನು ನೀಡಿದ ಸಮುದಾಯದ ಸರ್ವರಿಗೂ ಮನಃಪೂರ್ವಕವಾಗಿ ವಂದಿಸುತ್ತಾ....

ಮುಂದಿನ ಮುಖ್ಯ ಯೋಜನೆಗಳಾದ ಸುಮಾರು ೪೦,೦೦೦ ಜನಸಂಖ್ಯೆಯುಳ್ಳ ಗೌರಿಬಿದನೂರಿನಲ್ಲಿ ಸುಮಾರು ೧.೫೦ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣ ಮತ್ತು ವಿದ್ಯಾ ಕೇಂದ್ರವಾದ ತುಮಕೂರಿನಲ್ಲಿ ಹೊಸದಾಗಿ ಖರೀದಿಸಿರುವ ನಿವೇಶನದಲ್ಲಿ ಸುಮಾರು ೧.೫೦ ಕೋಟಿ ರೂ ವೆಚ್ಚದಲ್ಲಿ ಬಾಲಕರ ವಿದ್ಯಾರ್ಥಿನಿಲಯವನ್ನು ನಿರ್ಮಿಸಿ ಕನಿಷ್ಟ ೧೦೦ ಜನ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಿದ್ದು ಹಾಲಿ ಕಾರ್ಯನಿರ್ವಹಿಸುತ್ತಿರುವ ಬಿ.ಹೆಚ್ ರಸ್ತೆಯಲ್ಲಿರುವ ಬಾಲಕರ ವಿದ್ಯಾರ್ಥಿನಿಲಯವನ್ನು ತೆರವುಗೊಳಿಸಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ ಕನಿಷ್ಟ ವಾಷಿಕ ೬೦ ಲಕ್ಷ ರೂ. ವರಮಾನ ಬರುವ ರೀತಿ ಮಾಡಬೇಕೆಂಬುದು ನಮ್ಮೆಲ್ಲಾ ಪದಾಧಿಕಾರಿಗಳ ಹೆಬ್ಬಯಕೆಯಾಗಿರುತ್ತದೆ. ಈ ಯೋಜನೆಗಳನ್ನು ಪೂರ್ಣಗೊಳಿಸಲು ತಮ್ಮೆಲ್ಲರ ಸಲಹೆ ಸೂಚನೆ ಸಹಕಾರ ತನುಮನ ಧನಗಳನ್ನು ಕೋರುತ್ತಾ.....


ಇಂತಿ ತಮ್ಮವ

(ರವಿಕುಮಾರ್.ಡಿ.ಈ)
ರಾಜ್ಯಾಧ್ಯಕ್ಷರು
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ)
ಬೆಂಗಳೂರುಕೇಂದ್ರ ಸಂಘದ ಮಾಜಿ ಪದಾಧಿಕಾರಿಗಳು:

1934 - 1943
ಮಂಡಿ ಹರಿಯಣ್ಣರವರು - ಅಧ್ಯಕ್ಷರು
ಕುದೂರು ಕಾಳಪ್ಪರವರು - ಉಪಾಧ್ಯಕ್ಷರು
ವಿ.ಹೊನ್ನಪ್ಪರವರು - ಪ್ರಧಾನ ಕಾರ್ಯದರ್ಶಿ
ಕೆ.ಬಿ.ಮುದ್ವೀರಪ್ಪ ರವರು - ಪ್ರಧಾನ ಕಾರ್ಯದರ್ಶಿ

1944 - 1946
ಮಂಡಿ ಹರಿಯಣ್ಣರವರು - ಅಧ್ಯಕ್ಷರು
ಮಂಡಿ ಕಾಳಪ್ಪ ರವರು - ಹಂಗಾಮಿ ಅಧ್ಯಕ್ಷರು
ಎಸ್.ಹನುಂತರಾಯಪ್ಪರವರು - ಪ್ರಧಾನ ಕಾರ್ಯದರ್ಶಿ
ಪಿ.ಹೊನ್ನಪ್ಪರವರು - ಪ್ರಧಾನ ಕಾರ್ಯದರ್ಶಿ

