ಮುಖಪುಟ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ-2021-22 ಮತ್ತು 2022-23

ಶತಮಾನೋತ್ಸವ ಸಂಭ್ರಮಾಚರಣೆಯ ಸಂದರ್ಭದಲ್ಲಿ

ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ 2021-22 & 2022-23


ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಅಹ್ವಾನ


ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರು ಸಂಸ್ಥಾಪಿತ ವಿದ್ಯಾರ್ಥಿನಿಲಯ 100 ವರ್ಷಗಳನ್ನು ಪೂರೈಸಿದ್ದು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ(ರಿ), ಬೆಂಗಳೂರು ಕೇಂದ್ರ ಸಂಘ ಸ್ಥಾಪಿತವಾಗಿ 75 ವರ್ಷಗಳನ್ನು ಪೂರೈಸಿದ್ದು ಕೇಂದ್ರ ಸಮಿತಿ ಮತ್ತು ಎಲ್ಲಾ ತಾಲ್ಲೂಕು ಸಮಿತಿ ಆಡಳಿತ ಮಂಡಳಿ ಮತ್ತು ನಿರ್ದೇಶಕರುಗಳು, ಸಂಘದ ವಜ್ರ ಮಹೋತ್ಸವ ಮತ್ತು ವಿದ್ಯಾರ್ಥಿನಿಲಯದ ಶತಮಾನೋತ್ಸವವನ್ನು ವಿಜೃಂಬಣೆಯಿಂದ ಅಚರಿಸಲು ತೀರ್ಮಾನಿಸಲಾಗಿದ್ದು, ಶತಮಾನೋತ್ಸವದ ಸಂಭ್ರಮಾಚರಣೆಯ ಸುಸಂದರ್ಭದಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 2021-22 & 2022-23 ನೇ ಸಾಲಿನಲ್ಲಿ ವಿವಿಧ ಕೊರ್ಸ್ ಗಳಲ್ಲಿ ವ್ಯಾಸಂಗ ಮಾಡಿ ಅಂತಿಮ ವರ್ಷದ ಪರೀಕ್ಷೆಗಳಲ್ಲಿ ಉತ್ತಮ ಆಂಕಗಳನ್ನು ಪಡೆದು ಉತ್ತೀರ್ಣರಾದ ಹಿಂದೂ ಸಾದರ ಸಮಾಜದ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಶೇಕಡಾ 95 ಅಂಕಗಳನ್ನು ಪಡೆದ ನಗರ ಪ್ರದೇಶದ ವಿದ್ಯಾರ್ಥಿಗಳು ಮತ್ತು ಶೇಕಡಾ 90 ಅಂಕಗಳನ್ನು ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು,

ಅಂತಿಮ ವರ್ಷದ ಪದವಿ ಪರೀಕ್ಷೆಗಳಲ್ಲಿ ಶೇಕಡಾ 85 ಅಂಕಗಳನ್ನು ಪಡೆದ ನಗರ ಪ್ರದೇಶದ ವಿದ್ಯಾರ್ಥಿಗಳು ಮತ್ತು ಶೇಕಡಾ 80 ಅಂಕಗಳನ್ನು ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು

ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ಪರೀಕ್ಷೆಗಳಲ್ಲಿ ಶೇಕಡಾ 75 ಅಂಕಗಳನ್ನು ಪಡೆದ ನಗರ ಪ್ರದೇಶದ ವಿದ್ಯಾರ್ಥಿಗಳು ಮತ್ತು ಶೇಕಡಾ 70 ಅಂಕಗಳನ್ನು ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ

ಚಾರ್ಟೆಡ್ ಅಕೌಂಟೆಂಟ್, ಐ.ಸಿ.ಡಬ್ಲ್ಯೂ, ಕಂಪನಿ ಸೆಕ್ರೆಟರಿ, ಕೆ.ಎ.ಎಸ್, ಕೆ.ಪಿ.ಎಸ್, ಐ.ಎ.ಎಸ್, ಪಿ.ಹೆಚ್.ಡಿ, ಚಿನ್ನದ ಪದಕ ವಿಜೇತರು ಅಥವಾ ಇನ್ನಾವುದೇ ಸಮಾನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಪ್ರತಿಭಾ ಪುರಸ್ಕಾರಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಭರ್ತಿಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಗಳೊಂದಿಗೆ ದಿನಾಂಕ: 20-06-2024 ರ ಒಳಗಾಗಿ ಕೇಂದ್ರ / ತಾಲ್ಲೂಕು ಶಾಖೆಯ ಸಂಘದ ಕಛೇರಿಗೆ ತಲುಪಿಸಲು ಸೂಚಿಸಲಾಗಿದೆ.

ಅರ್ಹ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರು ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಅರ್ಜಿಗಳಲ್ಲಿ ಭರ್ತಿ ಮಾಡಿ ತಲುಪಿಸುವ ನಿಟ್ಟಿನಲ್ಲಿ

ಇಲ್ಲಿ ಪ್ರಕಟಿಸಲಾಗಿರುವ ಪ್ರತಿಭಾ ಪುರಸ್ಕಾರ ಅರ್ಜಿ ನಮೂನೆಯನ್ನು ಮುದ್ರಿಸಿ ವಿವರಗಳನ್ನು ಭರ್ತಿ ಮಾಡಿ ಕೇಂದ್ರ ಸಂಘದ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸುವುದು

ಅರ್ಜಿ ಭರ್ತಿ ಮಾಡುವ ಮುನ್ನ ಅರ್ಜಿಯೊಂದಿಗಿರುವ ವಿಶೇಷ ಸೂಚನೆಗಳನ್ನು ತಪ್ಪದೇ ಓದಿಕೊಳ್ಳಲು ಸೂಚಿಸಲಾಗಿದೆ...

2021-22 & 2022-23 ನೇ ಸಾಲಿನ ಪ್ರತಿಭಾ ಪುರಸ್ಕಾರ ಅರ್ಜಿಗಾಗಿ ಇಲ್ಲಿ ಕ್ಲಿಕ್ಕಿಸಿ :

ಹಿಂದೂ ಸಾದರ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ"

ಅಥವಾ

ಹಿಂದೂಸಾದರ ಸಂಘದ ತಾಲ್ಲೂಕು/ಕೇಂದ್ರ ಕಛೇರಿಗಳಲ್ಲಿ ಅರ್ಜಿ ನಮೂನೆಯನ್ನು ಪಡೆದು

ಭರ್ತಿ ಮಾಡಿ ಕೇಂದ್ರ ಸಂಘದ ಕಛೇರಿಗೆ ಸಲ್ಲಿಸಿ ಸ್ವೀಕೃತಿ ಪಡೆಯಬಹುದು...