ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ಸೌಲಭ್ಯ - ಸೌಕರ್ಯಗಳು |
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು-೮೬ ವತಿಯಿಂದ ದೊರೆಯುವ ಸೌಲಭ್ಯಗಳು:
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ವತಿಯಿಂದ ಪ್ರತೀ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರತೀ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸೂಕ್ತ ಅರ್ಜಿಗಳನ್ನು ಕರೆಯಾಲಾಗುತ್ತದೆ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ಇದಕ್ಕೆ ಸಂಬಂದಿಸಿದ ಮಾಹಿತಿ ಮತ್ತು ಅರ್ಜಿಗಳನ್ನು ಆಯಾ ತಾಲ್ಲೂಕು ಸಂಘದ ಕಚೇರಿಗಳಲ್ಲಿ ಮತ್ತು ಸಂಘದ ವೆಬ್ ಸೈಟ್ ನಲ್ಲಿ ನಿರ್ದಿಷ್ಟ ಅವದಿಯಲ್ಲಿ ಪಡೆಯಬಹುದಾಗಿದೆ. ಸಮಾಜದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿಸಲಾದ ಹಿರಿಯ ಸಮಾಜ ಬಂದುಗಳ ಸೇವಾ ಟ್ರಸ್ಟ್ ಶ್ರೀಮತಿ ಶ್ರೀ ಲಕ್ಷ್ಮೀಪತಯ್ಯ ಪುಟ್ಟನಂಜಮ್ಮ ಟ್ರಸ್ಟ್ ವತಿಯಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದೆ. ಪ್ರತೀ ವರ್ಷ ಸೆಪ್ಟಂಬರ್-ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸೂಕ್ತ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ಮತ್ತು ಆಯ್ಕೆಯಾದ ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಮಾಹೆಯಾನ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದಕ್ಕೆ ಸಂಬಂದಿಸಿದ ಮಾಹಿತಿ ಮತ್ತು ಅರ್ಜಿಗಳನ್ನು ಆಯಾ ತಾಲ್ಲೂಕು ಸಂಘದ ಕಛೇರಿಗಳಲ್ಲಿ ಮತ್ತು ಸಂಘದ ವೆಬ್ ಸೈಟ್ ನಲ್ಲಿ ನಿರ್ದಿಷ್ಟ ಅವದಿಯಲ್ಲಿ ಪಡೆಯಬಹುದಾಗಿದೆ. ಸಾದು ಸಂಗಮ ಪತ್ತಿನ ಸಹಕಾರ ಸಂಘ,ಬೆಂಗಳೂರು, ಸಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ, ತುಮಕೂರು ಮತ್ತು ಪರಮಹಂಸ ಪತ್ತಿನ ಸಹಕಾರ ಸಂಘ, ತುಮಕೂರು ರವರು ಆಯಾ ತಾಲ್ಲೂಕು/ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರತೀ ವರ್ಷ ಸೆಪ್ಟಂಬರ್-ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸೂಕ್ತ ಅರ್ಜಿಗಳನ್ನು ಕರೆಯಾಲಾಗುತ್ತದೆ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ಇದಕ್ಕೆ ಸಂಬಂದಿಸಿದ ಮಾಹಿತಿ ಮತ್ತು ಅರ್ಜಿಗಳನ್ನು ಆಯಾ ತಾಲ್ಲೂಕು ಸಹಕಾರ ಸಂಘ(ಬ್ಯಾಂಕ್)ನ ಕಚೇರಿಗಳಲ್ಲಿ ಮತ್ತು ಸಂಘದ ವೆಬ್ ಸೈಟ್ ನಲ್ಲಿ ನಿರ್ದಿಷ್ಟ ಅವದಿಯಲ್ಲಿ ಪಡೆಯಬಹುದಾಗಿದೆ.
