ಮುಖಪುಟ ಮಧುಗಿರಿ
Hostels in Madhugiri


ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಮಧುಗಿರಿ

ಮಧುಗಿರಿಯಲ್ಲಿ ದಿ||ಪಿ.ಕೆ.ನಂಜುಂಡಯ್ಯನವರು ದಾನಮಾಡಿದ ಕಟ್ಟಡದ ದಿ: 01-07-1948 ರಲ್ಲಿ ದಿ.ಎಂ.ಜೆ ಲಿಂಗಣ್ಣನವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ನಿಲಯ ಪ್ರಾರಂಭವಾಯಿತು.ಶ್ರೀಯುತ ಎಂ.ಎನ್ ಬಸಪ್ಪ ಮತ್ತು ಎಂ.ಎನ್ ಕಪ್ಪಣ್ಣ ರವರುಗಳು ದಾನವಾಗಿ ನೀಡಿದ್ದ ಕಟ್ಟಡದಲ್ಲಿ 1948 ರಲ್ಲಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಲಾಗಿ, ಸದರಿ ಕಟ್ಟಡ ಶಿಥಿಲಾವಸ್ಥೆ ತಲುಪಿದಾಗ ಮಧುಗಿರಿ ತಾಲ್ಲೂಕು ಸಂಘದ ಕಾರ್ಯಾಧ್ಯಕ್ಷರಾದ ಶ್ರೀಯುತ ಎಂ.ಕೆ ನಂಜುಂಡಯ್ಯನವರು (ರಾಜು) ಮತ್ತು ಪದಾಧಿಕಾರಿಗಳ ಅವಿರತ ಪರಿಶ್ರಮದಿಂದ ಹಾಗೂ ಡಾ|| ಶಿವು ರವರ ಧನ ಸಹಾಯದಿಂದ ಸುಮಾರು ೪೦ ಚದುರ ಕಟ್ಟಡವನ್ನು ನೂತನವಾಗಿ ನಿರ್ಮಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಅನುವು ಮಾಡಿಕೊಡಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂದಿನಿಂದಲೂ ಶ್ರದ್ದೆವಹಿಸಿ ವ್ಯವಸ್ಥಿತವಾಗಿ ಸ್ಥಳೀಯ ಮುಖಂಡರು ನಿರ್ವಹಿಸಿಕೊಂಡು ಬರುತ್ತಿದ್ದು ಶ್ರೀಯುತರ ಕಾರ್ಯ ಅಭಿನಂದನೀಯ.
ಇದಲ್ಲದೆ ಬಿಜವರ ಗ್ರಾಮದ ಶ್ರೀಯುತ ಬಿ.ಎಂ ಲಕ್ಷ್ಮೀಪತಿಯವರ ಸಹಕಾರ ಮತ್ತು ಆಶಯದಿಂದ ಮಧುಗಿರಿಯಲ್ಲಿ ಒಂದು ಕಟ್ಟಡವನ್ನು ಗುತ್ತಿಗೆಗೆ ಪಡೆದು ವಿದ್ಯಾರ್ಥಿನಿ ನಿಲಯವನ್ನು ಮಧುಗಿರಿಯಲ್ಲಿ 2012 ರಲ್ಲಿ ಪ್ರಾರಂಭವಾಯಿತು. 2013 ರಲ್ಲಿ ಮಧುಗಿರಿಯಲ್ಲಿ ೩೦X೪೦ ಅಳತೆಯ ಎರಡು ನಿವೇಶನಗಳ ಖರೀದಿಸಿಲಾಗಿ ಸದರಿ ನಿವೇಶನಗಳಲ್ಲಿ ಒಂದು ನಿವೇಶನವನ್ನು ಶ್ರೀಯುತ ಬಿ.ಎನ್ ಲಕ್ಷ್ಮೀಪತಿಯವರು ದಾನವಾಗಿ ನೀಡಿರುತ್ತಾರೆ, ಮತ್ತೊಂದು ನಿವೇಶನವನ್ನು ಮಧುಗಿರಿ ತಾಲ್ಲೂಕು ಸಂಘದ ಖಜಾಂಚಿಗಳಾದ ಶ್ರೀಯುತ ನಾಗರಾಜು ಗೌಡರು ಖರೀದಿಸಲು ಸಹಕರಿಸಿರುತ್ತಾರೆ. ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ೧೫ ಲಕ್ಷ ರೂಗಳ ಅನುದಾನ ಮತ್ತು ದಾನಿಗಳ ಸಹಕಾರದಿಂದ ಸಂಘದ ಮಹಿಳಾ ವಿದ್ಯಾರ್ಥಿನಿ ನಿಲಯವನ್ನು ಸದರಿ ನಿವೇಶನದಲ್ಲಿ ನಿರ್ಮಿಸಲಾಗಿದ್ದು, ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅಮೃತ ಹಸ್ತದಿಂದ 2014 ರಲ್ಲಿ ಉದ್ಘಾಟಿಸಲಾಯಿತು.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಗಂಗಮ್ಮ ಮತ್ತು ಶ್ರೀ ಸಿದ್ದೇಗೌಡರು, ದೊಡ್ಡಮಾಲೂರು. ಇವರು ದಾನವಾಗಿ ನೀಡಿರುವ ನಿವೇಶನದಲ್ಲಿ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಅನುದಾನದಲ್ಲಿ ಮತ್ತು ಧಾನಿಗಳ ಸಹಾಯದಿಂದ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು ಕಟ್ಟಡದ ಅಂತಿಮ ಹಂತದ ನಿರ್ಮಾಣ ಕಾರ್ಯ ನೆರವೇರಿದೆ.
ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ಡಾ|| ಮುಖ್ಯಮಂತ್ರಿ ಚಂದ್ರುರವರ ಅನುದಾನದಲ್ಲಿ ಬಿಡುಗಡೆ ಮಾಡಿರುವ ೧೦ ಲಕ್ಷ ರೂ ಹಣದ ಜೊತೆಗೆ ಕೊಡಿಗೇನಹಳ್ಳಿ ಹೋಬಳಿ ಪದಾಧಿಕಾರಿಗಳ ಪರಿಶ್ರಮ ಮತ್ತು ದಾನಿಗಳಿಂದ ಸಂಗ್ರಹಿಸಿರುವ ಹಣ ಹಾಗೂ ಕೇಂದ್ರ ಸಂಘದಿಂದ ೨.೬೦ ಲಕ್ಷ ರೂಗಳನ್ನು ಸೇರಿಸಿ ನಿರ್ಮಿಸಿರುವ ಸಮುದಾಯ ಭವನವನ್ನು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಇದರ ಒಟ್ಟು ಅಂದಾಜು ಮೊತ್ತ ೨೩ ಲಕ್ಷ ರೂಗಳು.
ಮಧುಗಿರಿ ತಾಲ್ಲೂಕು ಬ್ಯಾಲ್ಯಾ ಗ್ರಾಮದಲ್ಲಿ ಗ್ರಾಮ ಶಾಖೆಯ ಅಧ್ಯಕ್ಷರಾದ ಶ್ರೀ. ಕೆ. ನಂಜೇಗೌಡರು, ಸಮಸ್ತ ಗ್ರಾಮಸ್ಥರು ಮತ್ತು ಸದಸ್ಯರುಗಳಾದ ಶ್ರೀ ಬಿ.ಹೆಚ್. ನಂಜುಂಡಯ್ಯ, ಶ್ರೀ ಮುದ್ದೀರಪ್ಪ, ಶ್ರೀ ನಟರಾಜ್, ಶ್ರೀ ಕೃಷ್ಣಪ್ಪ ಎಮ್. ಶ್ರೀ ಶಿವಕುಮಾರ್ ಮತ್ತು ದಾನಿಗಳು ಸಹಕಾರದಿಂದ ೩೦X೫೦ ಅಳತೆಯ ನಿವೇಶನವನ್ನು ೧.೮೦ ಲಕ್ಷಗಳಿಗೆ ಖರೀದಿಸಿಲಾಗಿ ರೂ. ೧೫೦೦೦/- ನೋಂದಣಿ ಖರ್ಚನ್ನು ಕೇಂದ್ರ ಸಂಘ ಭರಿಸಿ ಸಂಘಕ್ಕೆ ನೋಂದಣಿ ಮಾಡಿಸಲಾಗಿದೆ. (ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ. ೩.೫೦ ಲಕ್ಷ) ಸದರಿ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ.