ಮುಖಪುಟ ಕೊರಟಗೆರೆ
ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ದಿನಾಂಕ: ಸೆಪ್ಟೆಂಬರ್ 29, 2024

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು

ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ದಿನಾಂಕ: ಸೆಪ್ಟೆಂಬರ್ 29, 2024 ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ

ಮಾನ್ಯ ಆಜೀವ ಸದಸ್ಯರೇ,

ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ದಿನಾಂಕ :29.09.2024 ರ ಭಾನುವಾರ

ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರು ಕೇಂದ್ರ ಸಂಘದ ಆವರಣದಲ್ಲಿ ಸಂಘದ

ಗೌರವಧ್ಯಕ್ಷರಾದ ಶ್ರೀ ಕ್ಯಾಪ್ಟನ್ ಎಂ.ಎಂ ಹರೀಶ್ ರವರ ಉಪಸ್ಥಿತಿಯಲ್ಲಿ

ಕೇಂದ್ರ ಸಂಘದ ಅಧ್ಯಕ್ಷರಾದ ಶ್ರೀ ಡಿ.ಈ. ರವಿಕುಮಾರ್ ರವರ

ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.


ವಾರ್ಷಿಕ ಸರ್ವ ಸದಸ್ಯರ ಸಭಾ ಸೂಚನಾ ಪತ್ರವನ್ನು ಅಂಚೆ ಮುಖೇನ ಸಂಘದ ಎಲ್ಲಾ

ಆಜೀವ ಸದಸ್ಯರಿಗೆ ಕಳುಹಿಸಲಾಗಿದೆ. ಆದುದರಿಂದ

ಸದಸ್ಯರು ದಿನಾಂಕ :29.09.2024 ರ ಭಾನುವಾರ ನಡೆಯುವ ಸಂಘದ

ವಾರ್ಷಿಕ ಸದಸ್ಯರ ಸಭೆಗೆ ಮಾನ್ಯ ಸರ್ವ ಸದಸ್ಯರೂ ಹಾಜರಾಗಿ ಕಾರ್ಯಕಲಾಪಗಳನ್ನು

ಯಶಸ್ವಿಯಾಗಿ ನಡೆಸಿಕೊಡಲು ಕೋರಲಾಗಿದೆ.

ಶ್ರೀ ಆರ್. ಶಿವಶಂಕರ್

ಪ್ರಧಾನ ಕಾರ್ಯದರ್ಶಿಗಳು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು