ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ೧೯೪೩ ರಲ್ಲಿ "ದಾನ ರತ್ನಾಕರ" ಪೂಜ್ಯ ಶ್ರೀ ದಿ|| ಮಂಡಿ ಹರಿಯಣ್ಣ, ಆಗಿನ ಮೈಸೂರು ಪ್ರಜಾಪ್ರತಿನಿಧಿ ಸಭೆ ಯ ನಿರ್ದೇಶಕರು ಸಂಸ್ಥಾಪಿಸಿದರು. ದಿ|| ಮಂಡಿ ಹರಿಯಣ್ಣನವರು ೧೯೧೬ ರಲ್ಲೇ ಬೆಂಗಳೂರಿನಲ್ಲಿ ಉಚಿತವಾಗಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದ್ದರು. ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಂಘವು ಯಶಸ್ವಿಯಾಗಿ 75 ವರ್ಷಗಳನ್ನು ಪೂರೈಸಿದೆ.......
ಹಿಂದೂ ಸಾದರು ಮತವು ಅತ್ಯಂತ ಪ್ರಾಚೀನವಾದದ್ದಾಗಿದ್ದು, ಸಾದರು ಎಂಬ ಪದ "ಸಾಧು" ಎಂಬ ಸಂಸ್ಕೃತ ಪದದಿಂದ ಹುಟ್ಟಿರುವುದು ಎಂದು ಸುಮಾರು ೬೦೦ ವರ್ಷಗಳ ಹಿಂದಿನ ಶಾಸನಗಳಿಂದ ತಿಳಿದುಬರುತ್ತದೆ. ಸಾದು ಜನಾಂಗವು ಕೇವಲ ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳುನಾಡಿನ ಹೊಸೂರು ಭಾಗಗಳಲ್ಲಿ ಕೇಂದ್ರೀಕೃತವಾಗಿದೆ. ಸಾದರು ಎಂದರೆ ಸನ್ನಡತೆ ಉಳ್ಳವರು, ಸಚ್ಚಾರಿತ್ರದವರು, ಸದಾಚಾರ ಸಂಪನ್ನರು, ಸತ್ಕಾರ್ಯಗಳಲ್ಲಿ ತೊಡಗುವವರು, ಶ್ರದ್ಧಾವಂತರು, ಸರ್ವಜನ ಹಿತ ಆಕಾಂಕ್ಷಿಗಳು ಎಂದು ಅರ್ಥೈಸಲಾಗುವುದು. ಸುಸಂಸ್ಕೃತ ಮತ್ತು ಸೌಮ್ಯ ಸ್ವಭಾವದ ಸಾದು ಜನಾಂಗ ಮತ ಮತ್ತು ಧರ್ಮಸಹಿಷ್ಣುತೆ ಹೊಂದಿರುವವರಾಗಿದ್ದು ಅಹಿಂಸಾಪರರು ಹಾಗೂ ಸಸ್ಯಹಾರಿಗಳಾಗಿದ್ದು ಕೊಡಿಗೈ ದಾನಕ್ಕೆ ಹೆಸರುವಾಸಿ. ಹಿಂದೂ ಸಾದರು ಪೂರ್ವ ಕಾಲದಿಂದಲೂ ದೇವಾನು ದೇವತೆಗಳಾದ ರಾಮ-ಸೀತೆ, ಹನುಮಂತ, ಈಶ್ವರ, ವಿಘ್ನೇಶ್ವರ, ಕೃಷ್ಣ, ಕೇಶವ, ಹರಿಹರ, ರಂಗನಾಥ, ತಿರುಪತಿ ತಿಮ್ಮಪ್ಪ ಸ್ವಾಮಿ ಯವರ ಆರಾಧಕರಾಗಿದ್ದು ಶಕ್ತಿ ದೇವತೆಗಳಾದ ಚೌಡಮ್ಮ,ಚಾಮುಂಡಿ,ಬನಶಂಕರಿ, ವೀರನಾಗಮ್ಮ ಮತ್ತು ಮಾರಮ್ಮನನ್ನು ಪೂಜಿಸುತ್ತಾರೆ. ಸಾದರು ಪ್ರಮುಖವಾಗಿ ಕರ್ನಾಟಕದಲ್ಲಿ ಸುಮಾರು ೨.೫೦ ಲಕ್ಷದಷ್ಟಿದ್ದು, ಆಂದ್ರದಲ್ಲಿ ಸುಮಾರು ೨೫ ಸಾವಿರ ಮತ್ತು ಇತರೆಡೆ ೧೨ ಸಾವಿರ ಜನಸಂಖ್ಯೆ ಇದೆ. ಸಾದರು ಪಾರಂಪರಿಕವಾಗಿ ವ್ಯವಸಾಯವನ್ನು ಮುಖ್ಯ ಕಸುಬಾಗಿ ಅವಲಂಬಿಸಿದ್ದಾರೆ. ಸಾದರು ಒಂದು ಜಾತಿಯಾಗಿ ದೇಶದ ವಿವಿಧ ಭಾಗಗಳಲ್ಲಿ ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ: ಕರ್ನಾಟಕದಲ್ಲಿ ಗಂಕಾರ್, ಸಾದು ಗೌಡ್ರು ಅಥವಾ ಯಜಮಾನ್ (ಹಳ್ಳಿಯ ಮುಖ್ಯಸ್ಥ) ಎಂತಲೂ, ಆಂದ್ರಪ್ರದೇಶದ ಕೆಲವು ಭಾಗಗಳಲ್ಲಿ ಜಮೀನ್ದಾರ್ ಎಂದೂ ತಮಿಳುನಾಡು-ಕರ್ನಾಟಕ ಸರಹದ್ದಿನಲ್ಲಿ ಪಟೇಲ್ (ಹಳ್ಳಿಯ/ದೇವಸ್ಥಾನದ ಮುಖ್ಯಸ್ಥ) ಎನ್ನಲಾಗುತ್ತದೆ. ಮೈಸೂರು ಅರಸರ ಆಡಳಿತದ ಅವದಿಯಲ್ಲಿ ಹಳ್ಳಿಗಳನ್ನು ಆಳುವ, ದೇವತಾ ಕಾರ್ಯಗಳನ್ನು ಸುಸೂತ್ರವಾಗಿ ಮುನ್ನಡೆಸುವ ಗೌಡಿಕೆಯ ಜವಾಬ್ದಾರಿಯನ್ನು ಸಾದರು ನಿಭಾಯಿಸುತ್ತಿದ್ದರು. ಇಂದು ಸಾದರ ಜನಾಂಗದ ಒಟ್ಟು ಜನಸಂಖ್ಯೆ ಸುಮಾರು 4 ಲಕ್ಷದಷ್ಟಿದ್ದು, ಪ್ರಮುಖವಾಗಿ ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ (ಗೌರಿಬಿದನೂರು ತಾ.), ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಾಗೂ ಆಂದ್ರಪ್ರದೇಶದ ಅನಂತಪುರ ಮತ್ತು ತಮಿಳುನಾಡಿನ ಹೊಸೂರು ಭಾಗಗಳಲ್ಲಿ ಹರಡಿಕೊಂಡಿದೆ. ಹಿಂದೂ ಸಾದರು ಒಂದು ಹಿಂದುಳಿದ ಮತ್ತು ಅತ್ಯಂತ ಅಲ್ಪಸಂಖ್ಯಾತ ಸಮಾಜ ವಾಗಿದ್ದು, ಬಹುತೇಕ ಹಳ್ಳಿಗಾಡಿನಲ್ಲೇ ನೆಲೆಗೊಂಡಿರುತ್ತಾರೆ. ಇತ್ತೀಚಿನ ಯುವ ಪೀಳಿಗೆ ವಿದ್ಯಾರ್ಜನೆಗೆ ಹೆಚ್ಚು ಒತ್ತು ನೀಡುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದ ಸಾಧಕರನ್ನು ಕಾಣಬಹುದಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಸಮಾಜವನ್ನು ಮುಖ್ಯವಾಹಿನಿಗೆ ತರುವ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸುವ ಕಾರ್ಯದಲ್ಲಿ ಸಂಘ ಶ್ಲಾಘನೀಯ ಹೆಜ್ಜೆಗಳನ್ನಿಡಿತ್ತಿದೆ.
ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ (ರಿ)
(A Registered Community organisation serving for Hindu Sadaru)
Hindu Sadara Kshemabhivruddi Sangha (R)
#೫ಎ, ೪ನೇ ’ಎ’ ಮುಖ್ಯ ರಸ್ತೆ, ೨ನೇ ಹಂತ, ಪಶ್ಚಿಮ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರಂ ಲೇ ಔಟ್ (ಅಂಚೆ), ಬೆಂಗಳೂರು-೫೬೦ ೦೮೬.
# 5A, 12th B Main Road, 4th A Cross, West of Chord Road, Mahalakshmipuram, Bangalore-560 086
Web site: www.hindusadarasangha.in, E-mail:
This e-mail address is being protected from spambots. You need JavaScript enabled to view it
Phone: 080- 23490073, Mobile: +91- 9481940073
|