ಕರ್ನಾಟಕ ಸರ್ಕಾರದ ವತಿಯಿಂದ ದೊರೆಯುವ ಅನುದಾನದ ಯೋಜನೆಗಳು: ಅರಿವು ಶೈಕ್ಷಣಿಕ ಸಾಲ ಯೋಜನೆ: ಈ ಯೊಜನೆಯಲ್ಲಿ ಇಂಜನಿಯರಿಂಗ್, ವೈದ್ಯಕೀಯ, ದಂತವೈದ್ಯಕೀಯ ಮತ್ತು ಇನ್ನಿತರ ವೃತ್ತಿಪರ ಉನ್ನತ ಕೋರ್ಸ್‌ಗಳಿಗೆ (CET)ಸಿ.ಇ.ಟಿ. ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.೨ ರ ಬಡ್ಡಿ ದರದಲ್ಲಿ ವಾರ್ಷಿಕ ಗರಿಷ್ಠ ಮೊತ್ತ ರೂ. ೧,೦೦,೦೦೦.೦೦ ಗಳ ಶೈಕ್ಷಣಿಕ ಸಾಲವನ್ನು ಮಂಜೂರು ಮಾಡಲಾಗುವುದು. ವಿದ್ಯಾರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನ ರೂ. ೩.೫೦ ಲಕ್ಷಗಳ ಮಿತಿಯಲ್ಲಿರಬೇಕು. ಈ ಯೋಜನೆಯಲ್ಲಿ ಪಡೆದ ಸಾಲವು ಸ್ಸಲವು ವಿದ್ಯಾರ್ಥಿಯ ವ್ಯಾಸಂಗ ಪೂರ್ಣಗೊಂಡ ೪ನೇ ತಿಂಗಳಿನಿಂದ ಮರುಪಾವತಿ ಪ್ರಾರಂಭವಾಗುವುದು. ಮರುಪಾವತಿ ಅವದಿ ೩ ವರ್ಷಗಳು. ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರು ಪಾವತಿಸಬೇಕು. ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಯೋಜನೆ: ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಪಿ.ಹೆಚ್.ಡಿ., ಪೋಸ್ಟ್ ಡಾಕ್ಟ್ರೇಟ್, ನಿಗಧಿತ ಮಾಸ್ಟರ್ ಡಿಗ್ರಿಗಳಲ್ಲಿ ವ್ಯಾಸಂಗ ಮಾಡುವ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ಸಾಲದ ರೂಪದಲ್ಲಿ ವಾರ್ಷಿಕ ಗರಿಷ್ಟ ರೂ ೩.೫ ಲಕ್ಷಗಳಂತೆ ಕೋರ್ಸ್‌ನ ಅವಧಿಗೆ ರೂ. ೧೦.೦೦ ಲಕ್ಷಗಳನ್ನು ಮಂಜೂರು ಮಾಡಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲದ ಮರುಪಾವತಿ ಸಾಲದ ಮೊತ್ತಕ್ಕೆ ಅನುಗುಣವಾಗಿ ೧ ವರ್ಷದಿಂದ ೫ ವರ್ಷಗಳು ಮಾಸಿಕ ಕಂತುಗಳಲ್ಲಿ ಮರು ಪಾವತಿಸಬೇಕು. ವ್ಯಾಸಂಗ ಮುಗಿದ ೧ ವರ್ಷದ ನಂತರ ಅಥವಾ ಉದ್ಯೋಗ ದೊರೆತ ೬ ತಿಂಗಳ ನಂತರ ಮರುಪಾವತಿ ಕಂತು ಪ್ರಾರಂಭವಾಗುತ್ತದೆ. ವಿದ್ಯಾರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನ ರೂ. ೩.೫೦ ಲಕ್ಷಗಳ ಮಿತಿಯಲ್ಲಿರಬೇಕು. ಅರ್ಹ ಅಭ್ಯರ್ಥಿಗಳ ಆಯ್ಕೆಯನ್ನು ಸರ್ಕಾರದ ಪ್ರದಾನ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಿದ ಆಯ್ಕೆ ಸಮಿತಿಯ ಮೂಲಕ ಆಯ್ಕೆಮಾಡಲಾಗುತ್ತದೆ. ಚೈತನ್ಯ ಸಬ್ಸೀಡಿ ಕಂ ಸಾಪ್ಟ್ ಸಾಲ ಯೋಜನೆ: ಹಿಂದುಳಿದ ಜನರು ಕೈಗೊಳ್ಳುವ ವ್ಯಾಪಾರ, ಹೈನುಗಾರಿಕೆ, ಸೇವಾ ಉದ್ದಿಮೆ, ಕೃಷಿ ಅವಲಂಬಿತ ಚಟುವಟಿಕೆಗಳಿಗೆ ಬ್ಯಾಂಕುಗಳ ಮೂಲಕ ಗರಿಷ್ಠ ರೂ. ೫.೦೦ ಲಕ್ಷ ಸಾಲವನ್ನು ಒದಗಿಸಲಾಗುವುದು. ಘಟಕ ವೆಚ್ಚ ರು ೧.೦೦ ಲಕ್ಷಗಳ ವರೆಗೆ ಶೇ. ೩೦.೦೦ ರಷ್ಟು, ಗರಿಷ್ಠ ೧೦,೦೦೦.೦೦ ರೂ ಗಳ ಸಹಾಯಧನ ಹಾಗೂ ಶೇ. ೨೦.೦೦ ರಷ್ಟು ಮಾರ್ಜಿನ್ ಹಣವನ್ನು ಮತ್ತುಘಟಕ ವೆಚ್ಚ ರೂ ೧.೦೦ ಲಕ್ಷದಿಂದ ರೂ ೫.೦೦ ಲಕ್ಷಗಳವರೆಗೆ ನಿಗಮದಿಂದ ಶೇ. ೨೦.೦೦ ರಷ್ಟು ಶೇ. ರೂ. ೧.೦೦ ಲಕ್ಷದ ಮಾರ್ಜಿನ್ ಹಣವನ್ನು ಶೇ. ೪.೦೦ ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು. ನಿಗಮದ ಮಾರ್ಜಿನ್ ಹಣ ಸಾಲವನ್ನು ಮಂಜೂರಾತಿ ಆದೇಶದಲ್ಲಿ ನಿಗದಿಪಡಿಸಿದ ಕಂತುಗಳನ್ವಯ ಅಸಲು ಮತ್ತು ಬಡ್ಡಿಯನ್ನು ೩ ವರ್ಷಗಳ ಅವಧಿಯಲ್ಲಿ ಮಾಸಿಕ ಕಂತುಗಳಲ್ಲಿ ನಿಗಮದ ಜಿಲ್ಲಾ ಕಛೇರಿಗೆ ಮರುಪಾವತಿ ಮಾಡಬೇಕು. ಕಿರು ಸಾಲ ಯೋಜನೆ: ಈ ಯೋಜನೆಯಲ್ಲಿ ನಗರ, ಪಟ್ಟಣ ಮತ್ತು ಹೋಬಳಿ ಹಂತಗಳಲ್ಲಿ ಸಣ್ಣ ವ್ಯಾಪಾರ ಚಟುವಟಿಕೆಗಳಾದ ಹಣ್ಣು-ತರಕಾರಿ ವ್ಯಾಪಾರ, ಹೂವಿನ ಅಂಗಡಿ, ಟೀ ಅಂಗಡಿ ಇತ್ಯಾದಿ ವ್ಯಾಪಾರ ಚಟುವಟಿಕೆಗಳನ್ನು ಮಾಡಲು ಸ್ವ-ಸಹಾಯ ಸಂಘಗಳ ಮೂಲಕ ಸಾಲ ನೀಡಲಾಗುವುದು. ಪ್ರತೀ ಫಲಾನುಭವಿಗೆ ಗರಿಷ್ಠ ರೂ. ೫,೦೦೦.೦೦ ಗಳ ಸಹಾಯಧನ ಮತ್ತು ರೂ ೧೦,೦೦೦.೦೦ ಗಳ ಸಾಲವನ್ನು ವಾರ್ಷಿಕ ಶೇ. ೫.೦೦ ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು. ಇದರಲ್ಲಿ ಶೇ. ೧.೦೦ ರಷ್ಟು ಸ್ವಸಹಾಯ ಗುಂಪುಗಳು ನಿರ್ವಹಣಾ ವೆಚ್ಚವಾಗಿ ಪಡೆಯಬಹುದು. ಈ ಯೋಜನೆಯಲ್ಲಿ ಪಡೆದ ಸಾಲದ ಮರುಪಾವತಿ ಅವದಿ ೨ ವರ್ಷಗಳು. ಈ ಅವದಿಯಲ್ಲಿ ೨೨ ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರು ಪಾವತಿಸಬೇಕು. ೨ ತಿಂಗಳು ವಿರಾಮಾವಧಿ ಇರುತ್ತದೆ. ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ: ಬ್ಯಾಂಕುಗಳಿಂದ ಸಾಲ ಪಡೆಯಲು ಸಾದ್ಯವಿಲ್ಲದ ಹಿಂದುಳಿದ ಮತ್ತು ಅತೀ ಹಿಂದುಳಿದ ವರ್ಗದವರಿಗೆ, ಸಾಂಪ್ರದಾಯಿಕ ವೃತ್ತಿಯಲ್ಲದ ಚಟುವಟಿಕೆ ಕೈಗೊಳ್ಳುವವರಿಗೆ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಭೂ-ರಹಿತ ಕೃಷಿ ಕೂಲಿಕಾರ್ಮಿಕರಿಗೆ ಅವರು ಕೈಗೊಳ್ಳುವ ಚಟುವಟಿಕೆಯನ್ನು ಆಧರಿಸಿ ಗರಿಷ್ಠ ರೂ. ೫೦,೦೦೦.೦೦ ಗಳಿಗೆ ವಾರ್ಷಿಕ ಶೇ. ೫.೦೦ ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಈ ಮೊತ್ತದಲ್ಲಿ ಶೇ. ೩೦.೦೦ ರಷ್ಟು ಅಥವಾ ಗರಿಷ್ಠ ೧೦,೦೦೦.೦೦ ರೂ ಗಳ ಸಹಾಯಧನ ನಿಡಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲವನ್ನು ೩ ವರ್ಷಗಳ ಅವಧಿಯಲ್ಲಿ ೩೪ ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರು ಪಾವತಿಸಬೇಕು. ೨ ತಿಂಗಳು ವಿರಾಮಾವಧಿ ಇರುತ್ತದೆ. ಗಂಗಾ ಕಲ್ಯಾಣ ನೀರಾವರಿ ಯೋಜನೆ: ಈ ಯೋಜನೆಯಲ್ಲಿ ಹಿಂದುಳಿದ ವರ್ಗದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವೈಯಕ್ತಿಕ ನೀರಾವರಿ ಕೊಳವೆ ಭಾವಿ ಯೋಜನೆ : ಪ್ಪ್ರವರ್ಗ-೧, ೨ಎ, ೩ಎ ಮತ್ತು ೩ ಬಿ ಗೆ ಸೇರಿದ ಕನಿಷ್ಟ ೨ ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚ ರೂ. ೨.೦೦ ಲಕ್ಷಗಳಾಗಿರುತ್ತದೆ. ಇದರಲ್ಲಿ ೧.೫೦ ಲಕ್ಷರೂಗಳು ಸಹಾಯಧನ ಮತ್ತು ೫೦,೦೦೦.೦೦ ರೂಗಳ ಸಾಲದ ಮೊತ್ತವಾಗಿದ್ದು, ಶೇ. ೪.೦೦ ರ ಬಡ್ಡಿ ದರದಲ್ಲಿ ೩ ವರ್ಷಗಳಲ್ಲಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಸಾಮೂಹಿಕ ನೀರಾವರಿ ಕೊಳವೆ ಭಾವಿ ಯೋಜನೆ : ಪ್ರವರ್ಗ-೧, ೨ಎ, ೩ಎ ಮತ್ತು ೩ ಬಿ ಗೆ ಸೇರಿದ ಕನಿಷ್ಟ ೩ ಜನ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಂದಿರುವ ಕನಿಷ್ಟ ೮ ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನಿಗೆ ಸಾಮೂಹಿಕವಾಗಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಇದು ಪೂರ್ಣ ಅನುದಾನವಾಗಿರುತ್ತದೆ. ಘಟಕದ ವೆಚ್ಚ ರೂ. ೨.೫೩ ಲಕ್ಷಗಳಾಗಿದ್ದು ೮ ರಿಂದ ೧೫ ಎಕರೆ ಜಮೀನಿಗೆ ೨ ಕೊಳವೆ ಭಾವಿ ಮತ್ತು ೧೫ ಎಕರೆಗಿಂತ ಹೆಚ್ಚಿನ ಜಮೀನಿಗೆ ರೂ. ೩.೫೫ ಲಕ್ಷಗಳ ವೆಚ್ಚದಲ್ಲಿ ೩ ಕೊಳವೆಬಾವಿಗಳನ್ನು ಕೊರಿಯಿಸಿ ಪಂಪ್ ಸೆಟ್ ಮತ್ತು ಇತರೆ ಉಪಕರಣಗಳನ್ನು ಸರಬರಾಜು ಮಾಡಲಾಗುವುದು ಹಾಗೂ ವಿದ್ಯುದ್ದೀಕರಣಕ್ಕೆ ಠೇವಣಿಯನ್ನು ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು.
ರಾಷ್ತ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮದ ಯೋಜನೆಗಳು: ಅವಧಿ ಸಾಲ ಯೋಜನೆ: ಬಡತನ ರೇಖೆಗಿಂತ ದುಪ್ಪಟ್ಟು ಆದಾಯ ಹೊಂದಿರುವ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಒದಗಿಸಲಾಗುವುದು. ಈ ಯೋಜನೆಯಲ್ಲಿ ಕೃಷಿ ಅವಲಂಬಿತ ಚಟುವಟಿಕೆಗಳು, ಸೇವಾ ವಲಯ, ಸಾರಿಗೆ ವಲಯ, ಸಣ್ಣ ವ್ಯಾಪಾರ, ಸಣ್ಣ ಕೈಗಾರಿಕೆ, ಶಿಲ್ಪ ಸಂಪದ ಮತ್ತು ಕೃಷಿ ಸಂಪದ ಚಟುವಟಿಕೆಗಳಿಗೆ ಗರಿಷ್ಟ ರೂ ೧೦.೦೦ ಲಕ್ಷಗಳನ್ನು ವಾರ್ಷಿಕ ಶೇ. ೬.೦೦ ರ ಬಡ್ಡೀ ದರದಲ್ಲಿ ಮಂಜೂರು ಮಾಡಲಾಗುವುದು. ಸಾಲದ ಮರುಪಾವತಿ ಅವಧಿ ೩ ವರ್ಷಗಳು. ೩೪ ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರು ಪಾವತಿಸಬೇಕು. ೨ ತಿಂಗಳು ವಿರಾಮಾವಧಿ ಇರುತ್ತದೆ. ಶೈಕ್ಷಣಿಕ ಸಾಲ ಯೋಜನೆ: ಇಂಜನೀಯ್‌ರಿಂಗ್, ವೈದ್ಯಕೀಯ, ಕಂಪ್ಯೂಟರ್, ದಂತ ವೈದ್ಯಕೀಯ, ಚಾರ್ಟರ್ಡ್ ಅಕೌಂಟ್ಂಟ್ ಮುಂತಾದ ಎ.ಐ.ಸಿ.ಟಿ.ಇ. , ಮೆಡಿಕಲ್ ಕೌನ್ಸಿಲ್ ಆಫ಼್ ಇಂಡಿಯಾ ಮತ್ತು ಯು.ಜಿ.ಸಿ. ಯಿಂದ ಅನುಮೋದಿತ ಕೊರ್ಸಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ಸಾಲದ ರೂಪದಲ್ಲಿ ವಾರ್ಷಿಕ ಗರಿಷ್ಟ ರೂ ೨.೫ ಲಕ್ಷಗಳಂತೆ ಒಟ್ಟು ಕೋರ್ಸ್‌ನ ಅವಧಿಗೆ ಹಾಗೂ ಕೋರ್ಸ್‌ನ ವೆಚ್ಚದ ಅನುಸಾರ ಗರಿಷ್ಟ ರೂ. ೧೦.೦೦ ಲಕ್ಷ ಸಾಲವನ್ನು ಶೇ. ೪.೦೦ ರ ಬಡ್ಡಿ ದರದಲ್ಲಿ ಒದಗಿಸಲಾಗುವುದು. ಈ ಸಾಲದ ಮರುಪಾವತಿಯನ್ನು ಕೋರ್ಸ್ ಪೂರ್ಣಗೊಂಡು ೬ ತಿಂಗಳ ನಂತರ ಅಥವಾ ಉದ್ಯೋಗ/ ಸ್ವ-ಉದ್ಯೋಗ ದೊರೆತ ೩ ತಿಂಗಳ ನಂತರ ೫ ವರ್ಷಗಳ ಅವದಿಯಲ್ಲಿ ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಸ್ವಯಂ ಸಕ್ಷಮ ಸಾಲ ಯೋಜನೆ: ವೃತ್ತಿ ಶಿಕ್ಷಣ ಪಡೆದ ಹಿಂದುಳಿದ ವರ್ಗಗಳಿಗೆ ಸೇರಿದ ವಕೀಲರು, ವೈದ್ಯರು, ಚಾರ್ಟರ್ಡ್ ಅಕೌಂಟ್ಂಟ್‌ಗಳು, ನರ್ಸಿಂಗ್ ವೃತ್ತಿ ನಿರತರು ನರ್ಸಿಂಗ್ ಹೋಮ್ ಗಳು, ಬಯೋ ಮೆಡಿಕಲ್ ಲ್ಯಾಬ್ ಗಳು, ಫ಼ಿಜಿಯೋಥೆರಪಿ ಲ್ಯಾಬಗಳು ಇತ್ಯಾದಿ ವೃತ್ತಿ ಘಟಕ ಸ್ಥಾಪಿಸಲು ಗರಿಷ್ಟ ರೂ. ೧೦.೦೦ ಲಕ್ಷ ಸಾಲವನ್ನು ಶೇ. ೫.೦೦ ರ ಬಡ್ಡಿ ದರದಲ್ಲಿ ಒದಗಿಸಲಾಗುವುದು. ಈ ಸಾಲದ ಮರುಪಾವತಿಯನ್ನು ೫ ವರ್ಷಗಳ ಅವದಿಯಲ್ಲಿ ೫೮ ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ೨ ತಿಂಗಳು ವಿರಾಮಾವಧಿ ಇರುತ್ತದೆ. ಮೈಕ್ರೋ ಫೈನಾನ್ಸ್ ಯೋಜನೆ: ಈ ಯೊಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಿಂದುಳಿದ ವರ್ಗಗಳ ಜನರಿಗೆ ಸಣ್ಣ ಸಣ್ಣ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಠ ರೂ. ೫೦,೦೦೦/- ಗಳ ವರೆಗೆ ಶೇ. ೫.೦೦ ರ ಬಡ್ಡಿ ಧರದಲ್ಲಿ ಸಾಲವನ್ನು ಒದಗಿಸಲಾಗುವುದು. ಈ ಯೋಜನೆಯಲ್ಲಿ ಮಹಿಳೆಯರು/ಪುರುಷರು/ಅಂಗವಿಕಲರು ರಚಿಸಿರುವ ಸ್ವ-ಸಹಾಯ ಗುಂಪುಗಳ ಮೂಲಕ ಹಿಂದುಳಿದ ವರ್ಗಗಳಿಗೆ ಸೇರಿದ ಸದಸ್ಯರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳನುಸಾರ ಒಟ್ಟಾಗಿ ಗರಿಷ್ಟ ರೂ. ೩.೫೦ ಲಕ್ಷಗಳ ವರೆಗೆ ಶೇ. ೫.೦೦ ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಸಾಲದ ಮರುಪಾವತಿ ಅವದಿ ೩ ವರ್ಷಗಳಿದ್ದು ೩೪ ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರು ಪಾವತಿಸರಿಬೇಕು. ೨ ತಿಂಗಳು ವಿರಾಮಾವಧಿ ಇರುತ್ತದೆ. ಮಹಿಳಾ ಸಮೃದ್ಧಿ ಯೋಜನೆ: ಮಹಿಳೆಯರನ್ನು ಸಬಲೀಕರಣ ಗೊಳಿಸಲು ಮಹಿಳಾ ಎಸ್.ಹೆಚ್.ಜಿ./ಸ್ತ್ರೀ ಶಕ್ತಿ ಸಂಘಗಳು/ಸ್ವ ಶಕ್ತಿ ಗುಂಪುಗಳ ಮೂಲಕ ಮಹಿಳೆಯರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಾದ ಗೊಂಬೆ ತಯಾರಿಕೆ, ಅಗರಬತ್ತಿ ತಯಾರಿಕೆ, ಸಿದ್ದ ಉಡುಪು ತಯಾರಿಕೆ, ಹಾಲಿನ ಡೈರಿ ಮುಂತಾದ ಆದಾಯೋತ್ಪನ್ನ ಆರ್ಥಿಕ ಚಟುವಟಿಕೆಗಳಿಗೆ ಪ್ರತೀ ಫಲಾನುಭವಿಗೆ ಗರಿಷ್ಠ ರೂ. ೩೫,೦೦೦/-ಗಳಂತೆ ಒಂದು ಗುಂಪಿಗೆ ಗರಿಷ್ಟ ರೂ. ೩.೫೦ ಲಕ್ಷಗಳ ವರೆಗೆ ವಾರ್ಷಿಕ ಶೇ. ೪.೦೦ ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಈ ಮೊತ್ತದಲ್ಲಿ ಶೇ. ೩೦.೦೦ ರಷ್ಟು ಅಥವಾ ಗರಿಷ್ಠ ೧೦,೦೦೦.೦೦ ರೂ ಗಳ ಸಹಾಯಧನ ನಿಡಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲವನ್ನು ೩ ವರ್ಷಗಳ ಅವಧಿಯಲ್ಲಿ ೩೪ ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರು ಪಾವತಿಸಬೇಕು. ೨ ತಿಂಗಳು ವಿರಾಮಾವಧಿ ಇರುತ್ತದೆ. ಹೊಸ ಸ್ವರ್ಣಿಮಾ ಯೋಜನೆ: ಮಹಿಳೆಯರು ವೈಯಕ್ತಿಕವಾಗಿ ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಠ ರೂ. ೫೦,೦೦೦/-ಗಳ ವರೆಗೆ ವಾರ್ಷಿಕ ಶೇ. ೫.೦೦ ರ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುವುದು. ಫಲಾನುಭವಿ ವಂತಿಕೆ ಇರುವುದಿಲ್ಲ. ಸಾಲದ ಮರು ಪಾವತಿ ಅವಧಿ ೩ ವರ್ಷಗಳಗಿದ್ದು ೩೪ ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿಸಿ ಮರುಪಾವತಿಸಬೇಕು. ೨ ತಿಂಗಳು ವಿರಾಮಾವಧಿ ಇರುತ್ತದೆ. ನಿಗಮವು ಅನುಷ್ಟಾನ ಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಆಯಾ ಯೋಜನೆಗಳನುಸಾರ ಸಲ್ಲಿಸಬೇಕಾದ ದಾಖಲಾತಿಗಳು: ೧. ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ. ೨. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ೩. ವಿಳಾಸ ಧೃಡೀಕರಣಕ್ಕೆ ಪಡಿತರ ಚೀಟಿ/ಚುನಾವಣಾ ಗುರುತಿನ ಪತ್ರ/ಆಧಾರ್ ಕಾರ್ಡ್‌ನ ಪ್ರತಿ. ೪. ಪಾಸ್ ಪೋರ್ಟ್ ಅಳತೆಯ ೫ ಭಾವಚಿತ್ರಗಳು. ೫. ಸಾಲದ ಉದ್ದೇಶದ ಅನುಭವದ ಮತ್ತು ಘಟಕ ಸ್ಥಾಪಿಸುವ ಸ್ಥಳದ ಬಗ್ಗೆ ಸ್ವಯಂ ಘೋಷಣೆ. ೬. ಅರ್ಜಿದಾರರು ಸ್ತಳೀಯ ಬ್ಯಾಂಕು/ ಹಣಕಾಸು ಸಂಸ್ಥೆಗಳಲ್ಲಿ ಸಾಲ ಹೊಂದಿಲ್ಲದಿರುವುದಕ್ಕೆ ಬೇಬಾಕಿ ಪತ್ರ. ೭. ಅರ್ಜಿದಾರನಿಂದ ಆಸ್ತಿ ಮತ್ತು ಋಣಭಾರದ ಸ್ವಯಂ ಘೋಷಣೆ. ೮. ಸಾಲದ ಭದ್ರತೆಗೆ ಅರ್ಜಿದಾರರು ಒದಗಿಸುವ ಜಾಮೀನುದಾರರ ಒಪ್ಪಿಗೆ ಪತ್ರ ಮತ್ತು ಆಸ್ತಿ ಋಣಭಾರದ ಸ್ವಯಂ ಘೋಷಣೆ. ೯. ವಾಹನ ಸಾಲ ಪಡೆಯಲು ಅಭ್ಯರ್ಥಿ ಹೊಂದಿರುವ ವಾಹನ ಪರವಾನಿಗೆ/ ಡ್ರೈವಿಂಗ್ ಲೈಸೆನ್ಸ್ ಪ್ರತಿ. ೧೦. ಸಾಂಪ್ರದಾಯಿಕ ವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ಅರ್ಜಿದಾರರ ಸ್ವಯಂ ಘೋಷಣೆ. ೧೧. ಸಾಲದ ಭದ್ರತೆಗೆ ಜಾಮೀನು ನೀಡುವವರು ಸರ್ಕಾರೀ ನೌಕರರಾಗಿದ್ದರೆ ಸೇವಾವಧಿ ಧೃಡೀಕರಣ ಮತ್ತು ವೇತನ ಧೃಡೀಕರಣ ಪತ್ರ. ೧೨. ರೂ. ೫೦,೦೦೦/- ಕ್ಕಿಂತ ಹೆಚ್ಚಿನ ಸಾಲದ ಭದ್ರತೆಗೆ ನಿಗಮಕ್ಕೆ ಸ್ಥಿರಾಸ್ತಿಯನ್ನು ನೋಂದಾಯಿಸಿ ಆಧಾರ ಮಾಡಬೇಕು. ಅರ್ಜಿದಾರರು/ ಜಾಮೀನುದಾರರು ಹೊಂದಿರುವ ಸ್ಥಿರಾಸ್ತಿಯ ಕಂದಾಯ ದಾಖಲೆಗಳು. ೧೩. ಫಲಾನುಭವಿಯು ಬ್ಯಾಂಕಿನಲ್ಲಿ ಹೊಂದಿರುವ ಖಾತೆಯ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಬ್ಯಾಂಕ್ ಅಕೌಂಟ್ ನಂ., ಐ.ಎಫ಼್.ಎಸ್.ಸಿ. ಸಂಖೆ ಪ್ರಮುಖವಾದದ್ದು. ೧೪. ಶೈಕ್ಷಣಿಕ ಸಾಲ ಯೋಜನೆಗೆ ವಿಧ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ವ್ಯಾಸಂಗ ಧೃಡೀಕರಣ ಪತ್ರ,ಸಿ.ಇ. ಟಿ. ಪತ್ರ, ಎಕ್ಸ್ಪೆಂಡೇಚರ್ ಪತ್ರ. ೧೫. ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲು ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಈಗಾಗಲೇ ಯಾವುದೇ ಮೂಲಗಳಿಂದ ನೀರಾವರಿ ಸೌಲಭ್ಯವನ್ನು ಹೊಂದಿರಬಾರದು ಮತ್ತು ನಿಗಮದಿಂದ ಈ ಹಿಂದೆ ಪ್ರಯೋಜನ ಪಡೆದಿರಬಾರದು. ೧೬. ಗಂಗಾ ಕಲ್ಯಾಣ ಯೋಜನೆಯಲ್ಲಿ ಏತ ನೀರಾವರಿ ಯೋಜನೆಗೆ ಭೂಮಟ್ಟದಲ್ಲಿ ದೊರೆಯುವ ನೀರನ್ನು ಬಳಕೆ ಮಾಡಲು ನೀರಾವರಿ ಇಲಾಖೆಯಿಂದ ನೀಡಿದ ನೀರಿನ ಬಳಕೆ ಅನುಮತಿ ಪತ್ರ. ೧೭. ನಿಗಮದಿಂದ ಈಗಾಗಲೇ ಯಾವುದೇ ಯೋಜನೆಗಳಲ್ಲಿ ಸೌಲಭ್ಯವನ್ನು ಪಡೆದಿಲ್ಲವೆಂದು ಅರ್ಜಿದಾರರ ಸ್ವಯಂ ಘೋಷಣೆ. ನಿಗಮವು ಅನುಷ್ಟಾನ ಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಪಲಾನುಭವಿಗಳ ಆಯ್ಕೆ ಮತ್ತು ಮಂಜೂರಾತಿ ವಿಧಾನ: ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿ ಮೂಲಕ: ನಿಗಮವು ಅನುಷ್ಟಾನ ಗೊಳಿಸುತ್ತಿರುವ ಗಂಗಾ ಕಲ್ಯಾಣ ನೀರಾವರಿ ಯೋಜನೆ, ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಕಿರು ಸಾಲ ಯೋಜನೆಗಳ ಪಲಾನುಭವಿಗಳನ್ನು ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಿರುವ ವಿಧಾನಸಭಾ ಕ್ಷೇತ್ರದ ಆಯ್ಕೆ ಸಮಿತಿಯು ಆಯ್ಕೆಮಾಡುವುದು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿ ಮೂಲಕ: ಚೈತನ್ಯ ಸಬ್ಸೀಡಿ ಕಂ ಸಾಪ್ಟ್ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ರಾಷ್ತ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮದ ಯೋಜನೆಗಳ ಪಲಾನುಭವಿಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯು ಮೂಲಕ ಆಯ್ಕೆಮಾಡುವುದು. ಸರ್ಕಾರದ ಪ್ರದಾನ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಿದ ಆಯ್ಕೆ ಸಮಿತಿಯ ಮೂಲಕ : ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಸಲುವಾಗಿ ಪಲಾನುಭವಿಗಳನ್ನು ಸರ್ಕಾರದ ಪ್ರದಾನ ಕಾರ್ಯದರ್ಶಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿಸಿದ ಆಯ್ಕೆ ಸಮಿತಿಯು ಆಯ್ಕೆಮಾಡುವುದು. ಸೂಚನೆ: ಸರ್ಕಾರದ ನೂತನ ಯೋಜನೆಗಳು ಮತ್ತು ಬದಲಾದ ಆದೇಶಗಳಿಗಾಗಿ, ಮಾರ್ಗಸೂಚಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ದಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ (ಡಿ.ಬಿ.ಸಿ.ಡಿ.ಸಿ.) ಕಛೇರಿ ಅಥವಾ ಜಿಲ್ಲಾ ಕಛೇರಿಯನ್ನು ಸಂಪರ್ಕಿಸುವುದು. ವ್ಯವಸ್ಥಾಪಕ ನಿರ್ದೇಶಕರು,ದಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ (ಡಿ.ಬಿ.ಸಿ.ಡಿ.ಸಿ.),ದೇವರಾಜ್ ಅರಸು ಭವನ, ನಂ. ೧೬/ಡಿ, ೪ನೇ ಮಹಡಿ, ಮಿಲ್ಲರ್ಸ್ ಟ್ಯಾಂಕ್ ಬಂಡ್ ಏರಿಯಾ, ವಸಂತ ನಗರ, ಬೆಂಗಳೂರು-೫೬೦ ೦೫೨. ದೂ:೦೮೦-೨೨೩೭೪೮೩೨, ೨೨೩೭೪೮೩೩. ಫ಼್ಯಾಕ್ಸ್: ೦೮೦-೨೨೩೭೪೮೩೩. ರಾಷ್ತ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ದಿ ನಿಗಮ (ಎನ್.ಬಿ.ಸಿ.ಎಫ಼್.ಡಿ.ಸಿ.) ನಂ: ೩, ಸಿರಿ ಇಸ್ಟಿಟ್ಯೂಷನಲ್ ಏರಿಯಾ, ಆಗಷ್ಟ್ ಕ್ರಾಂತಿ ಮಾರ್ಗ, ನವದೆಹಲಿ-೧೧೦ ೦೧೬. ದೂ:೦೧೧-೨೬೫೧೧೦೨೭, ೨೬೫೧೧೦೨೮. ಫ಼್ಯಾಕ್ಸ್: ೦೧೧-೨೬೮೫೦೦೮೬. ಜಿಲ್ಲಾ ವ್ಯವಸ್ಥಾಪಕರು, ದಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ (ಡಿ.ಬಿ.ಸಿ.ಡಿ.ಸಿ.), ಬೆಂಗಳೂರು ನಗರ/ ಗ್ರಾಮಾಂತರ ಜಿಲ್ಲೆ, ನಂ: ೧೨೩/೧೦೩೭, ೧ನೇ ಮಹಡಿ, ೨೦ನೇ ಮುಖ್ಯ ರಸ್ತೆ, ೫ನೇ ಬ್ಲಾಕ್, ವೆಸ್ಟ್ ಆಫ಼್ ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು-೫೬೦ ೦೧೦. ದೂ:೦೮೦-೨೩೧೫೬೦೦೬. ಜಿಲ್ಲಾ ವ್ಯವಸ್ಥಾಪಕರು, ದಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ (ಡಿ.ಬಿ.ಸಿ.ಡಿ.ಸಿ.), ಜಿಲ್ಲಾ ಪಂಚಾಯತ್ ಕಛೇರಿ ಮುಂಭಾಗ, ಬಿ. ಹೆಚ್. ರಸ್ತೆ, ತುಮಕೂರು-೫೭೨ ೧೦೪. ದೂ:೦೮೧೬-೨೨೮೧೪೧೨ ಜಿಲ್ಲಾ ವ್ಯವಸ್ಥಾಪಕರು, ದಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ (ಡಿ.ಬಿ.ಸಿ.ಡಿ.ಸಿ.), ಜಿಲ್ಲಾ ಪಂಚಾಯತ್ ಕಛೇರಿ ಆವರಣ, ೧ನೇ ಬ್ಲಾಕ್, ೧ನೇ ಮಹಡಿ, ಕೋಲಾರ-೫೬೩ ೧೦೧. ದೂ:೦೮೧೫೨-೨೨೪೦೫೨೬ |