1946 - 1955
ಎಂ.ಜೆ.ಲಿಂಗಣ್ಣ ರವರು - ಅಧ್ಯಕ್ಷರು
ಎಸ್.ಹನುಮಂತರಾಯಪ್ಪರವರು - ಉಪಾಧ್ಯಕ್ಷರು
ಜಿ.ವೆಂಕಟಶಾಮಿಗೌಡರವರು - ಜಂಟಿಕಾರ್ಯದರ್ಶಿ
ಬಿ.ಜಿ.ಅಣ್ಣಯ್ಯರವರು - ಜಂಟಿ ಕಾರ್ಯದರ್ಶಿ

1956 - 1968
ಎಂ.ಹೆಚ್.ರಾಜು ರವರು - ಅಧ್ಯಕ್ಷರು
ಕೆ.ಸಿ.ಶಾಂತರಾಜುರವರು - ಉಪಾಧ್ಯಕ್ಷರು
ಎಂ.ಎಸ್.ಮಲ್ಲಯ್ಯರವರು - ಕಾರ್ಯದರ್ಶಿ

1968 - 1969
ಜಿ.ವೆಂಕಟರಮಣಪ್ಪರವರು - ಅಧ್ಯಕ್ಷರು
ಎನ್.ಆರ್.ಚಿಕ್ಕಣ್ಣರವರು - ಉಪಾಧ್ಯಕ್ಷರು
ಎಂ.ಎಸ್.ಮಲ್ಲಯ್ಯರವರು - ಕಾರ್ಯದರ್ಶಿ
ಎ.ಮರಿಯಪ್ಪರವರು - ಖಜಾಂಚಿ

1969 - 1970
ಜಿ.ವೆಂಕಟರಮಣಪ್ಪರವರು - ಅಧ್ಯಕ್ಷರು
ಎನ್.ಆರ್.ಚಿಕ್ಕಣ್ಣರವರು - ಉಪಾಧ್ಯಕ್ಷರು
ಡಿ.ಆರ್.ಮುದ್ದಪ್ಪರವರು - ಉಪಾಧ್ಯಕ್ಷರು
ಎಂ.ಎಸ್.ಮಲ್ಲಯ್ಯರವರು - ಕಾರ್ಯದರ್ಶಿ
ಜಿ.ಎನ್.ಗಂಗಣ್ಣರವರು - ಖಜಾಂಚಿ

1970 - 1971
ಜಿ.ವಿ.ಶಾಂತರಾಜುರವರು - ಅಧ್ಯಕ್ಷರು
ಡಿ.ಆರ್.ಮುದ್ದಪ್ಪರವರು - ಉಪಾಧ್ಯಕ್ಷರು
ಬಿ.ನಂಜೇಗೌಡ ರವರು - ಉಪಾಧ್ಯಕ್ಷರು
ಎಂ.ಎಸ್.ಮಲ್ಲಯ್ಯರವರು - ಕಾರ್ಯದರ್ಶಿ
ಕೆ.ನಂಜುಂಡಪ್ಪರವರು - ಖಜಾಂಚಿ

1972 - 1975
ಜಿ.ವಿ.ಶಾಂತರಾಜುರವರು - ಅಧ್ಯಕ್ಷರು
ಲಕ್ಷ್ಮೀನರಸಿಂಹಯ್ಯರವರು - ಉಪಾಧ್ಯಕ್ಷರು
ಬಿ.ನಂಜೇಗೌಡ ರವರು - ಉಪಾಧ್ಯಕ್ಷರು
ಎಂ.ಎಸ್.ಮಲ್ಲಯ್ಯರವರು - ಕಾರ್ಯದರ್ಶಿ
ಕೆ.ನಂಜುಂಡಪ್ಪರವರು - ಖಜಾಂಚಿ
1975 - 1978
ಜಿ.ವಿ.ಶಾಂತರಾಜುರವರು - ಅಧ್ಯಕ್ಷರು
ಲಕ್ಷ್ಮೀನರಸಿಂಹಯ್ಯರವರು - ಉಪಾಧ್ಯಕ್ಷರು
ಬಿ.ನಂಜೇಗೌಡರವರು - ಉಪಾಧ್ಯಕ್ಷರು
ಎಂ.ಎಸ್.ಮಲ್ಲಯ್ಯರವರು - ಕಾರ್ಯದರ್ಶಿ
ಕೆ.ನಂಜುಂಡಪ್ಪರವರು - ಖಜಾಂಚಿ

1979 - 1980
ಜಿ.ನಂಜುಡಪ್ಪ ರವರು - ಅಧ್ಯಕ್ಷರು
ಎಸ್.ನಂಜುಂಡಗೌಡರವರು - ಉಪಾಧ್ಯಕ್ಷರು
ಎಂ.ಹೆಚ್.ಅಪ್ಪಾಜಿರವರು - ಉಪಾಧ್ಯಕ್ಷರು
ಎನ್.ರೇವಣ್ಣರವರು - ಕಾರ್ಯದರ್ಶಿ
ಎ.ಎಂ.ರಾಮಮೂರ್ತಿರವರು - ಜಂಟಿಕಾರ್ಯದರ್ಶಿ
ಎಂ.ಸಿ.ಚೌಡಪ್ಪರವರು - ಖಜಾಂಚಿ

1981 - 1982
ಜಿ.ವಿ.ಶಾಂತರಾಜುರವರು - ಅಧ್ಯಕ್ಷರು
ಎಂ.ಹೆಚ್.ಅಪ್ಪಾಜಿರವರು - ಉಪಾಧ್ಯಕ್ಷರು
ಎಂ.ಎಸ್.ಮಲ್ಲಯ್ಯರವರು - ಉಪಾಧ್ಯಕ್ಷರು
ಎ.ಎಂ.ರಾಮಮೂರ್ತಿರವರು - ಕಾರ್ಯದರ್ಶಿ
ಎಂ.ಸಿ.ಚೌಡಪ್ಪರವರು - ಕಾರ್ಯದರ್ಶಿ
ಎ.ಗೋವಿಂದಪ್ಪ ರವರು - ಖಜಾಂಚಿ

1983 - 1984
ಜಿ.ವಿ.ಶಾಂತರಾಜುರವರು - ಅಧ್ಯಕ್ಷರು
ಎನ್.ಚಿಕ್ಕಣ್ಣರವರು - ಉಪಾಧ್ಯಕ್ಷರು
ಶ್ರೀಮತಿ ಕಮಲಮ್ಮರವರು - ಉಪಾಧ್ಯಕ್ಷರು
ಎ.ಎಂ.ರಾಮಮೂರ್ತಿರವರು - ಕಾರ್ಯದರ್ಶಿ
ಸಿ.ಮಾಯಣ್ಣರವರು - ಜಂಟಿ ಕಾರ್ಯದರ್ಶಿ
ಎನ್.ರೇವಣ್ಣರವರು - ಖಜಾಂಚಿ

1984 - 1985
ಜಿ.ವಿ. ಶಾಂತರಾಜುರವರು - ಅಧ್ಯಕ್ಷರು
ಎ.ಎಂ. ರಾಮಮೂರ್ತಿರವರು - ಉಪಾಧ್ಯಕ್ಷರು
ವಿ.ಪಿ. ನಾರಾಯಣ ಗೌಡರವರು - ಉಪಾಧ್ಯಕ್ಷರು
ಕೆ.ಸಿ. ರಾಮಯ್ಯರವರು - ಕಾರ್ಯದರ್ಶಿ
ಕೆ.ಸಿ. ಶ್ರೀನಿವಾಸಮೂರ್ತಿರವರು - ಜಂಟಿಕಾರ್ಯದರ್ಶಿ
ಎನ್. ರೇವಣ್ಣರವರು - ಖಜಾಂಚಿ

1985 - 1986
ಜಿ.ವಿ.ಶಾಂತರಾಜುರವರು - ಅಧ್ಯಕ್ಷರು
ಎಂ.ಎಸ್.ಮಲ್ಲಯ್ಯರವರು - ಉಪಾಧ್ಯಕ್ಷರು
ಎಚ್.ಗಂಗಣ್ಣರವರು - ಉಪಾಧ್ಯಕ್ಷರು
ಎಂ.ಸಿ.ಚೌಡಪ್ಪರವರು - ಕಾರ್ಯದರ್ಶಿ
ಎಸ್.ಎನ್.ಮರಿದೇವಯ್ಯರವರು - ಜಂಟಿಕಾರ್ಯದರ್ಶಿ
ಎ.ಎಂ.ರಾಮಮೂರ್ತಿರವರು - ಖಜಾಂಚಿ

1986 - 1988
ಜಿ.ವಿ. ಶಾಂತರಾಜುರವರು - ಅಧ್ಯಕ್ಷರು
ಎಂ.ಎಸ್.ಮಲ್ಲಯ್ಯನವರು - ಉಪಾಧ್ಯಕ್ಷರು
ಹೆಚ್. ಗಂಗಣ್ಣನವರು - ಉಪಾಧ್ಯಕ್ಷರು
ಎಂ.ಸಿ. ಚೌಡಪ್ಪರವರು - ಕಾರ್ಯದರ್ಶಿ
ಎಸ್.ಎನ್.ಮರಿದೇವಯ್ಯನವರು - ಜಂಟಿ ಕಾರ್ಯದರ್ಶಿ
ಎ.ಎಂ.ರಾಮಮೂರ್ತಿರವರು - ಖಜಾಂಚಿ

1989 - 1991
ಎಂ.ಎಸ್.ಮಲ್ಲಯ್ಯನವರು - ಅಧ್ಯಕ್ಷರು
ಜಿ.ವಿ.ಶಾಂತರಾಜುರವರು - ಉಪಾಧ್ಯಕ್ಷರು
ಡಿ.ರಾಜಣ್ಣನವರು - ಉಪಾಧ್ಯಕ್ಷರು
ಆರ್. ಚಿಕ್ಕಣ್ಣ ನವರು - ಕಾರ್ಯದರ್ಶಿ
ಶ್ರೀಮತಿ ಶಕುಂತಲರವರು - ಜಂಟಿಕಾರ್ಯದರ್ಶಿ
ಎನ್.ರೇವಣ್ಣನವರು - ಖಜಾಂಚಿ

1991 - 1997
ಎಂ.ಹೊನ್ನಗಂಗೇಗೌಡರು - ಅಧ್ಯಕ್ಷರು
ಡಾ|| ಡಿ. ರಾಜಣ್ಣ ನವರು - ಉಪಾಧ್ಯಕ್ಷರು
ಬಿ.ಎಂ.ಗಂಗಣ್ಣನವರು - ಕಾರ್ಯದರ್ಶಿ
ಶ್ರೀಮತಿ ಶಕುಂತಲ ರವರು - ಜಂಟಿಕಾರ್ಯದರ್ಶಿ
ಎಂ.ಎಂ.ಹರೀಶ್‌ರವರು - ಖಜಾಂಚಿ

1997 - 2001
ಜಿ.ವಿ.ಶಾಂತರಾಜುರವರು - ಅಧ್ಯಕ್ಷರು
ಡಿ.ರಾಮಯ್ಯನವರು - ಕಾರ್ಯದರ್ಶಿ
ಎನ್.ರೇವಣ್ಣನವರು - ಜಂಟಿಕಾರ್ಯದರ್ಶಿ
ಕೆ.ಎನ್.ಹೇಮಚಂದ್ರರವರು - ಖಜಾಂಚಿ

2001 - 2007
ಕ್ಯಾಪ್ಟನ್ ಎಂ.ಎಂ. ಹರೀಶ್ - ಅಧ್ಯಕ್ಷರು
ಎಸ್. ವಿ. ವೆಂಕಟೇಗೌಡ - ಉಪಾಧ್ಯಕ್ಷರು
ಲೀಲಾ ರಾಮು - ಉಪಾಧ್ಯಕ್ಷರು
ಬಿ.ಎನ್. ಲಕ್ಷ್ಮೀಪತಿರವರು - ಕಾರ್ಯದರ್ಶಿ
ಹೆಚ್. ವಸಂತಯ್ಯ - ಜಂಟಿ ಕಾರ್ಯದರ್ಶಿ
ಕೆ.ಎನ್.ಸೋಮಶೇಖರಯ್ಯ - ಖಜಾಂಚಿ

2007 - 2014
ಡಿ. ರಾಮಯ್ಯ - ಅಧ್ಯಕ್ಷರು
ಸರೋಜಮ್ಮ - ಉಪಾಧ್ಯಕ್ಷರು
ಎ.ಡಿ. ಬಲರಾಮಯ್ಯ - ಉಪಾಧ್ಯಕ್ಷರು
ಟಿ.ಎಂ. ನಾಗರಾಜ್ - ಉಪಾಧ್ಯಕ್ಷರು
ಜಿ.ವಿ. ಕೃಷ್ಣಮೂರ್ತಿ - ಉಪಾಧ್ಯಕ್ಷರು
ಎ.ಎಂ. ರಾಮಮೂರ್ತಿ - ಕಾರ್ಯದರ್ಶಿ
ಹೆಚ್.ಆರ್. ರವಿ - ಜಂಟಿ ಕಾರ್ಯದರ್ಶಿ
ರವಿಕುಮಾರ್.ಡಿ.ಈ - ಖಜಾಂಚಿ

ಪ್ರಸ್ತುತ ಹಾಲಿ ಪದಾಧಿಕಾರಿಗಳು : 2014 ರಿಂದ
ರವಿಕುಮಾರ್.ಡಿ.ಈ - ಅಧ್ಯಕ್ಷರು
ಪದ್ಮಾ ಮುಖ್ಯಮಂತ್ರಿ ಚಂದ್ರು - ಉಪಾಧ್ಯಕ್ಷರು
ಬಿ.ಎನ್. ಲಕ್ಷ್ಮೀಪತಿ - ಉಪಾಧ್ಯಕ್ಷರು
ಅನಂತರಾಜಪ್ಪ - ಉಪಾಧ್ಯಕ್ಷರು
ಎನ್. ಕೃಷ್ಣಯ್ಯ - ಉಪಾಧ್ಯಕ್ಷರು
ಹೆಚ್. ವಸಂತಯ್ಯ - ಪ್ರಧಾನ ಕಾರ್ಯದರ್ಶಿ
ಕೆ.ಟಿ. ಮಂಜುನಾಥ್‌ - ಜಂಟಿ  ಕಾರ್ಯದರ್ಶಿ
ಜಿ.ಕೆ. ರಮೇಶ್ ಕುಮಾರ್ - ಖಜಾಂಚಿ


ಕೇಂದ್ರ ಸಂಘದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಖಜಾಂಚಿಗಳ ವಿವರ :

ಅಧ್ಯಕ್ಷರುಗಳ ಹೆಸರು
ಅವಧಿ
ಕಾರ್ಯದರ್ಶಿಗಳ ಹೆಸರು
ಅವಧಿ
ಖಜಾಂಚಿಗಳ ಹೆಸರು ಅವಧಿ
1. ಮಂಡಿ ಹರಿಯಣ್ಣ ರವರು 1934-1945
1. ಕೆ.ಬಿ. ಮುದ್ದೀರಪ್ಪ ರವರು
2. ಪಿ.ಹೊನ್ನಪ್ಪ ರವರು
3.ಎ.ಎಸ್. ಹನುಮಂತರಾಯಪ್ಪರವರು
1934-1940
1940-1944
1944-1946
------ ------
2. ಎಂ.ಜಿ. ಲಿಂಗಣ್ಣ ರವರು
1946-1955
4. ಬಿ.ಜಿ. ಅಣ್ಣಯ್ಯ ರವರು
5. ಜಿ. ವೆಂಕಟಸ್ವಾಮಿಗೌಡ ರವರು
1946-1950
1950-1955
------ ------
3. ಎಂ.ಹೆಚ್. ರಾಜು ರವರು 1955-1968
6. ಎಂ.ಎಸ್. ಮಲ್ಲಯ್ಯ ರವರು 1955-1968
------ ------
4. ಜಿ. ವೆಂಕಟರಮಣಪ್ಪ ರವರು 1968-1970
7. ಎಂ.ಎಸ್. ಮಲ್ಲಯ್ಯ ರವರು 1968-1970 1. ಎ.ಎಂ. ಮರಿಯಪ್ಪ ರವರು
2. ಜಿ.ಎಸ್. ಗಂಗಣ್ಣ ರವರು
1968-1969
1969-1970
5. ಜಿ.ವಿ .ಶಾಂತರಾಜು ರವರು 1970 -1978
8. ಎಂ.ಎಸ್. ಮಲ್ಲಯ್ಯ ರವರು 1970-1978 3. ಕೆ. ನಂಜುಂಡಪ್ಪ ರವರು
1970-1979
6. ಜಿ. ನಂಜುಂಡಪ್ಪ ರವರು 1978-1985
9. ಎನ್. ರೇವಣ್ಣ ರವರು
10.ಎ.ಎಂ. ರಾಮಮೂರ್ತಿ ರವರು
11.ಎಂ.ಸಿ. ಚೌಡಪ್ಪ ರವರು
12. ಕೆ.ಸಿ. ರಾಮಯ್ಯ ರವರು
1979-1981
1981-1982
1982-1983
1983-1984
4. ಎಂ. ಸಿ. ಚೌಡಪ್ಪ ರವರು
5. ಎ. ಗೋವಿಂದಪ್ಪ ರವರು
6. ಎನ್. ರೇವಣ್ಣ ರವರು
7. ಎ.ಎಂ. ರಾಮಮೂರ್ತಿ ರವರು.
1979-1980
1980-1982
1982-1984
1984-1985
7. ಜಿ.ವಿ. ಶಾಂತರಾಜು ರವರು 1985-1988
13. ಎಂ.ಸಿ. ಚೌಡಪ್ಪ ರವರು 1984-1988 8. ಎ.ಎಂ. ರಾಮಮೂರ್ತಿ ರವರು. 1985-1988
8. ಎಂ.ಎಸ್. ಮಲ್ಲಯ್ಯ ರವರು 1988-1991
14. ಆರ್. ಚಿಕ್ಕಣ್ಣ ರವರು 1988-1991 9. ಎನ್. ರೇವಣ್ಣ ರವರು 1988-1991
9. ಎಂ. ಹೊನ್ನಗಂಗೇಗೌಡ ರವರು 1991-1997
15. ಬಿ.ಎಂ. ಗಂಗಣ್ಣ ರವರು 1991-1997 10.ಕ್ಯಾಪ್ಟನ್ ಎಂ.ಎಂ.ಹರೀಶ್ ರವರು 1991-1997
10. ಜಿ.ವಿ. ಶಾಂತರಾಜು ರವರು 1997-2001 16. ಬಿ.ಎಂ. ಗಂಗಣ್ಣ ರವರು
17.ಡಿ. ರಾಮಯ್ಯ ರವರು
1997-1998
1998-2001
11. ಎನ್. ರೇವಣ್ಣ ರವರು
12. ಕೆ.ಎನ್. ಹೇಮಚಂದ್ರ ರವರು
1997-1998
1998-2001
11.ಕ್ಯಾಪ್ಟನ್ ಎಂ.ಎಂ.ಹರೀಶ್ ರವರು 2001-2007 18. ಬಿ.ಎನ್. ಲಕ್ಷ್ಮೀಪತಿ ರವರು 2001-2007 13. ಎಂ.ಮಂಜುನಾಥ್ ರವರು
14.ವಿ.ಆರ್. ಪುಟ್ಟಣ್ಣ ರವರು
15.ಕೆ.ಎನ್. ಸೋಮಶೇಖರ್ ರವರು
2001-2002
2002-2003
2003-2007
12. ಡಿ. ರಾಮಯ್ಯ ರವರು 2007-2014 19. ಎ.ಎಂ ರಾಮಮೂರ್ತಿ ರವರು 2007-2014 16. ಡಿ.ಈ. ರವಿಕುಮಾರ್ ರವರು 2007-2014
13. ಡಿ..ಈ. ರವಿಕುಮಾರ್ 2014-

20. ಮಾಗೋಡು ದೊಡ್ಡೇಗೌಡ

21. ಹೆಚ್. ವಸಂತಯ್ಯ

2014-2015

2016-

17. ಆರ್. ಸದಾನಂದ

18. ಜಿ.ಕೆ. ರಮೇಶ್ ಕುಮಾರ್

2014-2015

2016-